Wednesday, 12th December 2018

Recent News

ಲಿಫ್ಟ್ ಗಾಗಿ ಕಾಯುವ ಒಂಟಿ ಮಹಿಳೆಯರೇ ಎಚ್ಚರ!

-25 ಸರಗಳ್ಳತನ ಮಾಡಿದ್ದ ಖತರ್ನಾಕ್ ಕಳ್ಳ ಅಂದರ್..!

ಬೆಂಗಳೂರು: ನವೆಂಬರ್ 14ನೇ ತಾರೀಖು ನಿರ್ಮಲಾ ಎಂಬ ಮಹಿಳೆ ದೂರದ ಆಂಧ್ರದಿಂದ ಬೆಂಗಳೂರಿನ ಮಲ್ಲೇಶ್ವರಂಗೆ ಬಂದಿದ್ದರು. ಸಂಬಂಧಿಕರ ಮದುವೆ ಇದ್ದ ಕಾರಣ ಬೆಳಗ್ಗೆಯೇ ಮಲ್ಲೇಶ್ವರಂಗೆ ಬಂದು ಫ್ರೆಶ್ ಅಪ್ ಆಗೋಕೆ ರಿಜಾಯ್ಸ್ ಹೋಟೆಲ್‍ಗೆ ತೆರಳಿದ್ದರು. ಹೋಟೆಲ್‍ನಲ್ಲಿ ಲಿಫ್ಟ್ ಗಾಗಿ ಕಾಯ್ತಿದ್ದ ವೇಳೆ ಆಕಡೆ ಈಕಡೆ ಹೊಂಚು ಹಾಕುತ್ತಿದ್ದ ಆಸಾಮಿಯೊಬ್ಬ ಹಿಂದಿನಿಂದ ನಿರ್ಮಲಾರ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತು, ಎದುರಿಗಿದ್ದ ವೃದ್ಧರನ್ನ ತಳ್ಳಿ ಕ್ಷಣಾರ್ಧರಲ್ಲಿ ಎಸ್ಕೇಪ್ ಆಗಿದ್ದನು.

ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಮಲ್ಲೇಶ್ವರಂ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಇಬ್ಬರು ಖತರ್ನಾಕ್ ಕಳ್ಳರನ್ನ ಹೆಡೆಮುರಿ ಕಟ್ಟಿದ್ದಾರೆ. ಮೊಹಮದ್ ರಫೀಕ್ ಮತ್ತು ತೌಸಿಫ್ ಸಾಧಿಕ್ ಬಂಧಿತ ಸರಗಳ್ಳರು. ಇಬ್ಬರು ಮಂಗಳೂರು ಮೂಲದವರಾಗಿದ್ದು, ಸರ ಕದಿಯೋಕೆ ಅಂತಾನೆ ಬೆಂಗಳೂರಿಗೆ ಬಂದಿದ್ದಾರೆ. ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಖದೀಮರು ಸುಮಾರು 25ಕ್ಕು ಹೆಚ್ಚು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಮೂರಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಕೂಡ ಭಾಗಿಯಾಗಿದ್ದಾರೆ.

ಬಂಧಿತರಿಂದ 120 ಗ್ರಾಂ ಮೌಲ್ಯದ ಚಿನ್ನವನ್ನ ವಶಪಡಿಸಿಕೊಂಡಿರುವ ಮಲ್ಲೇಶ್ವರಂ ಪೊಲೀಸರು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *