Wednesday, 24th April 2019

Recent News

2 years ago

ಹೆಲ್ಮೆಟ್ ಧರಿಸದಿದ್ರೆ ದಂಡದ ಜೊತೆ 2 ಗಂಟೆ ಪೊಲೀಸ್ ಠಾಣೆಯಲ್ಲಿ ಕೂತಿರಬೇಕು!

ಚೆನ್ನೈ: ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದಾಗ ದಂಡ ಹಾಕುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲದ ಕಾರಣ ತಮಿಳುನಾಡು ಪೊಲೀಸರು ಇನ್ಮುಂದೆ ಹೆಲ್ಮೆಟ್ ರಹಿತ ವಾಹನ ಸವಾರರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದು ರಸ್ತೆ ಸುರಕ್ಷತೆ ಬಗ್ಗೆ ಪಾಠ ಮಡಲಿದ್ದಾರೆ. ಎಲ್ಲಾ ಪೊಲೀಸ್ ಠಾಣೆಗಳನ್ನ ತರಬೇತಿ ಕೇಂದ್ರಗಳನ್ನಾಗಿ ಘೋಷಿಸಲಾಗಿದೆ. ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿ ಸಿಕ್ಕಿಬಿದ್ದವರಿಗೆ ಎರಡು ಗಂಟೆಗಳ ಕಾಲ ಟ್ರಾಫಿಕ್ ನಿಯಮದ ಬಗ್ಗೆ ಪಾಠ ಮಾಡಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರೇಶ್ ಪೂಜಾರಿ ತಿಳಿಸಿದ್ದಾರೆ. […]

2 years ago

ಕುಡಿದ ಅಮಲಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಪೊಲೀಸರಿಗೆ ಶರಣಾದ

ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನೇ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜು ತನ್ನ ಪತ್ನಿ ಗಾಯತ್ರಿ (24) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಗುಡಿಬಂಡೆ ಮೂಲದ ಗಾಯತ್ರಿ ಹಾಗೂ ನಾಗರಾಜುಗೆ ಮದುವೆಯಾಗಿ ಇಬ್ಬರು ಮುದ್ದಾದ...

ರಜೆ ಅಂತಾ ಲೆಟರ್ ಕೊಟ್ರೆ ರಾಜೀನಾಮೆ ಎಂದು ಮನೆಗೆ ಕಳಿಸಿದ್ರು

2 years ago

ರಾಯಚೂರು: ಅನಕ್ಷರತೆ ಅನ್ನೋದು ಒಂದೊಂದು ಸಾರಿ ಎಷ್ಟು ದೊಡ್ಡ ಯಡವಟ್ಟಿಗೆ ದಾರಿ ಮಾಡಿಕೊಡುತ್ತದೆ ಅಂದ್ರೆ ರಾಯಚೂರಿನಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ತನ್ನ ಹೆಸರು ಬಿಟ್ಟು ಬೇರೆ ಏನನ್ನೂ ಬರೆಯಲು ಬಾರದ ಸಹಾಯಕಿಯ ರಜೆಯ ಪತ್ರ ರಾಜೀನಾಮೆ ಪತ್ರವಾಗಿ ಸರ್ಕಾರ ಅದನ್ನ...

ಎಂ ಸ್ಯಾಂಡ್ ಡಂಪ್ ಮಾಡುವಾಗ ಲಾರಿಯಿಂದ ಹೊರಬಂತು ಶವ- ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಆತ್ಮಹತ್ಯೆ ಪ್ರಕರಣ

2 years ago

ಚಿಕ್ಕಬಳ್ಳಾಪುರ: ಎಂ ಸ್ಯಾಂಡ್ ಮರಳು ಡಂಪ್ ಮಾಡುತ್ತಿದ್ದ ವೇಳೆ ಟಿಪ್ಪರ್ ಲಾರಿಯಿಂದ ಮೃತದೇಹವೊಂದು ಹೊರ ಬಂದಿರುವ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ನಂದಿ ಕ್ರಾಸ್ ಬಳಿಯ ನಿರ್ಮಾಣ ಹಂತದ ಮೆಗಾ ಡೈರಿಯಲ್ಲಿ ನಡೆದಿದೆ. ಮೆಗಾ ಡೈರಿ ಕಾಮಗಾರಿಗೆ ದೇವನಹಳ್ಳಿ ತಾಲೂಕಿನ...

ದಾದಿಯರೇ ಹೆರಿಗೆ ಮಾಡಿಸಲು ಪ್ರಯತ್ನಿಸಿ ಕೊನೆಗೆ ಬೇರೆ ಆಸ್ಪತ್ರೆಗೆ ಕಳಿಸಿದ್ರು- ತಾಯಿ ಹೊಟ್ಟೆಯಲ್ಲೇ ಮಗು ಸಾವು

2 years ago

ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ದೊಮ್ಮಸಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಹೆರಿಗೆಗಾಗಿ ನೇತ್ರಾವತಿ ಎಂಬ...

ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿಡುತ್ತೇನೆ: ಜಮೀರ್ ಅಹ್ಮದ್

2 years ago

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ ಎಂದು ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸವಾಲೆಸೆದಿದ್ದಾರೆ. ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲ್ಲ. ಗೆಲ್ಲುವುದಿರಲಿ ಈ ಕ್ಷೇತ್ರದಲ್ಲಿ ಠೇವಣಿಯೂ ಸಿಗಲ್ಲ. ನಿನ್ನೆ ದೇವೇಗೌಡರು...

ಲವ್ ಫೇಲಾಗಿದ್ದಕ್ಕೆ ಸಾಯೋಕೆ ಈತ ಏನ್ಮಾಡಿದ ಗೊತ್ತಾ?

2 years ago

ಹೈದರಾಬಾದ್: ಪ್ರೇಮ ವೈಫಲ್ಯದಿಂದ ಬೇಸತ್ತ ಯುವಕನೊಬ್ಬ ತನಗೆ ತಾನೇ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕಟಪಲ್ಲಿಯಲ್ಲಿ ನಡೆದಿದೆ. ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಮಲೇಷ್ಯನ್ ಟೌನ್ ಶಿಪ್ ನಿವಾಸಿ ದಿನೇಶ್ ಮೃತ ದುರ್ದೈವಿ. ತನ್ನ ಕಾರಿನಲ್ಲೇ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮ...

ಧಾರವಾಡ: ಆಯ ತಪ್ಪಿ ಆಳವಾದ ಗುಂಡಿಗೆ ಬಿದ್ದ ಬೈಕ್ ಸವಾರ

2 years ago

ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿನಗರ ಮಧ್ಯೆ ಬಿಆರ್‍ಟಿಸಿಎಸ್ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಬೈಕ್ ಸವಾರರೊಬ್ಬರು ಆಯ ತಪ್ಪಿ ಆಳವಾದ ಗುಂಡಿಯೊಳಗೆ ಬಿದ್ದಿರುವ ಘಟನೆ ನಡೆದಿದೆ. ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಸನಾ ಕಾಲೇಜ್ ಎದುರಿನಲ್ಲಿ ಬಿಆರ್‍ಟಿಎಸ್ ಕಾಮಗಾರಿ ನಡೆಯುತ್ತಿದ್ದು, ಮಾರ್ಗ ಮಧ್ಯೆ...