Connect with us

ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಕಾರ್ಖಾನೆ -ವಾಯುಪಡೆಗೆ ಕರೆ

ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಕಾರ್ಖಾನೆ -ವಾಯುಪಡೆಗೆ ಕರೆ

ಶ್ರೀನಗರ: ರಾಸಾಯನಿಕ ಕಾರ್ಖಾನೆಯಲ್ಲಿ ಉಂಟಾದ ಅಗ್ನಿ ಅವಘಡಕ್ಕೆ ಇಡೀ ಕಾರ್ಖಾನೆ ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿದಿರುವ ಘಟನೆ ಉಧಂಪುರ್ ಜಿಲ್ಲೆಯ ಬಟಾಲ್ ಬಲಿಯನ್ ಕೈಗಾರಿಕಾ ಪ್ರದೇಶದಲ್ಲಿ ವರದಿಯಾಗಿದೆ.

ಧನುಕಾ ಅಗ್ರಿಟೆಕ್ ಲಿಮಿಟೆಡ್ ಕಾರ್ಖಾನೆಯಲ್ಲಿ ಮುಂಜಾನೆ 12.30 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಆಗಮಿಸಿದರು ಕೂಡ ರಾಸಾಯನಿಕ ಉತ್ಪಾದನೆಯ ಕಾರ್ಖಾನೆ ಆಗಿರುವುದರಿಂದ ಬೆಂಕಿ ಕಾರ್ಖಾನೆ ತುಂಬ ಹರಡಿಕೊಂಡಿಕೊಂಡಿದೆ. ಸ್ಥಳದಲ್ಲಿ 8 ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ಮಾಡುತ್ತಿದೆ. ಆದರೂ ಬೆಂಕಿ ನಂದಿಸಲು ಕಷ್ಟವಾಗುತ್ತಿರುವ ಪರಿಣಾಮ ವಾಯುಪಡೆಗೆ ಬೆಂಕಿ ನಂದಿಸಲು ಕರೆ ಮಾಡಲಾಗಿದೆ.

ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳದ ಅಧಿಕಾರಿ, ಕೈಗಾರಿಕಾ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ನಾವು ಬೆಂಕಿ ನಂದಿಸಲು ಪ್ರಯತ್ನ ಪಡುತ್ತಿದ್ದರು ಕೂಡ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಾರ್ಖಾನೆ ಮತ್ತು ಸ್ಥಳದಲ್ಲಿದ್ದ ವಾಹನಗಳು ಪೂರ್ತಿ ಸುಟ್ಟು ಕರಕಲಾಗಿದೆ. ಹತ್ತಿರದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಳ್ಳದಂತೆ ಕಾರ್ಯಾಚರಣೆ ಮುಂದುವರಿದಿದೆ.

Advertisement
Advertisement