Crime
ಪ್ರೇಯಸಿಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡ ಪ್ರಿಯಕರ

– ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಪ್ರಿಯಕರ
ಚೆನ್ನೈ: ಪ್ರೀತಿಸುತ್ತಿದ್ದ ಹುಡುಗಿ ತನಗೆ ಸಿಗಲಿಲ್ಲ ಎಂದು ಕೋಪಗೊಂಡ ಯುವಕ ಗೆಳತಿ ಮತ್ತು ಆಕೆಯ ತಾಯಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಕೊರುಕ್ಕುಪೇಟೆಯ ರಂಜಿತಾ(26) ಹಾಗೂ ಭೂಪಾಲನ್(29) ಇಬ್ಬರು 7 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಆಕೆ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಬೇರೆ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ್ದಳು. ಇದರಿಂದ ಕೋಪಗೊಂಡ ಭೂಪಾಲನ್ ಆಕೆ ಮತ್ತು ಆಕೆಯ ತಾಯಿಗೆ ಬೆಂಕಿ ಹಚ್ಚಿ, ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭೂಪಾಲನ್ ಗೆಳತಿ ರಂಜಿತಾಳ ಮನೆಗೆ ಬಂದು ಆಕೆಯ ಜೊತೆ ಜಗಳವಾಡಿದ್ದಾನೆ. ನನ್ನಿಂದ ದೂರ ಇರು ಎಂದು ರಂಜಿತಾ ಹೇಳಿದ್ದಾಳೆ. ಆಕೆಯ ಮಾತಿನಿಂದ ನೊಂದಿದ್ದ ಭೂಪಾಲನ್ ಆಕೆಯ ಮನೆಯಲ್ಲೇ ಆಕೆಗೆ ಮತ್ತು ಆಕೆಯ ತಾಯಿಯ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾನೆ. ಬಳಿಕ ತನಗೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಂಜಿತಾ ತನ್ನಿಂದ ದೂರವಾಗುವುದನ್ನು ಸಹಿಸದ ಭೂಪಾಲನ್ ಆಕೆಯನ್ನು ಕೊಂದು, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ರಂಜಿತಾಳ ಮನೆಯಿಂದ ಜೋರಾದ ಗಲಾಟೆ, ಕಿರುಚಾಟ ಕೇಳಿ ಪಕ್ಕದ ಮನೆಯವರು ಬಂದು ನೋಡುವಷ್ಟರಲ್ಲಿ ರಂಜಿತಾ, ಆಕೆಯ ತಾಯಿ ಹಾಗೂ ಭೂಪಾಲನ್ ದೇಹ ಸುಟ್ಟುಹೋಗಿತ್ತು. ಮೂರೂ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
