Connect with us

Bengaluru City

ಕೋರ್ಟ್ ಅವಧಿಯೊಳಗೆ ಸಿಡಿ ಲೇಡಿ ಹಾಜರ್? 8 ಪೊಲೀಸರ ತಂಡದಿಂದ ಯುವತಿಗೆ ಭದ್ರತೆ

Published

on

ಬೆಂಗಳೂರು: ಸಿಡಿ ಲೇಡಿ ಕೋರ್ಟ್‍ಗೆ ಇವತ್ತೇ ಹಾಜರಾಗುತ್ತಾರೆ ಎನ್ನಲಾಗಿದ್ದು, ಯುವತಿಯ ಭದ್ರತೆಗಾಗಿ ಮಹಿಳಾ ಪೊಲೀಸರು ಸೇರಿ 8 ಜನರನ್ನೊಳಗೊಂಡ ಭದ್ರತಾ ತಂಡವನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಇಂದು ಸಿಡಿ ಲೇಡಿ ಹಾಜರಾಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೋರ್ಟ್ ಅನುಮತಿ ನೀಡಿದಲ್ಲಿ ಅರ್ಧ ಗಂಟೆಯಲ್ಲಿ ಯುವತಿಯನ್ನು ಕರೆ ತರುತ್ತೇವೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಇದೀಗ 8 ಜನರ ತಂಡವನ್ನು ಸಹ ಭದ್ರತೆಗಾಗಿ ನಿಯೋಜಿಸಲಾಗಿದೆ.

ನ್ಯಾಯಾಲಯ ಹೇಗೆ ಹೇಳುತ್ತದೆ ಮತ್ತು ಯಾವ ಸಮಯವನ್ನು ಸೂಚಿಸುತ್ತದೆ ಎಂದು ನೋಡಿ ಸಂತ್ರಸ್ತೆ ಯುವತಿ ಕೋರ್ಟ್ ಮುಂದೆ ಬರುತ್ತಾರೆ. ಸುಪ್ರೀಂ ಕೋರ್ಟ್‍ನಲ್ಲಿ ಈ ಪ್ರಕರಣವನ್ನು ಬೇರೆ ರಾಜ್ಯದಲ್ಲಿ ಕೇಸ್ ನಡೆಸಲು ಸಾಧ್ಯವಾಗುತ್ತಾ ಎಂದು ನಮ್ಮ ತಂಡ ಯೋಚಿಸುತ್ತಿದೆ ಎಂದು ವಕೀಲ ಜಗದೀಶ್ ಹೇಳಿದ್ದರು.

ಭಾನುವಾರವೇ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದಿದ್ದ ಯುವತಿ, ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‍ಐಟಿ ತನಿಖೆ ನಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇತ್ತ ಆರೋಪಿ ರಮೇಶ್ ಜಾರಕಿಹೊಳಿ ಆಡುಗೋಡಿಯಲ್ಲಿ ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

Click to comment

Leave a Reply

Your email address will not be published. Required fields are marked *