Connect with us

Cinema

ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

Published

on

– ಡ್ರಗ್ಸ್ ಪಾರ್ಟಿ ಆಗಿರುವುದೂ ನನ್ನ ಗಮನಕ್ಕೂ ಬಂದಿದೆ
– ಇಂದ್ರಜಿತ್‍ಗೆ ಧನ್ಯವಾದ ಹೇಳಬೇಕು
– ಮುಂಜಾನೆ 6 ಗಂಟೆಯವರೆಗೂ ಪಾರ್ಟಿ

ಬೆಂಗಳೂರು: ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನನಗೆ ನೋಟಿಸ್ ನೀಡಿದ್ದು, ನಾಳೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಎರಡನೇ ಬಿಗ್ ಬಾಸ್ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ನಟ ಸಂತೋಷ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನನಗೆ ಯಾವ ಕಾರಣಕ್ಕೆ ನೋಟಿಸ್ ನೀಡಿದ್ದಾರೆ ಎಂಬುದು ನನಗೂ ಕುತೂಹಲ ಇದೆ. ಒಬ್ಬ ಪ್ರಜೆಯಾಗಿ ವಿಚಾರಣೆಗೆ ಹಾಜರಾಗುವುದು ನನ್ನ ಕರ್ತವ್ಯ ಆದ್ದರಿಂದ ಹೋಗುತ್ತೇನೆ. ಅಮ್ಮನ ಕಾರ್ಯದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದೇನೆ. ನಾಳೆ ಬೆಂಗಳೂರಿಗೆ ವಾಪಸ್ ಆಗುತ್ತೇನೆ. ನೋಟಿಸ್ ನೀಡಿದ ಸಂದರ್ಭದಲ್ಲಿ ಇಂದು ಸಂಜೆಯೇ ಬರುತ್ತೇನೆ ಎಂದು ಪೊಲೀಸರಲ್ಲಿ ಕೇಳಿದ್ದೆ. ಆದರೆ ಅವರು ನಾಳೆಯೇ ಬನ್ನಿ ಎಂದಿದ್ದಾರೆ ಎಂದು ತಿಳಿಸಿದರು.

ನನ್ನದು ಒಂದು ವಿಲ್ಲಾ ಇತ್ತು. ಆದರೆ ಜನವರಿಯಲ್ಲಿ ನಾನು ಅದನ್ನು ಖಾಲಿ ಮಾಡಿದ್ದೆ. ಅಲ್ಲಿ ಹುಟ್ಟಹಬ್ಬ ಕಾರ್ಯಕ್ರಮ ಸೇರಿದಂತೆ ಕೆಲ ಪಾರ್ಟಿಗಳಿಗೆ ಬಾಡಿಗೆ ನೀಡುತ್ತಿದ್ದೇವು. ಈ ಕುರಿತ ಮಾಹಿತಿ ಪಡೆಯಲು ವಿಚಾರಣೆಗೆ ಕರೆದಿರಬಹುದು. ಲಾಕ್‍ಡೌನ್ ಸಮಯದಲ್ಲಿ ನಾನು ಯಾವುದೇ ಪಾರ್ಟಿಗೆ ಭಾಗಿಯಾಗಿಲ್ಲ. ಏಕೆಂದರೆ ನಾನು ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಸುಮಾರು 35 ದಿನಗಳ ಕಾಲ 20 ಸಾವಿರಕ್ಕೂ ಹೆಚ್ಚು ಊಟವನ್ನು ವಿತರಣೆ ಮಾಡಿದ್ದೇವೆ. ಇದನ್ನೂ ಓದಿ: ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

ಆದರೆ ಲಾಕ್‍ಡೌನ್ ಸಮಯದಲ್ಲೇ ನಗರದ ಹೊರವಲಯದಲ್ಲಿ ಪಾರ್ಟಿಗಳು ನಡೆಯುತ್ತಿದ್ದ ಮಾಹಿತಿ ನನಗೂ ತಿಳಿದಿದೆ. ಆದರೆ ಯಾರೂ ಆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರೂ ಎಂಬ ಬಗ್ಗೆ ಮಾಹಿತಿ ಇಲ್ಲ. ನಟಿಯೊಬ್ಬರ ಅಪಘಾತ ಆದ ಸಂದರ್ಭದಲ್ಲಿ ನನಗೆ ಆಚ್ಚರಿ ಆಗಿತ್ತು. ಪಾರ್ಟಿಗಳಲ್ಲಿ ಆಫ್ಟರ್ ಪಾರ್ಟಿ ನಡೆಯುತ್ತದೆ ಎಂಬುವುದು ಎಲ್ಲರಿಗೂ ತಿಳಿದಿದೆ. ನಾವು ಕೆಲ ಪಾರ್ಟಿಗಳಿಗೆ ಹೋಗಿದ್ದು, ಆದರೆ ಆಫ್ಟರ್ ಪಾರ್ಟಿಗಳಲ್ಲಿ ಭಾಗಿಯಾಗಿಲ್ಲ. ಮುಂಜಾನೆ 6 ಗಂಟೆವರೆಗೂ ಪಾರ್ಟಿ ನಡೆಸಿರುವ ಸಂದರ್ಭಗಳಿದ್ದೂ, ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ. ಈ ಪಾರ್ಟಿಗಳಿಗೆ ಬೇಕಾದಷ್ಟು ಹಣ ಖರ್ಚು ಮಾಡುತ್ತಾರೆ ಎಂದು ವಿವರಿಸಿದರು.

