Connect with us

Bengaluru City

7.25 ಕೋಟಿ ರೂ. ಹಣ ಪಾವತಿಸಿ: ಸಚಿವ ಲಾಡ್‍ಗೆ ಕೋರ್ಟ್ ಆದೇಶ

Published

on

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್‍ ಕೂಡಲೇ ರಾಕ್‍ಲೈನ್ ವೆಂಕಟೇಶ್‍ ಅವರಿಗೆ ಹಣವನ್ನು ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 42ನೇ ಎಸಿಎಂಎಂ ನ್ಯಾಯಾಲಯ 6 ತಿಂಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಕೂಡಲೇ 7.25 ಕೋಟಿ ರೂ.  ಪಾವತಿಸಬೇಕು ಇಲ್ಲದೇ ಹೋದರೆ 6 ತಿಂಗಳ ಶಿಕ್ಷೆ ಅನುಭವಿಸುವಂತೆ ಕೋರ್ಟ್ ಆದೇಶ ಮಾಡಿತು. ಕೋರ್ಟ್ ಗೆ ಹಾಜರಾಗಿದ್ದ ಸಂತೋಷ್ ಲಾಡ್ ಜಾಮೀನು ಪಡೆದು ಇನ್ನೊಂದು ತಿಂಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ನ್ಯಾಯಾಧೀಶರ ಮುಂದೆ ಹೇಳಿದರು.

ಏನಿದು ಪ್ರಕರಣ?
ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್‍ರಿಂದ ಸಂತೋಷ್ ಲಾಡ್ 2014ರಲ್ಲಿ 7 ಕೋಟಿ ರೂ. ಡಿಡಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಹಲವು ಚೆಕ್‍ಗಳನ್ನು ನೀಡಿದ್ದರು. ಲಾಡ್ ಅವರು ನೀಡಿದ್ದ ಚೆಕ್‍ಗಳನ್ನು ನಿಗದಿತ ಅವಧಿಯಲ್ಲಿ ಬ್ಯಾಂಕ್ ಖಾತೆಗೆ ಹಾಕಿಕೊಂಡರೂ ಎಲ್ಲಾ ಚೆಕ್‍ಗಳು ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ವಿರುದ್ಧ ನ್ಯಾಯಾಲಯದಲ್ಲಿ ರಾಕ್‍ಲೈನ್ ವೆಂಕಟೇಶ್ ಅವರು 2015ರಲ್ಲಿ ಖಾಸಗಿ ದೂರು ದಾಖಲಿಸಿದ್ದರು.