Connect with us

Districts

ಕೌನ್ ಬನೇಗಾ ಕರೋಡ್‍ಪತಿ ಹೆಸ್ರಲ್ಲಿ ವಾಟ್ಸಪ್ ಮೂಲಕ ವಂಚಿಸ್ತಾರೆ ಎಚ್ಚರ!

Published

on

ಕೊಪ್ಪಳ: ಕೌನ್ ಬನೇಗಾ ಕರೋಡ್‍ಪತಿ ಹೆಸರನ್ನು ಬಳಸಿಕೊಂಡು ವಾಟ್ಸಪ್ ಮೂಲಕ ವಂಚನೆ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಾಟ್ಸಪ್ ಚಂದದಾರರು ಎಚ್ಚರ ವಹಿಸಬೇಕಾಗಿದೆ.

ಹೌದು, ಕೌನ್ ಬನೇಗಾ ಕರೋಡ್‍ಪತಿ ತರಹದ ಆಡಿಯೋ ಸಂಭಾಷಣೆ ಹಾಗೂ ಚಿತ್ರವನ್ನು ಬಳಸಿಕೊಂಡು ವಾಟ್ಸಪ್ ಮೂಲಕ ವಂಚಿಸುತ್ತಿರುವುದು ಬೆಳಕಿಗೆ ಬಂದಿದ್ದು, ವಾಟ್ಸಪ್ ಮೂಲಕ ವಂಚನೆಗೆ ಯತ್ನ ನಡೆಸುತ್ತಿದ್ದಾರೆ. ಅಲ್ಲದೇ ನಗರದ ಪ್ರವೀಣ್ ಎಂಬವರಿಗೆ 923043591349 ವಾಟ್ಸಪ್‍ ನಂಬರ್ ಮೂಲಕ ನೀವು ಕೌನ್ ಬನೇಗಾ ಕರೋಡ್‍ಪತಿ ಮೊಬೈಲ್ ಗ್ರಾಹಕರ ವಿಭಾಗದಲ್ಲಿ ವಿಜೇತರಾಗಿದ್ದೀರಾ, ಬಹುಮಾನದ ಮೊತ್ತಕ್ಕಾಗಿ ಕೂಡಲೇ ಕರೆ ಮಾಡಿ ಎನ್ನುವ ಸಂದೇಶ ಕಳುಹಿಸಿದ್ದಾರೆ. ಇದರಿಂದ ಅನುಮಾನಗೊಂಡ ಪ್ರವೀಣ್ ಕರೆ ಮಾಡಿದಾಗ ವಂಚನೆಯ ಜಾಲ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ಅವರು ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ದೂರನ್ನು ನೀಡಿದ್ದಾರೆ.

ವಂಚನೆಕೋರರು ಚಿತ್ರದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ನರೇಂದ್ರ ಮೋದಿಯವರ ಫೋಟೋಗಳನ್ನು ಬಳಸಿಕೊಂಡು, ಗ್ರಾಹಕರನ್ನು ಸುಲಭವಾಗಿ ವಂಚನೆಮಾಡುವ ಯತ್ನ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ ದೂರವಾಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಪಾಕಿಸ್ತಾನಕ್ಕೆ ಸೇರಿರುವುದು ತಿಳಿದು ಬಂದಿದೆ.

ಹೇಗೆ ವಂಚಿಸುತ್ತಾರೆ?
ವಾಟ್ಸಪ್ ಗ್ರಾಹಕರಿಗೆ ಕೌನ್ ಬನೇಗಾ ಕರೋಡ್‍ಪತಿ ಆಡಿಯೋ ಸಂದೇಶ ಹಾಗೂ ವಿಜೇತರಾದ ಪ್ರಮಾಣಪತ್ರವನ್ನು ವಂಚಕರು ಕಳುಹಿಸಿ ಕೊಡುತ್ತಾರೆ. ಇದನ್ನು ನಿಜ ಎಂದು ನಂಬುವ ಜನರು ಅವರು ನೀಡಿರುವ ಸಂಖ್ಯೆಗೆ ಕರೆ ಮಾಡುತ್ತಾರೆ. ಆಗ ವಂಚಕರ ಹಣವನ್ನು ವರ್ಗಾಯಿಸಲು ಇಂತಿಷ್ಟು ತೆರಿಗೆಯನ್ನು ಪಾವತಿಸಿ ಎಂದು ಹೇಳುತ್ತಾರೆ. ವಂಚನೆಯ ಜಾಲವನ್ನು ಅರಿಯದ ಜನ ಬಹುಮಾನದ ಆಸೆಗಾಗಿ ವಂಚಕರು ನೀಡುವ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತಾರೆ. ಹಣ ವರ್ಗಾವಣೆಯಾದ ಬಳಿಕ ಕೂಡಲೇ ವಂಚಕರು ತಮ್ಮ ಮೊಬೈಲ್‍ಗಳನ್ನು ಬಂದ್ ಮಾಡಿ ನಾಪತ್ತೆಯಾಗುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv