Connect with us

Bengaluru City

ಜಸ್ಟ್ 30 ರೂ.ಗೆ ವಾಟರ್ ಫಿಲ್ಟರ್ – ವಿಡಿಯೋ ನೋಡಿದ್ರೆ ನೀವು ಭೇಷ್ ಅಂತೀರಿ

Published

on

ಬೆಂಗಳೂರು: ಬೆಳಗಾವಿ ಮೂಲದ 23 ವರ್ಷದ ಮೆಕ್ಯಾನಿಕಲ್ ಎಂಜಿನಿಯರೊಬ್ಬರು ಅತ್ಯಂತ ಅಗ್ಗದ ಪೋರ್ಟೆಬಲ್ ವಾಟರ್ ಫಿಲ್ಟರ್ ವೊಂದನ್ನ ಕಂಡುಹಿಡಿದಿದ್ದಾರೆ.

ಬೆಳಗಾವಿ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ನಿರಂಜನ್ ಕರಗಿ ಈ ಫಿಲ್ಟರ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಕೇವಲ 30 ರೂ. ವೆಚ್ಚದಲ್ಲಿ ಸಿಗುವ ಈ ಪೋರ್ಟೆಬಲ್ ವಾಟರ್ ಫಿಲ್ಟರ್ ನೀರಿನಲ್ಲಿ ಇರುವ ಶೇ.99 ಕಲುಷಿತ ಅಂಶವನ್ನು ನಾಶ ಮಾಡುತ್ತದೆ. ನೀರಿನಲ್ಲಿ ಇರುವ ಬ್ಯಾಕ್ಟಿರಿಯಾಗಳನ್ನು ಸಹ ಇದು ನಾಶ ಮಾಡಿ ಶುದ್ಧ ನೀರನ್ನು ನೀಡುತ್ತದೆ ಎಂದು ನಿರಂಜನ್ ಹೇಳಿದ್ದಾರೆ.

ಫೆ.14 ಮತ್ತು ಫೆ.15ರಂದು ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ 2019ರ ಜ್ಞಾನ ಸಂಗಮ ಕಾರ್ಯಕ್ರಮದಲ್ಲಿ, ನಿರಂಜನ್ ಕರಗಿ ಅವರು ತಾವು ಕಂಡುಹಿಡಿದಿದ್ದ ಪೋರ್ಟೆಬಲ್ ವಾಟರ್ ಫಿಲ್ಟರ್ ಅನ್ನು ಪ್ರರ್ದಶಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ ಯುವ ಪ್ರತಿಭೆಯ ಸಾಧನೆಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಮಾಹಿತಿಗೆ ಈ ತಾಣಕ್ಕೆ ಭೇಟಿ ನೀಡಬಹುದು: http://nirnal.in/

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv