ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ಕೊಲೆ ದೃಶ್ಯ

By
1 Min Read

ತುಮಕೂರು: ಗುರುವಾರ ಸಂಜೆ ತುಮಕೂರು ನಗರದ ಶಿರಾಗೇಟ್ ಬಳಿ ನಡೆದಿದ್ದ ಭೀಕರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆ ಭಯಾನಕ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ.

ರೌಡಿಶೀಟರ್ ರೋಹಿತನ ಸಹಚರರು ಮಹಂತೇಶ್ ಮತ್ತು ಮಂಜುನಾಥ್ ಎಂಬವರ ಮೇಲೆ ಮಚ್ಚು, ಲಾಂಗು ಹಾಗೂ ಡ್ರಾಗನ್‍ನಿಂದ ದಾಳಿ ಮಾಡುತ್ತಾರೆ. ಈ ದಾಳಿಯಲ್ಲಿ ಮಹಂತೇಶ್ ಸಾವನಪ್ಪಿದ್ದಾನೆ ಹಾಗೂ ಮಂಜುನಾಥ್ ಗಾಯಗೊಂಡಿದ್ದಾನೆ.

ರೌಡಿಶೀಟರ್ ರೋಹಿತನ ಸಹಚರ ಚಿನ್ನು ಅಲಿಯಾಸ್ ಸುಹಾಸ್, ಮಹಂತೇಶ್ ನನ್ನು ಡ್ರಾಗನ್ ಹಿಡಿದು ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡ್ರಾಗನ್‍ನಿಂದ ಹಲವಾರು ಬಾರಿ ಮಹಂತೇಶ್‍ನ ಹೊಟ್ಟೆಗೆ ಸುಹಾಸ್ ಇರಿದಿದ್ದಾನೆ.

ಮಹಂತೇಶ್ ತಪ್ಪಿಸಿಕೊಂಡು ಬರುತ್ತಿರುವ ದೃಶ್ಯ ಹಾಗೂ ಸುಹಾಸ್ ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯ ಸೆರೆಯಾಗಿದೆ. ರಕ್ತದ ನಡುವಿನಲ್ಲಿ ಬಿದ್ದಿದ್ದ ಮಹಂತೇಶ್‍ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.

ಈ ಬಗ್ಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Exit mobile version