Recent News

ಕೃತಿ ಕಾರಂತ್ ಯಾರು, ನನಗೆ ಗೊತ್ತಿಲ್ಲ – ಅರಣ್ಯ ಸಂರಕ್ಷಾಣಾಧಿಕಾರಿ

ಚಾಮರಾಜನಗರ: ಬರೋಬ್ಬರಿ 1.5 ಕೋಟಿ ಮೊತ್ತದ ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗಾಗಿ ಖ್ಯಾತ ವನ್ಯಜೀವಿ ತಜ್ಞೆ ಕೃತಿ ಕಾರಂತ್ ಸುಳ್ಳು ದಾಖಲೆ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ಆರೋಪಿಸಿತ್ತು. ಈಗ ಈ ವಿಚಾರದ ಬಗ್ಗೆ ಮಾತನಾಡಿರುವ ಅರಣ್ಯಸಂರಕ್ಷಾಣಾಧಿಕಾರಿ ಕೃತಿಕಾರಂತ್ ಯಾರೆಂಬುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅರಣ್ಯಸಂರಕ್ಷಾಣಾಧಿಕಾರಿ ಬಾಲಚಂದರ್, ಕೃತಿಕಾರಂತ್ ಯಾರು ಎನ್ನುವುದೇ ನಮಗೆ ಗೊತ್ತಿಲ್ಲ. ನಾವು ಅವರನ್ನು ಭೇಟಿಯೂ ಆಗಿಲ್ಲ. ಅವರು ಬಂಡೀಪುರ ವ್ಯಾಪ್ತಿಯಲ್ಲಿ ಏನು ಸೇವೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕೃತಿಕಾರಂತ್ ಅವರಿಂದ ಅರಣ್ಯ ಸಂರಕ್ಷಣೆಗಾಗಲಿ, ಪರಿಹಾರ ನೀಡುವುದಕ್ಕಾಗಲಿ ಯಾವುದೇ ಸಹಾಯ ಪಡೆದುಕೊಂಡಿಲ್ಲ. ಮಾನವ ವನ್ಯಜೀವಿ ಸಂಘರ್ಷದಲ್ಲಿ ಉಂಟಾದ ಪ್ರಾಣಹಾನಿ ಹಾಗೂ ಬೆಳೆಹಾನಿಗೆ ಸರ್ಕಾರದ ವತಿಯಿಂದಲೇ ಪರಿಹಾರ ನೀಡಲಾಗಿದೆ. ಕಳೆದ ವರ್ಷ ಸುಮಾರು ಎರಡು ಸಾವಿರ ರೈತರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಹೀಗೆ ಪರಿಹಾರ ನೀಡಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ನೆರವನ್ನು ನಾವು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

The claims of Ms Kriti Karanth, Wild seve that she helped and facilitated payment of ex- gracia for thousands of …

Posted by Karnataka Forest Department on Monday, 17 June 2019

ನಮಗೆ ಬೇರೆ ವ್ಯಕ್ತಿಯಿಂದ ಅಥವಾ ಸಂಸ್ಥೆಯಿಂದ ನೆರವು ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಕೃತಿಕಾರಂತ್ ರೈತರಿಗೆ ಪರಿಹಾರ ಕೊಡಿಸಿದ್ದರೆ ಆದರ ಬಗ್ಗೆ ರೈತರೇ ಹೇಳಬೇಕು. ವೈಲ್ಡ್ ಸೇವ್ ಹೆಸರಿನಲ್ಲಿ ಪರಿಹಾರ ಕೊಡಿಸುತ್ತಿರುವುದಾಗಿ ಕೆಲವರು ಹೇಳಿಕೊಳ್ಳುತ್ತಿದ್ದಾರೆಂಬ ವಿಚಾರ ನಮ್ಮ ಗಮನಕ್ಕೆ ಬಂದಿತ್ತು. ಹೀಗಾಗಿ ಇಂತಹದ್ದನ್ನೆಲ್ಲ ನಂಬಬಾರದು ಎಂದು ಕಳೆದು ತಿಂಗಳು ಪತ್ರಿಕಾ ಪ್ರಕಟಣೆಯನ್ನು ನಾವು ನೀಡಿದ್ದೇವು ಎಂದು ಹೇಳಿದ್ದಾರೆ.

ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಪುತ್ರಿ ಕೃತಿ ಕಾರಂತ್ ವನ್ಯಜೀವಿ ತಜ್ಞೆ ಆಗಿದ್ದು, ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ಈಗ ಅವರು ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗಾಗಿ ಸುಳ್ಳು ದಾಖಲೆ ನೀಡಿದ್ದಾರೆ ಎಂದು ಆರೋಪಿಸಿ, ಪತ್ರಿಕಾ ಪ್ರಕಟಣೆ ಹಾಗೂ ಟ್ವಿಟ್ಟರ್, ಫೇಸ್‍ಬುಕ್ ಪೇಜ್‍ಗಳಲ್ಲಿ ಕೃತಿ ವಿರುದ್ಧ ಅರಣ್ಯ ಇಲಾಖೆ ಆರೋಪಿಸಿತ್ತು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *