Connect with us

Chikkaballapur

ಸಿಡಿ ಲೇಡಿಗೆ ಮೆಂಟಲ್ ಮೆಡಿಕಲ್ ಟೆಸ್ಟ್ ಆಗಬೇಕು: ನಾರಾಯಣ ಗೌಡ

Published

on

– ಸತ್ಯಾಂಶ ಇದ್ರೆ ನಮ್ಮ ಸಿಡಿನೂ ಬಿಡುಗಡೆ ಮಾಡ್ಲಿ

ಚಿಕ್ಕಬಳ್ಳಾಪುರ: ಸಿಡಿ ಲೇಡಿಗೆ ಮೆಂಟಲ್ ಮೆಡಿಕಲ್ ಟೆಸ್ಟ್ ಆಗಬೇಕು ಎಂದು ಸಚಿವ ನಾರಾಯಾಣಗೌಡ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸಿದ್ದ ಸಚಿವರು ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ನ್ಯಾಯಾಧೀಶರ ಮುಂದೆ ಹಾಜರಾದ ಸಿಡಿ ಲೇಡಿ ಹೇಳಿಕೆ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಹೆಣ್ಣು ಮಗಳ ಹೇಳಿಕೆ ಹೊರಗೆ ಬಂದಿಲ್ಲ. ಆ ಹೆಣ್ಣು ಮಗಳು ಕನ್ಫ್ಯೂಸ್ ನಲ್ಲಿದ್ದಾಳೆ. ಒಂದೊಂದು ದಿನ ಒಂದೊಂದು ತರ ಹೇಳಿಕೆ ಕೊಡ್ತಿದ್ದಾಳೆ. ಹಾಗಾಗಿ ಆಕೆಗೆ ಕೂಲ್ ಅಗಿ ಮೆಂಟಲ್ ಚೆಕ್ ಅಪ್ ಮಾಡಿಸಬೇಕಿದೆ ಎಂದು ಹೇಳಿದ್ದಾರೆ.

ಮೆಡಿಕಲ್ ಚೆಕ್ ಅಪ್ ಅದ ಮೇಲೆ ಸತ್ಯಾಂಶ ಗೊತ್ತಾಗಲಿದೆ. ಈಗಾಗಲೇ ಎಫ್‍ಐಆರ್ ದಾಖಲಾಗಿದ್ರೂ ನಾಳೆ ಹೇಳಿಕೆ ಬದಲಾಗಬಹುದು. ಆಕೆ ಮೊದಲು ಮೆಂಟಲಿ ಫಿಟ್ ಇದ್ದಾಳಾ ಇಲ್ವಾ ಅನ್ನೋದು ಸಹ ಮುಖ್ಯ ತಾನೆ ಅಂತ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ್ದ ಸಚಿವರು, ಸಿ.ಡಿ ವಿಚಾರದಲ್ಲಿ ಯಾರ್ಯಾರು ಏನೇನು ಮಾಡಿದ್ದಾರೋ ಅದರಷ್ಟೇ ಊಟ ಮಾಡ್ತಾರೆ. ಉಪಚುನಾವಣೆ ಮೇಲೆ ಸಿಡಿ ಪ್ರಕರಣದ ಪ್ರಭಾವ ಬೀರೋಲ್ಲ. ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಇದೇ ವೇಳೆ ಆರು ಜನ ಸಚಿವರ ಕೋರ್ಟ್ ಮೆಟ್ಟೇಲೇರಿ ತಂದ ತಡೆಯಾಜ್ಞೆ ಇಂದಿಗೆ ಅಂತ್ಯ ಹಿನ್ನೆಲೆ ಅದಕ್ಕೆ ಪ್ರತಿಕ್ರಿಯಸಿ, ಅದರ ಬಗ್ಗೆ ನಮಗೇನು ತೊಂದರೆ ಇಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದರೆ ಚರಂಡಿ ಗಲೀಜು ಬೀಳುತ್ತೆ ಅಂತ ಹೈಕೋರ್ಟಿಗೆ ಹೋಗಿದ್ವಿ. ಈಗಲೂ ಸತ್ಯಾಂಶ ಇದ್ರೆ ನಮ್ಮ ಸಿಡಿನೂ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

ರಮೇಶ್ ಜಾರಕಿಹೊಳಿ ಅವಿತುಕೊಂಡಿಲ್ಲ. ಕೆಲಸ ಕಾರ್ಯಕ್ಕೆ ಅಂತ ಮಹಾರಾಷ್ಟ್ರಕ್ಕೆ ಹೋಗಿ ಬರ್ತಾರೆ. ಅವರಿಗೆ ಬಂಧನದ ಭೀತಿ ಇಲ್ಲ, ಅವಿತುಕೊಳ್ಳುವ ಪ್ರಶ್ನೆ ಯೇ ಇಲ್ಲ ಎಂದರು.

Click to comment

Leave a Reply

Your email address will not be published. Required fields are marked *