Tuesday, 23rd July 2019

ಕರಿಯಪ್ಪನ ಕೆಮಿಸ್ಟ್ರಿಗಿದೆಯಾ ಮಂಡ್ಯದ ಲಿಂಕು?

ಬೆಂಗಳೂರು: ಡಾ.ಡಿ.ಎಸ್ ಮಂಜುನಾಥ್ ನಿರ್ಮಾಣದ ಕೆಮಿಸ್ಟ್ರಿ ಆಫ್ ಕರಿಯಪ್ಪ ಈ ತಿಂಗಳೇ ಥೇಟರಿಗೆ ಬರೋದು ಪಕ್ಕಾ ಆಗಿದೆ. ಮಧ್ಯಮ ವರ್ಗದ ಸಂಸಾರವೊಂದರ ಸುತ್ತಾ ಸಾಗೋ ಚೆಂದದ ಕಥೆ ಹೊಂದಿರೋ ಈ ಸಿನಿಮಾ ಟ್ರೈಲರ್ ತಾಜಾತನದ ಘಮಲನ್ನ ಎಲ್ಲೆಡೆ ಹರಡಿದೆ. ಕನ್ನಡದಲ್ಲಿ ಕಥೆಗಳಿಲ್ಲ ಅನ್ನುತ್ತಲೇ ಪರಭಾಷಾ ಚಿತ್ರಗಳನ್ನು ಚಪ್ಪರಿಸೋ ಮಂದಿಯೂ ಅಚ್ಚರಿಗೊಳ್ಳುವಂಥಾ ಈ ನೆಲದ ಕಥೆಯೊಂದನ್ನು ಕೆಮಿಸ್ಟ್ರಿ ಆಫ್ ಕರಿಯಪ್ಪ ಹೊಂದಿರೋದಂತೂ ಸತ್ಯ.

ಈ ಕಥೆಯ ಮೂಲವಿರೋದು ನೈಜವಾಗಿ ನಡೆದಿದ್ದ ಘಟನೆಯೊಂದರಲ್ಲಿ ಎಂಬ ವಿಚಾರವನ್ನ ಚಿತ್ರತಂಡವೇ ಹೇಳಿಕೊಂಡಿದೆ. ಈ ಪ್ರಕಾರವಾಗಿ ಹೇಳೋದಾದರೆ ಇದು ವರ್ಷಾಂತರಗಳ ಹಿಂದೆ ಮಂಡ್ಯ ಜಿಲ್ಲೆಯ ಹಳ್ಳಿಯೊಂಣದರಲ್ಲಿ ನಡೆದಿದ್ದ ಘಟನೆಯೊಂದನ್ನು ಆಧರಿಸಿದೆ. ಅದಕ್ಕೆ ನಿರ್ದೇಶಕ ಕುಮಾರ್ ಎಲ್ಲರೂ ಬೆರಗಾಗುವಂತೆ ಸಿನಿಮಾ ಸ್ಪರ್ಶ ನೀಡಿದ್ದಾರೆ.

ಒಟ್ಟಾರೆಯಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸೋ ಒಳಗಣ್ಣಿದ್ದರೆ ಮುತ್ತಿನಂಥಾ ಕಥೆಗಳು ಸಿಗುತ್ತವೆ ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ. ಅಪ್ಪ, ಮಗ ಮತ್ತು ಸೊಸೆಯ ಸುತ್ತೋ ಈ ಕಥೆ ಬದುಕಿನ ವಿರಾಟ್ ರೂಪವನ್ನೇ ವತೆರೆದಿಡುತ್ತದೆಯಂತೆ. ಆದರೆ ಗಾಂಭೀರ್ಯದ ಲವಲೇಶವೂ ಇಲ್ಲದೇ ಎಲ್ಲವನ್ನೂ ನೈಜ ಹಾಸ್ಯದ ಮೂಲಕವೇ ನಿರೂಪಣೆ ಮಾಡಿರೋದು ಈ ಸಿನಿಮಾದ ಪ್ಲಸ್ ಪಾಯಿಂಟ್.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *