Connect with us

Chamarajanagar

ಡ್ರೈವರ್ ಕೆಳಗಿಳಿದಿದ್ದೇ ತಡ ಪಲ್ಟಿಯಾಯ್ತು ಕಬ್ಬು ತುಂಬಿದ ಲಾರಿ

Published

on

– ಅದೃಷ್ಟವಶಾತ್ ಚಾಲಕ, ಕ್ಲೀನರ್ ಪಾರು

ಚಾಮರಾಜನಗರ: ಕಬ್ಬು ತುಂಬಿದ ಲಾರಿಯೊಂದು ಪಲ್ಟಿಯಾಗಿರುವ ಘಟನೆ ತಮಿಳುನಾಡಿನ ದಿಂಬಂ 23ನೇ ತಿರುವಿನಲ್ಲಿ ನಡೆದಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಳವಾಡಿಯಿಂದ ಸತ್ಯಮಂಗಲಂಗೆ ಕಬ್ಬು ತುಂಬಿಕೊಂಡು ತೆರಳುತ್ತಿದ್ದ ವೇಳೆ ದಿಂಬಂನ 23ನೇ ತಿರುವಿನಲ್ಲಿ ಘಟನೆ ನಡೆದಿದೆ.

ಕಬ್ಬು ತುಂಬಿದ್ದ ಲಾರಿ ಭಾರೀ ತೂಕಕ್ಕೆ ತಿರುವಿನಲ್ಲಿ ಸ್ಟೇರಿಂಗ್ ತಿರುಗದೇ ನಿಲ್ಲುತ್ತದೆ. ಪರಿಣಾಮ ಚಾಲಕ ಮತ್ತು ಕ್ಲೀನರ್ ಲಾರಿಯಿಂದ ಕೆಳಗಿಳಿದು ಏನಾಗುತ್ತಿದೆ ಎಂದು ನೋಡು ನೋಡುತ್ತಿದ್ದಂತೆ ಲಾರಿ ಪಲ್ಟಿಯಾಗಿ ಕಬ್ಬು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತದೆ. ಘಟನೆಯ ವಿಡಿಯೋವನ್ನು ಸತ್ಯಮಂಗಲಂನಿಂದ ಬರುತ್ತಿದ್ದ ಬೈಕ್ ಸವಾರರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳಕ್ಕೆ ತಮಿಳುನಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.