Connect with us

Chikkamagaluru

ಅಣ್ಣಾಮಲೈ ಜೊತೆ ಸೆಲ್ಫಿಗೆ ಮುಗಿಬಿದ್ದ ಪೊಲೀಸರು, ಯುವಕ- ಯುವತಿಯರು!

Published

on

ಚಿಕ್ಕಮಗಳೂರು: ನಿವೃತ್ತ ಐಪಿಎಸ್ ಅಣ್ಣಾಮಲೈ ಜೊತೆ ಪೊಲೀಸರು ಹಾಗೂ ಜನಸಾಮಾನ್ಯರು ಸೆಲ್ಫಿಗೆ ಮುಗಿಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ನಡೆದಿದೆ.

ಕುದುರೆಗುಂಡಿ ಬಳಿ ಇಂದು ದಿ.ಸಿದ್ಧಾರ್ಥ್ ಹೆಗಡೆ ಪ್ರತಿಮೆ ಅನಾವರಣ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಐಪಿಎಸ್ ಅಣ್ಣಾಮಲೈ ಭಾಗಿಯಾಗಿದ್ದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನ ಅಣ್ಣಾಮಲೈ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಸರ್ ಒಂದ್ ಸೆಲ್ಫಿ ಅಂತ ಜನರು ಕೂಡ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟಿದ್ದಾರೆ. ಅಲ್ಲದೆ ಯುವಕ-ಯುವತಿಯರು ಅಂತೂ ಕಾಡಿ-ಬೇಡಿ ಫೋಟೋ ತೆಗೆಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸೆಲ್ಫಿಗೆ ಪೋಸ್ ಕೊಟ್ಟು ಅಣ್ಣಾಮಲೈ ಸುಸ್ತಾಗಿ ಬಿಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *