Connect with us

ರಥದ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ಭಕ್ತ ಸಾವು

ರಥದ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ಭಕ್ತ ಸಾವು

ಯಾದಗಿರಿ: ರಥದ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಭಕ್ತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಮಾರ್ಚ್ 5ರಂದು ಗ್ರಾಮ ದೇವತೆ ರಥೋತ್ಸವದ ವೇಳೆ ಭಕ್ತ ರಮೇಶ್ ಎಂಬವರು ರಥದ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.

ರಥಕ್ಕೆ ಮೇಕೆ ಬಲಿ ಕೊಡುವ ವೇಳೆ ನಡೆದ ಈ ಅವಘಡದಲ್ಲಿ ರಮೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಭಕ್ತ ರಮೇಶ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಜೀವನ್ಮರಣ ಜೊತೆಗೆ ಹೋರಾಡಿದ ರಮೇಶ್ ಇಂದು ಮೃತಪಟ್ಟಿದ್ದಾರೆ.

ಹುಣಸಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎನ್ನಲಾಗುತ್ತಿದೆ. ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧವಿದ್ದರು ಭಕ್ತರು ಪ್ರಾಣಿ ವಧೆ ನಡೆಸಿದ್ದಾರೆ. ರಥೋತ್ಸವದ ವೇಳೆಯಲ್ಲಿ ಸೂಕ್ತ ಬಂದೋಬಸ್ತ್ ಪೊಲೀಸರು ನೀಡದ ಹಿನ್ನೆಲೆ ಈ ಅವಘಡ ನಡೆದೆ ಎನ್ನುವುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement
Advertisement