Latest
ಯೋಧನ ಪಾರ್ಥಿವ ಶರೀರದ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೇಂದ್ರ ಸಚಿವ

ತಿರುವನಂತಪುರಂ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧ ವಸಂತ್ ಕುಮಾರ್ ಅವರ ಮೃತದೇಹದ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಕ್ಕೆ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧ ವಸಂತ್ ಕುಮಾರ್ ಅವರ ಅಂತ್ಯಸಂಸ್ಕಾರವನ್ನು ಶನಿವಾರ ರಾತ್ರಿ ಅವರ ಹುಟ್ಟೂರಾದ ಕೇರಳದ ವೈಯನಾಡುವಿನ ತ್ರಿಕ್ಕೈಪೆಟ್ಟ ಗ್ರಾಮದಲ್ಲಿ ನಡೆಸಲಾಯಿತು. ಈ ವೇಳೆ ವೀರ ಯೋಧನ ಅಂತಿಮ ದರ್ಶನ ಪಡೆಯಲು ಬಂದಿದ್ದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರು ಯೋಧನ ಮೃತದೇಹದ ಮುಂದೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಲ್ಲದೆ ಆ ಸೆಲ್ಫಿಯನ್ನು ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
What a shame Mr.Alphonce Kannanthanam..Taking selfie infront of our soldiers dead body..#shameOnYouAlphonse pic.twitter.com/G534QNm4N4
— Shan Shakir (@ShanShakir1) February 16, 2019
ಹುತಾತ್ಮ ವಸಂತ್ ಕುಮಾರ್ ಗೆ ನಮನ, ನಿಮ್ಮಂತ ವೀರರ ತ್ಯಾಗ ಬಿಲಿದಾನದಿಂದಾಗಿ ನಾವು ಇಲ್ಲಿ ಸುಖವಾಗಿ ಬದುಕಲು ಸಾಧ್ಯವಾಗಿರುವುದು ಎಂದು ಬರೆದು ಸೆಲ್ಫಿ ಫೋಟೋವನ್ನು ಫೇಸ್ಬುಕ್ ಸ್ಟೇಟಸ್ಗೆ ಹಾಕಿದ್ದರು. ಇದನ್ನ ಕಂಡ ನೆಟ್ಟಿಗರು ಸಾವಿನ ಮನೆಯಲ್ಲೂ ನಿಮ್ಮ ರಾಜಕೀಯ ಬುದ್ದಿ ತೋರಿಸುತ್ತೀರ. ನಿಮಗೆ ನಾಚಿಕೆಯಾಗಬೇಕು ಅಂತ ಕಮೆಂಟ್ ಮಾಡಿದ್ದಾರೆ. ಅಲ್ಲದೆ ಈ ರೀತಿ ಸಾವಿನ ಮನೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿದಲ್ಲದೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಕ್ಕೆ ನೆಟ್ಟಿಗರು ಕಣ್ಣಂತಾನಂ ಮೇಲೆ ಗರಂ ಆಗಿದ್ದಾರೆ. ಹಾಗೆಯೇ ಅವರ ಪೋಸ್ಟ್ ಗೆ ಬೈದು ಕಮೆಂಟ್ಗಳ ಸುರಿಮಳೆಯನ್ನೇ ಹರಿಸಿ ಕೇಂದ್ರ ಸಚಿವರ ಬೆವರಿಳಿಸಿದ್ದಾರೆ.
@alphonstourism ,former beauracrat and presently BJP minister, in the most insensitive manner, poses for a selfie during the funeral of Swntham Kumar who was killed in #PulwamaAttack !
Moral of the story: Cracking civil service is no benchmark for anything. pic.twitter.com/7UwViYcPpv
— balu sunil (@balusunil2) February 16, 2019
ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಂತಾನಂ ಅವರ ಸೆಲ್ಫಿ ಪೋಸ್ಟ್ ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಅವರು ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೂ ಕೂಡ ಸಿಟ್ಟಿಗೆದ್ದಿರುವ ನೆಟ್ಟಿಗರು ಮಾತ್ರ ಕಣ್ಣಂತಾನಂ ಅವರ ಇತರೇ ಪೋಸ್ಟ್ ಗಳಿಗೂ ಕಮೆಂಟ್ ಮಾಡಿ ಬೈಯ್ಯುತ್ತಿದ್ದಾರೆ.
https://twitter.com/hi_paresh/status/1096826435988262913?ref_src=twsrc%5Etfw%7Ctwcamp%5Etweetembed%7Ctwterm%5E1096826435988262913&ref_url=https%3A%2F%2Fwww.thenewsminute.com%2Farticle%2Fwhat-shame-union-mos-alphons-lambasted-posting-selfie-martyr-s-coffin-96872
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv
