Connect with us

Cinema

ಸಿಸಿಬಿ ನೋಟಿಸ್ ನೀಡಿದ್ದು ನಿಜ: ರಾಗಿಣಿ ದ್ವಿವೇದಿ

Published

on

-ಸೋಮವಾರ ವಿಚಾರಣೆಗೆ ಹಾಜರಾಗ್ತೀನಿ

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಮತ್ತು ತಮಗೆ ಸಿಸಿಬಿ ನೀಡಿರುವ ಕುರಿತಿ ನಟಿ ರಾಗಿಣಿ ದ್ವಿವೇದಿ ತಮ್ಮ ಮೊದಲ ಪ್ರತಿಕ್ರಿಯೆಯನ್ನ ಟ್ವೀಟ್ ಮೂಲಕ ನೀಡಿದ್ದಾರೆ.

ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ನಿಜ. ಕಡಿಮೆ ಅವಧಿಯಲ್ಲಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿಂದು ನಾನು ವಿಚಾರಣೆಗೆ ಹಾಜರಾಗುತ್ತಿಲ್ಲ. ನೋಟಿಸ್ ಕೊಟ್ಟ ಬಗ್ಗೆ ನನ್ನ ಪರವಾಗಿ ಕಾಳಜಿ ವ್ಯಕ್ತಪಡಿಸಿದ ಜನತೆಗೆ ಧನ್ಯವಾದಗಳು.

ನಮ್ಮ ವಕೀಲರು ಪೊಲೀಸರು ಮುಂದೆ ಹಾಜರಾಗಿ ನಮ್ಮ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಯದ ಅಭಾವ ಹಿನ್ನೆಲೆ ಸೋಮವಾರ ಸಿಸಿಬಿ ಪೊಲೀಸರ ವಿಚರಣೆಗೆ ಹಾಜರಾಗುತ್ತೇನೆ. ಪೊಲೀಸರ ನೀಡಿರುವ ನೋಟಿಸ್ ಪ್ರಕಾರ ವಿಚಾರಣೆಯಲ್ಲಿ ಭಾಗಿಯಾಗೋದು ಒಬ್ಬ ಪ್ರಜೆಯಾಗಿ ನನ್ನ ಕರ್ತವ್ಯ. ಪೊಲೀಸರಿಂದ ಮರೆ ಮಾಡುವ ವಿಷಯಗಳಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಿಗೂ ನನಗೂ ಸಂಬಂಧವಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ ಜನತೆ ಕೃತಜ್ಞತೆ ಎಂದು ರಾಗಿಣಿ ತಿಳಿಸಿದ್ದಾರೆ.

ಬುಧವಾರ ರಾತ್ರಿ ನೋಟಿಸ್ ಸಿಗುತ್ತಿದ್ದಂತೆ ನಟಿ ರಾಗಿಣಿ ಕಾನೂನು ತಜ್ಞರ ಮೊರೆ ಹೋಗಿದ್ದರು. ಇದೀಗ ತಮ್ಮ ಪ್ರತಿಕ್ರಿಯೆ ಟ್ವೀಟ್ ಮೂಲಕ ನೀಡಿದ್ದಾರೆ. ಬುಧವಾರ ರಾಗಿಣಿ ಆಪ್ತ ರವಿಶಂಕರ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *