ನಿಸರ್ಗದ ಮಡಿಲಲ್ಲಿ ದಿಗಂತ್-ಐಂದ್ರಿತಾ ಕಲ್ಯಾಣ

ಚಿಕ್ಕಬಳ್ಳಾಪುರ: ಚಂದನವನದ ತಾರಾಜೋಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ವಿವಾಹಕ್ಕೆ ದಿನಗಣನೆ ಶುರುವಾಗಿದೆ. ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಜೋಡಿ ಮದುವೆ ಆಗಲಿದೆ.

ದೂದ್ ಪೇಡಾ ದಿಗಂತ್ ಮತ್ತು ಬೆಂಗಾಲಿ ಬೆಡಗಿ ಐಂದ್ರಿತಾ ರೇ ಡಿಸೆಂಬರ್ 12 ಮತ್ತು 13ರಂದು ಎರಡು ಸಂಪ್ರದಾಯದಂತೆ ಹಸೆಮಣೆ ಏರಲಿದ್ದಾರೆ. ಕಂಕಣಬಲ-ಸಪ್ತಪದಿ ಕಾರ್ಯ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಿನ ಡಿಸ್ಕವರಿ ವಿಲೇಜ್‍ನಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ.

ಐಂದ್ರಿತಾ-ದಿಗಂತ್ ಕುಟುಂಬಸ್ಥರು ಡಿಸೆಂಬರ್ 10ರಿಂದ 13ರವರೆಗೂ ಇಡೀ ರೆಸಾರ್ಟ್ ಅನ್ನು ಸಂಪೂರ್ಣವಾಗಿ ಬುಕ್ ಮಾಡಿಕೊಂಡಿದ್ದಾರೆ. ತಾರಾ ಜೋಡಿಯ ವಿವಾಹಕ್ಕೆ ಕೇವಲ ಕುಟುಂಬಸ್ಥರು-ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಅಂತ ಮಾಹಿತಿ ಲಭಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *