Connect with us

Chikkamagaluru

ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು

Published

on

– ಸಾವಿನಲ್ಲೂ ಒಂದಾದ ದಂಪತಿ

ಚಿಕ್ಕಮಗಳೂರು: ಪತಿಯ ಸಾವಿನ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಪತ್ನಿಯೂ ಸಾವನ್ನಪ್ಪಿರೋ ಅಪರೂಪದ ಘಟನೆ ತಾಲೂಕಿನ ಕಳಸಾಪುರ ಸಮೀಪದ ಗಾಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೊಡ್ಡ ರಾಜಣ್ಣ(84) ಹಾಗೂ ರುದ್ರಮ್ಮ(74) ಮೃತ ದುರ್ದೈವಿಗಳು. ಮೃತ ದೊಡ್ಡ ರಾಜಣ್ಣರಿಗೆ ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸರಿ ಇರಲಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಕೂಡ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆಗೆ ಕರೆತಂದಾಗ ಅವರನ್ನ ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿದ್ದಾರೆಂಬುದನ್ನು ಸ್ಪಷ್ಟಪಡಿಸಿದ್ದಾರೆ.

ರಾಜಣ್ಣ ಸಾವನ್ನಪ್ಪಿರುವ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾರೆ. ಪತಿ ತೀರಿಕೊಂಡ ಸುದ್ದಿ ತಿಳಿದ ರುದ್ರಮ್ಮ ನೋವಿನಿಂದ ಗೋಳಾಡಿದ್ದಾರೆ. ಈ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದೊಂದು ವಾರದಿಂದ ಮೃತ ರುದ್ರಮ್ಮ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ನಿನ್ನೆ ಗಂಡನ ಸಾವಿನ ಸುದ್ದಿ ಕೇಳಿ ಅವರೂ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಗೆ ಹೋಗಿದ್ದ ಪತಿಯ ಮೃತದೇಹ ಮನೆಗೆ ಬರುವ ಮುಂಚೆಯೇ ಪತ್ನಿ ಕೂಡ ಸಾವನ್ನಪ್ಪಿದ್ದಾರೆ. ಇಬ್ಬರು ವೃದ್ದರನ್ನು ಕಳೆದುಕೊಂಡ ಕುಟುಂಬಸ್ಥರಲ್ಲಿ ನೋವು ಮಡುಗಟ್ಟಿದೆ. ದಂಪತಿ ಅಂತ್ಯಕ್ರಿಯೆಯನ್ನ ಒಟ್ಟಿಗೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. 60 ವರ್ಷಗಳ ಕಾಲ ಸುದೀರ್ಘ ದಾಂಪತ್ಯ ಜೀವನ ನಡೆಸಿದ ಪತಿ-ಪತ್ನಿ ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in