Tuesday, 12th November 2019

ಬಾರ್ಬಿ ಗರ್ಲ್ ಗೆ ನೀನೇ ನನ್ನ `First Girl Friend’ ಅಂದ್ರು ಚಂದನ್ ಶೆಟ್ಟಿ!

ಬೆಂಗಳೂರು: ಬಿಗ್‍ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ತನ್ನ ಗೆಳತಿ, ಬಿಗ್‍ಬಾಸ್ ಸ್ಪರ್ಧಿ ನಿವೇದಿತಾ ಗೌಡ ಅವರಿಗೆ `ನೀನೆ ನನ್ನ ಮೊದಲ ಗೆಳತಿ’ ಎಂಬ ಹಾಡನ್ನು ಬರೆದಿದ್ದರು. ಈಗ ಆ ಹಾಡನ್ನು ಇಬ್ಬರು ಒಟ್ಟಿಗೆ ಹಾಡಿದ್ದಾರೆ.

ಹೌದು ಚಂದನ್ ಮತ್ತು ನಿವೇದಿತಾ ಗೌಡ ಇಬ್ಬರು ಒಟ್ಟಿಗೆ ಈ ಹಾಡನ್ನು ಹಾಡಿದ್ದಾರೆ. ಇಬ್ಬರು ಹಾಡಿರುವ ವಿಡಿಯೋವನ್ನು ನಿವೇದಿತಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಹಾಡನ್ನು ಮೊದಲಿಗೆ ಚಂದನ್ ಹಾಡಿದ್ದು, ಬಳಿಕ ಅವರಿಗೆ ನಿವೇದಿತಾ ದನಿಯಾಗಿದ್ದಾರೆ. ಮೊದಲಿಗೆ ಚಂದನ್, “ನೀನೆ ನನ್ನ ಫಸ್ಟ್ ಗರ್ಲ್ ಫ್ರೆಂಡ್, ಈ ಫ್ರೆಂಡ್‍ಶಿಪಿಗಿಲ್ಲ ಡೆಡ್ ಎಂಡ್” ಎಂದು ಹಾಡಿನ ಸಾಲುಗಳನ್ನು ಪ್ರಾರಂಭಿಸಿದ್ದಾರೆ. ನಂತರ ನಿವೇದಿತಾ ಗೌಡ, “ನೀನೆ ನನ್ನ ಫಸ್ಟ್ ಬಾಯ್ ಫ್ರೆಂಡ್, ಈ ಫ್ರೆಂಡ್ ಶಿಪಿಗಿಲ್ಲ ಡೆಡ್ ಎಂಡ್” ಎಂದು ಹಾಡಿದ್ದಾರೆ.

ಚಂದನ್ ಮತ್ತು ನಿವೇದಿತಾ ಗೌಡ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದಾರೆ. ಚಂದನ್ ನಿವೇದಿತಾ ಅವರಿಗಾಗಿ ಒಂದು ಸಾಂಗ್ ಅರ್ಪಿಸಬೇಕು ಎಂದು ಈ ಸಾಂಗ್ ಬರೆದಿದ್ದರು. ಆದರೆ ಇದುವರೆಗೂ ಈ ಹಾಡನ್ನು ಹಾಡಿರಲಿಲ್ಲ. ಆದರೆ ಈಗ ನಿವೇದಿತಾ ಗೌಡ ಜೊತೆಯಲ್ಲಿಯೇ ಈ ಸಾಂಗ್ ಹಾಡಿ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

How many of u r waiting for Gombe? 💙 @niveditha__gowda

A post shared by Chandan Shetty (@chandanshettyofficial) on

ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸಿಕ್ಸ್ ಸೆನ್ಸ್ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡಗೆ ಅರ್ಪಿಸುವ ಒಂದು ಹಾಡು ಹೇಳಿ ಎಂದಾಗ ಈ ಸಾಂಗ್ ಹೇಳಿದ್ದರು. ಈ ಹಾಡನ್ನು ಪೋಸ್ಟ್ ಮಾಡಿದ 16 ಗಂಟೆಯಲ್ಲಿ ಸುಮಾರು 1.62,688 ಲಕ್ಷ ವೀವ್ಸ್ ಕಂಡಿದೆ.

ಚಂದನ್ ನಿವೇದಿತಾ ಗೌಡಗಾಗಿ ಬರೆದಿದರು `ಗೊಂಬೆ ಗೊಂಬೆ’ ಹಾಡು ಅಧಿಕೃತವಾಗಿ ಇದೇ ತಿಂಗಳ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಯಾಗುತ್ತದೆ ಎಂದು ಇತ್ತೀಚೆಗೆ ನಿವೇದಿತಾ ಗೌಡ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *