Connect with us

Cinema

75 ಸಾವಿರ ನೀಡಿ ಆನೆ ದತ್ತು ಪಡೆದ ಹ್ಯಾಟ್ರಿಕ್ ಹೀರೋ

Published

on

ಮೈಸೂರು: ಸ್ಯಾಂಡಲ್‍ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅರಮನೆ ನಗರಿಯಲ್ಲಿ ಆನೆಯೊಂದನ್ನು ದತ್ತು ಪಡೆದಿದ್ದಾರೆ.

ಹೌದು. ಶಿವಣ್ಣ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ‘ಪಾರ್ವತಿ’ ಎಂಬ ಹೆಸರಿನ ಆನೆಯನ್ನು 75 ಸಾವಿರ ನೀಡಿ ದತ್ತು ಪಡೆದುಕೊಂಡಿದ್ದಾರೆ. ಒಂದು ವರ್ಷದ ಅವಧಿಗೆ ಅಂದರೆ ಆಗಸ್ಟ್ 19 2020 ರಿಂದ 2021 ಆಗಸ್ಟ್ 19ರವರೆಗೆ ಈ ಆನೆಯನ್ನು ನಟ ದತ್ತು ಸ್ವೀಕರಿಸಿದ್ದಾರೆ.

ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೃಗಾಲಯದಿಂದ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ನಟ ಚಿಕ್ಕಣ್ಣ, ದೇವರಾಜ್,ಸೃಜನ್ ಲೋಕೇಶ್ ಸೇರಿ ಕ್ರಿಕೆಟರ್ಸ್ ಹಾಗೂ ಹಲವು ರಾಜಕಾರಣಿಗಳೂ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಸದ್ಯ ಶಿವಣ್ಣ ಅವರು ಲಾಕ್‍ಡೌನ್ ನಂತರ ಶೂಟಿಂಗ್ ಆರಂಭಿಸಿದ್ದಾರೆ. ಭಜರಂಗಿ 2 ಚಿತ್ರೀಕರಣಕ್ಕೆ ಸೆಂಚುರಿ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಟೀಂ ಕರ್ನಾಟಕದಲ್ಲಿ ಶೂಟಿಂಗ್ ಶುರು ಮಾಡಿದೆ. ಹರ್ಷ ಸಾರಥ್ಯದಲ್ಲಿ ಜಯಣ್ಣ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಚಿತ್ರೀಕರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ಚಾಲನೆ ಕೊಡಲಾಗಿದೆ.

Click to comment

Leave a Reply

Your email address will not be published. Required fields are marked *