ಇಪ್ಪತ್ತು ಎಮ್ಮೆ ಕದ್ದ ಕಳ್ಳ ಅರೆಸ್ಟ್

Advertisements

ಲಕ್ನೋ: ಉತ್ತರಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಹತ್ತಾರು ಪ್ರಕರಣದಡಿಯಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಕಳ್ಳನೊಬ್ಬ ಎಮ್ಮೆ ಕಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿರುವ ಘಟನೆ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದಿದೆ.

Advertisements

ಸಂತೋಷ್ ಕುಮಾರ್ ಎಮ್ಮೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿ. ಸಂತೋಷ್ ವಿರುದ್ಧ ಬುಲಂದ್ ಶಹರ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಹಾಪುರ್ ಈ ನಾಲ್ಕು ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಾಣಿ ಕಳ್ಳತನ, ಲೂಟಿ ಇತರ 38 ಪ್ರಕರಣಗಳಲ್ಲಿ ಈಗಾಗಲೇ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisements

ಜಿಲ್ಲಾ ಪೊಲೀಸರು ಮತ್ತು ಸ್ವಾಟ್ ತಂಡದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯು ಸಿಕ್ಕಿಬಿದ್ದಿದ್ದು ಆತನಿಂದ ಸುಮಾರು 20 ಎಮ್ಮೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ವಂಚಿಸಿದ್ದ ನೇಪಾಳಿ ಪ್ರಜೆಗಳ ಬಂಧನ

ವಿವಿಧ ಮನೆಗಳಿಂದ ಕದ್ದು ತಂದಂತಹ 11 ಎಮ್ಮೆಗಳು ಮತ್ತು ಅವುಗಳ 9 ಕರುಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಅವುಗಳನ್ನೆಲ್ಲಾ ಅವುಗಳ ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ವೈದ್ಯನಿಗೆ ಓಮಿಕ್ರಾನ್

Advertisements

Advertisements
Exit mobile version