Tuesday, 17th September 2019

Recent News

2 years ago

ಕೆಲ್ಸ ಮಾಡದೇ ಇದ್ರೆ ನನ್ನನ್ನು ಕಿತ್ತೊಗೆಯಿರಿ: ಕಮಲ್ ಹಾಸನ್

ಚೆನ್ನೈ: ತಮಿಳು ರಾಜಕೀಯ ಪರಿಸ್ಥಿತಿಗಳು ದಿನನಿತ್ಯ ಹೊಸ ತಿರುವುಗಳು ಪಡೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ತಮಿಳು ರಾಜಕೀಯ ರಂಗಕ್ಕೆ ಕಾಲಿವುಡ್ ಮೆಗಾ ಸ್ಟಾರ್ ಖ್ಯಾತ ನಟ ಕಮಲ್ ಹಾಸನ್ ಪ್ರವೇಶಿಸುವುದು ಖಚಿತವಾಗಿದೆ. ತಮಿಳು ರಾಜಕೀಯದಲ್ಲಿ ಕೆಲವು ಬದಲಾವಣೆಗಳನ್ನು ತರುವ ಅಗತ್ಯವಿದ್ದು, ಈ ಬದಲಾವಣೆಗಳನ್ನು ನಾನು ತರಲು ನಿರ್ಧರಿಸಿದ್ದೇನೆ. ಆದರೆ ಇದು ಎಷ್ಟು ಸಮಯವನ್ನು ತೆಗೆದುಕೊಳ್ಳಲಿದೆ ಎನ್ನುವುದನ್ನು ತಿಳಿಸುವುದು ಕಷ್ಟಸಾಧ್ಯ ಎಂದು ತಮ್ಮ ರಾಜಕೀಯ ಪ್ರವೇಶವನ್ನು ವಿಷಯದ ಬಗ್ಗೆ ಕಮಲ್ ಹಾಸನ್ ಸ್ಪಷ್ಟಪಡಿಸಿದರು. ರಾಜಕೀಯದಲ್ಲಿ ತೀವ್ರ ಬದಲಾವಣೆಯನ್ನು ತರುವುದು ಸತ್ಯ […]

2 years ago

ವಿಡಿಯೋ: ಭಾರೀ ಮಳೆಗೆ ನೋಡನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಯ್ತು ಎಮ್ಮೆಗಳು

ರಾಯಚೂರು/ಚಾಮರಾಜನಗರ: ಮಹದೇಶ್ವರ ಬೆಟ್ಟದಿಂದ ನಾಗಮಲೈಗೆ ಹೋಗುವ ಮಾರ್ಗ ಮಧ್ಯೆ ಇರುವ ಕೊಳ್ಳೆಗಾಲ ತಾಲೂಕಿನ ಹಲೆಯೂರು ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ನಾಲ್ಕು ಎಮ್ಮೆಗಳು ಕೊಚ್ಚಿಕೊಂಡು ಹೋಗಿದೆ. ಜಿಲ್ಲೆಯಲ್ಲಿ ಗುರುವಾರ ರಭಸದಿಂದ ಸುರಿದ ಮಳೆಗೆ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಮೇವು ಮೇಯುತ್ತಿದ್ದ ಎಮ್ಮೆಗಳು ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಹಳ್ಳವೊಂದರಲ್ಲಿ ಕೊಚ್ಚಿ ಹೋಗಿವೆ. ಗದ್ದೆಗಳಿಗೆ ನೀರು: ವಿವಿಧೆಡೆ ಭಾರೀ ಮಳೆ...

ನನ್ನ ಪಾತ್ರ ಇರಲ್ಲ, ದಸರಾ ಉಸ್ತುವಾರಿ ಅಮ್ಮನೇ ನೋಡಿಕೊಳ್ಳುತ್ತಾರೆ: ಯದುವೀರ್ ಒಡೆಯರ್

2 years ago

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2017ರ ಅರಮನೆಯಲ್ಲಿ ಸಿಂಹಾಸನ ಜೋಡಣೆಯಲ್ಲಿ ನನ್ನ ಪಾತ್ರ ಇರುವುದಿಲ್ಲ. ಎಲ್ಲ ಕಾರ್ಯಕ್ರಮಗಳನ್ನು ಅಮ್ಮನೆ ನೋಡಿಕೊಳ್ಳುತ್ತಾರೆ ಎಂದು ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಸಂಪ್ರದಾಯದಂತೆ ಸಿಂಹಾಸನ ಜೋಡಣೆಯಾಗಿದೆ....

ಕಾಶ್ಮೀರದಲ್ಲಿ ಮತ್ತೆ ಪಾಕ್‍ನಿಂದ ಗುಂಡಿನ ದಾಳಿ: ಬಿಎಸ್‍ಎಫ್ ಯೋಧ ಹುತಾತ್ಮ

2 years ago

ಶ್ರೀನಗರ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿಸಿದ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್‍ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಆರ್.ಎಸ್.ಪುರದ ಬಳಿಯಿರುವ ಅರ್ನಿಯಾ ಅಂತಾರಾಷ್ಟ್ರೀಯ ಗಡಿ ಪ್ರದೇಶ ದಲ್ಲಿ ಏಕಾಏಕಿ ಭಾರತೀಯ ಸೇನೆ ಮೇಲೆ ಗುಂಡಿನ...

