ಪ್ರಿಯಕರನ ಜೊತೆ ಸೇರಿ ಮಾಜಿ ಪ್ರೇಮಿಯನ್ನ ಕೊಂದ ಪಿಎಚ್‍ಡಿ ವಿದ್ಯಾರ್ಥಿನಿ

Advertisements

ಚೆನ್ನೈ: ಪ್ರಿಯಕರನ ಜೊತೆ ಸೇರಿ ಮಾಜಿ ಪ್ರೇಮಿಯನ್ನು ಪ್ರೇಯಸಿ ಕಾಲೇಜಿನ ಹೊರಗಡೆ ಕೊಂದಿದ್ದು, ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisements

ಪಿಎಚ್‍ಡಿ ಮಾಡುತ್ತಿದ್ದ 26 ವರ್ಷದ ವಿದ್ಯಾರ್ಥಿನಿ ತನ್ನ ಬಾಯ್‍ಫ್ರೆಂಡ್ ಜೊತೆ ಸೇರಿ ಕೆಲಂಬಾಕ್ಕಂನ ಖಾಸಗಿ ಕಾಲೇಜಿನ ಹೊರಗೆ ತನ್ನ ಮಾಜಿ ಪ್ರಿಯಕರನನ್ನು ಇರಿದು ಕೊಲ್ಲಿಸಿದ್ದಾಳೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

Advertisements

ಪೊಲೀಸರ ವಿಚಾರಣೆ ವೇಳೆ ಈತ ನನಗೆ ಮಾಜಿ ಪ್ರೇಮಿಯಾಗಿದ್ದು, ನನ್ನನ್ನು ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದನು. ಅದು ಅಲ್ಲದೇ ನನ್ನ ಫೋಟೋಗಳನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಏನಿದು ಘಟನೆ?
26 ವರ್ಷದ ಜೆ.ದೇಸಪ್ರಿಯಾ ಒಎಂಆರ್‍ನಲ್ಲಿ ಕಳವಕ್ಕಂನ ಖಾಸಗಿ ಕಾಲೇಜಿನಲ್ಲಿ ಭೌತಶಾಸ್ತ್ರದ ವಿಷಯದಲ್ಲಿ ಪಿಎಚ್‍ಡಿ ಮಾಡುತ್ತಿದ್ದಳು. ಈಕೆ ಉಲುಂದೂರುಪೇಟೆಯ 27 ವರ್ಷದ ಎಸ್ ಅರುಣ್ ಪಾಂಡಿಯನ್‍ನ್ನು ಪ್ರೀತಿಸುತ್ತಿದ್ದಳು.

ಈತನೂ ಸಹ ಕಟ್ಟಂಕುಳತ್ತೂರಿನ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದನು. ಮೃತನಾದ ಪೆರಂಬಲೂರಿನ ಕೆ.ಸೆಂಥಿಲ್(43) ನಗರದ ಜನಪ್ರಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿದ್ದ.

Advertisements

ದೇಸಪ್ರಿಯಾ ಕಟ್ಟಂಕುಳತ್ತೂರಿನ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಸೆಂಥಿಲ್‍ನೊಂದಿಗೆ ಸಂಬಂಧ ಹೊಂದಿದ್ದಳು. ಆದರೆ ಲಾಕ್‍ಡೌನ್ ಸಮಯದಲ್ಲಿ ಇಬ್ಬರ ನಡುವೆ ಭಿನ್ನಭಿಪ್ರಾಯ ಬಂದು ಅವರ ಸಂಬಂಧ ಮುರಿದು ಬಿದ್ದಿತ್ತು. ನಂತರ ದೇಸಪ್ರಿಯಾ ಅರುಣ್ ಪಾಂಡಿಯನ್ ನನ್ನು ಪ್ರೀತಿ ಮಾಡಿದ್ದಾಳೆ. ವಿಷಯ ತಿಳಿದ ಮಾಜಿ ಪ್ರೇಮಿ ಕೆ.ಸೆಂಥಿಲ್ ದೇಸಪ್ರಿಯಾಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ನನ್ನನ್ನು ಮದುವೆಯಾಗಿಲ್ಲ ಎಂದರೆ ನಿನ್ನ ಎಲ್ಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಗುರುವಾರ ಮಧ್ಯಾಹ್ನ 1:30 ಸುಮಾರಿಗೆ ದೇಸಪ್ರಿಯಾ ಸೆಂಥಿಲ್‍ನನ್ನು ತನ್ನ ಕಾಲೇಜಿಗೆ ಮಾತನಾಡುವುದಾಗಿ ಕರೆಸಿಕೊಂಡಿದ್ದಾಳೆ. ಆಗ ಅರುಣ್ ಪಾಂಡಿಯನ್ ಸಹ ಸೇರಿಕೊಂಡಿದ್ದಾನೆ. ನಂತರ ದೇಸಪ್ರಿಯಾ ಮತ್ತು ಅರುಣ್ ಪಾಂಡಿಯನ್ ಕತ್ತು ಸೀಳಿ ಸೆಂಥಿಲ್‍ಗೆ ಹಲವಾರು ಬಾರಿ ಚಾಕುವಿನಿಂದ ಇರಿದಿದ್ದಾರೆ. ಇಬ್ಬರೂ ಪರಾರಿಯಾಗಲು ಯತ್ನಿಸಿದ್ದು, ಸ್ಥಳದಲ್ಲಿದ್ದವರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಇಬ್ಬರನ್ನು ವಿಚಾರಣೆಯನ್ನು ಮಾಡಿದ್ದು, ಇಬ್ಬರು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ವೇಳೆ ದೇವಪ್ರಿಯಾ, ಸೆಂಥಿಲ್‍ಗೆ ಈಗಾಗಲೇ ಮದುವೆಯಾಗಿದೆ. ಈಗ ಆತನ ಪತ್ನಿ ತವರು ಮನೆಯಲ್ಲಿದ್ದಾಳೆ. ಮದುವೆಯಾಗಿ ಏಳು ವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗದ ಕಾರಣ ಪತ್ನಿಯನ್ನು ಒಪ್ಪಿಸಿ ಮದುವೆಯಾಗುವುದಾಗಿ ನನಗೆ ಹೇಳಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

ಈ ಇಬ್ಬರೂ ಅವನನ್ನು ಬೇರೆಡೆಗೆ ಕರೆದೊಯ್ದು ಕೊಲೆ ಮಾಡಲು ಯೋಚಿಸಿದ್ದೆವು. ಆದರೆ ಆತನನ್ನು ನೋಡಿ ಸಿಟ್ಟಾಗಿ ಸ್ಥಳದಲ್ಲೇ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪ್ರಸ್ತುತ ಈ ಪ್ರಕರಣ ಕೆಲಂಬಾಕ್ಕಂ ಪೊಲೀಸರು ದಾಖಲಿಸಿಕೊಂಡಿದ್ದಾರೆ.

Advertisements
Exit mobile version