Chikkamagaluru
ಕಲ್ಲಿನಿಂದ ಜಜ್ಜಿ ತಂದೆಯನ್ನೇ ಬರ್ಬರವಾಗಿ ಕೊಂದ ಪಾಪಿ ಪುತ್ರ

ಚಿಕ್ಕಮಗಳೂರು: ಮಗನೇ ತನ್ನ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಾಚಗೊಂಡನಹಳ್ಳಿಯಲ್ಲಿ ನಡೆದಿದೆ.
ತಮ್ಮೇಗೌಡ (70) ಮೃತ ದುರ್ದೈವಿಯಾಗಿದ್ದು, ಇವರು ಕ್ಲುಲ್ಲಕ ವಿಚಾರಕ್ಕೆ ಮಗನಿಂದಲೇ ಕೊಲೆಯಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮಗ ಸತೀಶ್ ನನ್ನು ಬಂಧಿಸಿದ್ದಾರೆ.
ಪುತ್ರ ಸತೀಶ್ ಖಾಸಗಿ ಬ್ಯಾಂಕಿನಿಂದ ಟ್ರ್ಯಾಕ್ಟರ್ಗೆ ಸಾಲ ಪಡೆದಿದ್ದ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದಿದ್ದರು. ಹೀಗಾಗಿ ತಂದೆ ತಮ್ಮೇಗೌಡ ಪುತ್ರನನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಪುತ್ರ ಅಪ್ಪನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಘಟನೆ ಸಂಬಂಧ ಸಖರಾಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