ಎಲೆಕ್ಷನ್ ಬಂದ್ರೆ ಗೂಬೆ, ಆಮೆಗಳಿಗೆ ಕಂಟಕ – ಮಾಟಕ್ಕೆ ಮೊರೆ ಹೋಗ್ತಾರಂತೆ ರಾಜಕಾರಣಿಗಳು!

2 years ago

ಬೆಂಗಳೂರು: ಎಲೆಕ್ಷನ್ ಬಂದ್ರೆ ಗೂಬೆಗಳಿಗೆ ಕಂಟಕವಾದ್ರೆ, ಕಾಡುಪಾಪ-ಆಮೆಗಳ ಪ್ರಾಣಹರಣವಾಗುತ್ತೆ. ಅಚ್ಚರಿಯಾದ್ರೂ ಇದು ಘೋರ ಸತ್ಯ. ರಾಜಕೀಯ ಚದುರಂಗದಾಟಕ್ಕೆ ಆಮೆ, ಗೂಬೆ, ಕಾಡುಪಾಪ ವಿಲವಿಲನೆ ಒದ್ದಾಡಿ ಕೊನೆಯುಸಿರೆಳೆಯುತ್ತವಂತೆ. ಇದು ಖುದ್ದು ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋದವರು ಪಬ್ಲಿಕ್ ಟಿವಿಗೆ ಕೊಟ್ಟ ಶಾಕಿಂಗ್...

ಮೃತದೇಹ ಮನೆಯೊಳಗೆ ತರದಂತೆ ತಡೆದ ಮಾಲೀಕ- ರಾತ್ರಿಯಿಡೀ ಮಗನ ಶವದೊಂದಿಗೆ ರಸ್ತೆಯಲ್ಲಿದ್ದ ತಾಯಿ

2 years ago

ಹೈದರಾಬಾದ್: ಮಹಿಳೆಯೊಬ್ಬರು ಮಳೆಯ ನಡುವೆ ರಾತ್ರಿಯಿಡೀ ನಡುರಸ್ತೆಯಲ್ಲಿ ತನ್ನ ಮಗನ ಮೃತದೇಹವನ್ನು ಕಾವಲು ಕಾದ ಮನಕಲಕುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ತೆಲಂಗಾಣ ರಾಜ್ಯ ರಾಜಧಾನಿಯಾದ ಹೈದರಾಬಾದ್‍ನ ಕುಕ್ಕಟ್‍ಪಲ್ಲಿ ಪ್ರದೇಶದ ವೆಂಕಟೇಶ್ವರ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ಕು ವರ್ಷಗಳ ಹಿಂದೆ ಮೆಹಬೂಬ್‍ನಗರ...

ಚರಂಡಿ, ಬಚ್ಚಲ ನೀರನ್ನು ಬಕೆಟ್ ನಲ್ಲಿ ತುಂಬಿ ಹೊರಹಾಕ್ತಿದ್ದಾರೆ ಜನ!

2 years ago

ಗದಗ: ನಗರದ ಕುಂಬಾರೇಶ್ವರ ಕಾಲೋನಿ ನಿವಾಸಿಗಳ ಜೀವನ ಒಂದು ರೀತಿ ನರಕಮಯವಾಗಿದೆ. ತಾವು ಸ್ನಾನ ಮಾಡಿದ ಬಚ್ಚಲು ನೀರನ್ನ ನಂತರ ತಾವೇ ತುಂಬಿ ಹೊತ್ತು ಹೊರಹಾಕುತ್ತಿದ್ದಾರೆ. ಕುಂಬಾರ ಕಲೋನಿಯಲ್ಲಿ ಅನೇಕ ವರ್ಷಗಳಿಂದ ರಸ್ತೆ, ಚರಂಡಿ, ಒಳಚರಂಡಿ, ಶೌಚಾಲಯ ಇಲ್ಲದ ಕಾರಣ ಸಾಕಷ್ಟು...

ಈ ಗ್ರಾಮದಲ್ಲಿ ರೋಗಿಗಳನ್ನು ಕೊಂಡೊಯ್ಯೋದಕ್ಕೆ ಆಂಬುಲೆನ್ಸ್ ಗಿಂತ ಮೊದ್ಲು ಟ್ರ್ಯಾಕ್ಟರ್ ಬರ್ಬೇಕು!

2 years ago

ಧಾರವಾಡ: ತುರ್ತು ಚಿಕಿತ್ಸೆ ಬೇಕಾದಾಗ ಅಥವಾ ಗರ್ಭಿಣಿಗೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ 108ಕ್ಕೆ ಕರೆ ಮಾಡಿ ಅಂಬುಲೆನ್ಸ್ ಕರಿಸೋದು ಸಾಮಾನ್ಯ. ಅಂಬುಲೆನ್ಸ್ ಗೆ ಕರೆ ಮಾಡುವ ಮುಂಚೆ ಒಂದು ಟ್ರ್ಯಾಕ್ಟರ್‍ಗೆ ಕರೆ ಮಾಡಲೇಬೇಕಾದ ಪರಿಸ್ಥಿತಿ ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ ಎದುರಾಗಿದೆ....