Chikkaballapur
ಮತದಾರರಿಗೆ ಸಿಹಿ ಹಂಚಿದ ಸೋತ ಅಭ್ಯರ್ಥಿ..!

ಚಿಕ್ಕಬಳ್ಳಾಪುರ: ಗೆದ್ದ ಬಳಿಕ ಖುಷಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಸೋತ ಬಳಿಕವೂ ಮತದಾರರಿಗೆ ಸಿಹಿ ಹಂಚುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು. ಗೌರಿಬಿದನೂರು ತಾಲೂಕಿನ ಗಂಗಸಂದ್ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಿಂದ ಸಿಹಿ ಹಂಚಿಕೆ ಮಾಡಲಾಗಿದೆ. ವಿಶೇಷ ಅಂದ್ರೆ ಪರಾಜಿತ ಅಭ್ಯರ್ಥಿ ಸುನಿಲ್ ಕುಮಾರ್ ಅವರು ಮನೆ ಮನೆಗೆ ತೆರಳಿ ಮತದಾರರಿಗೆ ಸಿಹಿ ಪಾಕೆಟ್ ಹಂಚಿದ್ದಾರೆ.
ಸುನೀಲ್ ಕುಮಾರ್ ಅವರು ಈ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೇವಲ 2 ಮತಗಳ ಅಂತರದಿಂದ ಸೋಲನುಭವಿಸಿದ್ದರು.
