ತಂದೆಯಿಂದಲೇ ಅಚಾತುರ್ಯ – ಆಟವಾಡುತ್ತಿದ್ದ ಮಗುವಿನ ಮೇಲೆ ಈಚರ್ ವಾಹನ ಹರಿದು ಸಾವು

Advertisements

ಬೆಂಗಳೂರು: ಇಟ್ಟಿಗೆ ತುಂಬಿದ್ದ ಈಚರ್ ವಾಹನವನ್ನು ಹಿಂದಕ್ಕೆ ತೆಗೆಯುತ್ತಿದ್ದ ಸಂದರ್ಭ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದಿದೆ. ಪರಿಣಾಮ ಕಂದಮ್ಮ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಕಾಮನಹಳ್ಳಿ ಸಮೀಪದ ಗೋಣಿಘಟ್ಟಪುರದಲ್ಲಿ ನಡೆದಿದೆ.

Advertisements

ಒಂದೂವರೆ ವರ್ಷದ ಮೊನಿಶಾ ದೇವಿ ಮೃತ ಮಗು. ಸ್ವತಃ ಮಗುವಿನ ತಂದೆ ಬಾಲಕೃಷ್ಣ ಅವರೇ ವಾಹನವನ್ನು ಹಿಂದಕ್ಕೆ ಚಲಾಯಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: 1,107 ಮಂದಿ ಡಿಸ್ಚಾರ್ಜ್ – 1,562 ಕೊರೊನಾ ಪತ್ತೆ

Advertisements

ಗೋಣಿಘಟ್ಟಪುರ ಗ್ರಾಮದಲ್ಲಿರುವ ದಿಲೀಪ್ ಅವರಿಗೆ ಸೇರಿದ ಹಾಲೋಬ್ಲಾಕ್ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕೃಷ್ಣ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಅಲ್ಲಿಯೇ ವಾಸವಾಗಿದ್ದ. ಬೆಳಗ್ಗೆ ಮನೆಯ ಬಳಿ ಮೊನಿಶಾ ದೇವಿ ಆಟವಾಡುತ್ತಿರುವುದನ್ನು ಗಮನಿಸದ ತಂದೆ ಬಾಲಕೃಷ್ಣ ಗಾಡಿಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಸಂಧರ್ಭ ಮಗುವಿನ ಮೇಲೆ ಹರಿಸಿದ್ದಾನೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್ ಭೀತಿ – ಆತಂಕ ಹೆಚ್ಚಿಸಿದ ಆಫ್ರಿಕನ್ ಹಂದಿಜ್ವರ

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಬೆಳ್ಳಂದೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಸರ್ಜಾಪುರ ಪೋಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

Advertisements

Live Tv

Advertisements
Exit mobile version