Connect with us

Chikkaballapur

ಸಿಮ್ ಟೂಲ್ಸ್ ಸಂಸ್ಥೆಯಿಂದ ಪಬ್ಲಿಕ್ ಟಿವಿ ಜ್ಞಾನದೀವಿಗೆ ಟ್ಯಾಬ್ ವಿತರಣೆ

Published

on

– 3 ಶಾಲೆಯ 139 ಮಂದಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಆರಂಭವಾಗಿರುವ ‘ಜ್ಞಾನದೀವಿಗೆ’ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದ್ದು, ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಜ್ಯೂನಿಯರ್ ಕಾಲೇಜು ಪ್ರೌಢ ಶಾಲೆ, ಚನ್ನಹಳ್ಳಿ ಶಾಲೆ ಸೇರಿದಂತೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಯಿತು.

ದೇವನಹಳ್ಳಿ ಜ್ಯೂನಿಯರ್ ಕಾಲೇಜು ಪ್ರೌಢಶಾಲೆಯ 140 ಮಕ್ಕಳಿಗೆ 70 ಟ್ಯಾಬ್, ಚನ್ನಹಳ್ಳಿ ಶಾಲೆಯ 42 ವಿದ್ಯಾರ್ಥಿಗಳಿಗೆ 21 ಟ್ಯಾಬ್ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ 96 ಮಂದಿ ವಿದ್ಯಾರ್ಥಿಗಳಿಗೆ 48 ಟ್ಯಾಬ್ ಗಳನ್ನ ವಿತರಿಸಲಾಯಿತು. ಟ್ಯಾಬ್ ಗಳನ್ನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಉಮೇಶ್, ಸಿಮ್ ಟೂಲ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಏರ್ ಬಸ್ ಗೆ ಅಳವಡಿಸುವ ಉತ್ಪಾದನಾ ಸಂಸ್ಥೆಯಾಗಿದ್ದು, ಸಂಸ್ಥೆಯ ಸಿಎಸ್‍ಆರ್ ಅನುದಾನದಡಿ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳನ್ನ ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಪಬ್ಲಿಕ್ ಟಿವಿ ರೂಪಿಸಿದ ಜ್ಞಾನದೀವಿಗೆ ಕಾರ್ಯಕ್ರಮ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಉಪಯುಕ್ತವಾದದ್ದಾಗಿದೆ. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್ ರಂಗನಾಥ್ ರವರಿಗೆ ಕಾರ್ಯಕ್ರಮ ರೂಪಿಸಿ ತಮಗೆ ಈ ಅಳಲು ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಸಿಮ್ ಟೂಲ್ಸ್ ಸಂಸ್ಥೆಯ ಮ್ಯಾನೇಜರ್ ಉಮೇಶ್, ಡಿಜಿಎಂ ಕೃಷ್ಣ, ಸಂಸ್ಥೆಯ ಪ್ರದೀಪ್, ಹರಿಯಪ್ಪ, ವಿನಯ್ ಭಾಗವಹಿಸಿದ್ರು. ಟ್ಯಾಬ್ ಗಳನ್ನ ಕೊಡುಗೆ ನೀಡಿದ ಸಿಮ್ ಟೂಲ್ಸ್ ಸಂಸ್ಥೆ ಹಾಗೂ ಪಬ್ಲಿಕ್ ಟಿವಿಗೆ ಶಾಲೆಯ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

Click to comment

Leave a Reply

Your email address will not be published. Required fields are marked *