ಸದ್ಯ ನಾವು ಇಂದ್ರಜಿತ್ ಅವರಿಗೆ ಧನ್ಯವಾದ ಹೇಳಬೇಕು. ಅವರು ಕೆಲಸ ಮಾಡುತ್ತಿದ್ದಾರೆ. ಆದರೆ ಸಿನಿಮಾ ಮಾತ್ರವಲ್ಲದೇ ಎಲ್ಲಾ ರಂಗದಲ್ಲಿಯೂ ಡ್ರಗ್ಸ್ ಮಾಫಿಯಾ ಹರಡಿಕೊಂಡಿದೆ. ನಮ್ಮ ತಂದೆ-ತಾಯಿ ಮಾಡಿದ ಪುಣ್ಯದಿಂದ ನಾವು ಅಂತಹ ಪಾರ್ಟಿಗಳಿಗೆ ಹೋಗಿಲ್ಲ. ನಾನು ಈಗ ಪ್ರೇಕ್ಷಕರ ಎದುರು ಬರಲು ಅತ್ಯುತ್ತಮ ಪಾತ್ರವೊಂದರ ಹುಡುಕಾಟದಲ್ಲಿದ್ದೇನೆ. ಸ್ಯಾಂಡಲ್‍ವುಡ್ ಕೋವಿಡ್ ವಾರಿಯರ್ಸ್ ಎಂಬ ಗ್ರೂಪ್ ಮಾಡಿಕೊಂಡಿದ್ದು, ಊಟ, ಹಣ್ಣು, ತರಕಾರಿ, ಮಾಸ್ಕ್ ಸೇರಿದಂತೆ ಅಗತ್ಯ ಸೇವೆಗಳನ್ನು ನೀಡುವ ಕಾರ್ಯವನ್ನು ಲಾಕ್‍ಡೌನ್ ಸಮಯದಲ್ಲಿ ಮಾಡಿದ್ದೇವೆ. ನಾವು ದೊಡ್ಡ ತಂಡ ಕಟ್ಟಿಕೊಂಡು ಹಲವರ ನೆರವು ಪಡೆದುಕೊಂಡು ಸಹಾಯ ಮಾಡಿದ್ದೇವೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

ಚಿತ್ರರಂಗದಲ್ಲಿರುವ ಕೆಲ ಕಲಾವಿದರೂ ಬೇಡದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದ ಇಂತಹ ಆರೋಪಗಳು ಕೇಳಿ ಬರುತ್ತಿದೆ. ಆಫ್ಟರ್ ಪಾರ್ಟಿಗಳಲ್ಲಿ 2 ರೀತಿ ಇದ್ದು, ಸ್ನೇಹಿತರ ಮನೆಯಲ್ಲಿ ಪಾರ್ಟಿ ಮಾಡಿ ತಡರಾತ್ರಿಯಲ್ಲಿ ಮನೆಗೆ ಹಿಂದಿರುಗಲು ಆಗುದಿಲ್ಲ ಎಂಬ ಕಾರಣಕ್ಕೆ ಅಲ್ಲೇ ಉಳಿಯುತ್ತಿದ್ದರು. ಆದರೆ ಮತ್ತೊಂದು ರೀತಿಯ ಆಫ್ಟರ್ ಪಾರ್ಟಿಯಲ್ಲಿ ಎಂಟ್ರಿಗೆ 5 ಸಾವಿರ ನೀಡಬೇಕು. ಆದರೆ ನನಗೆ ಇಂತಹ ಪಾರ್ಟಿಗಳಿಗೆ ಯಾವುದೇ ಆಹ್ವಾನವೂ ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಈಗಾಗ್ಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ – ಸ್ವಾಮೀಜಿಯಿಂದ ಒತ್ತಡ

Click to comment

Leave a Reply

Your email address will not be published. Required fields are marked *