Tuesday, 21st May 2019

2 years ago

20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

ಮಂಗಳೂರು: ಉಸ್ತುವಾರಿ ಸಚಿವ ರಮಾನಾಥ ರೈ ಬಟ್ಟೆ ಒಗೆದವ ನಾನು. ಅವರ ಅಂಗಿ ಪ್ಯಾಂಟ್ 20 ವರ್ಷ ಒಗೆದಿದ್ದೇನೆ. ದಿನಂಪ್ರತಿ ಇಸ್ತ್ರಿ ಮಾಡಿಕೊಟ್ಟಿದ್ದೇನೆ. ಆದ್ರೆ ಇದೀಗ ಘಟನೆಯಾಗಿ 8 ದಿನ ಆಗ್ತಾ ಬಂದಿದೆ. ಆದ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಸಜಿಪದಲ್ಲಿ ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡ ಶರತ್ ತಂದೆ ತನಿಯಪ್ಪ, ರೈ ಚಿಕ್ಕಂದಿನಿಂದ ನಮ್ಮ […]

2 years ago

ಮಾಲ್‍ಗಳ ಬಿಲ್ ಮೇಲೆ ಜಿಎಸ್‍ಟಿ ಟ್ಯಾಕ್ಸ್: ಈ ಸಂದೇಶವನ್ನು ಕಳಿಸೋ ಮುನ್ನ ಈ ಸುದ್ದಿ ಓದಿ

ಬೆಂಗಳೂರು: “ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಲಾಗುತ್ತಿದೆ” ಹೀಗೊಂದು ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ದಯವಿಟ್ಟು ಈ ರೀತಿಯ ಸಂದೇಶವನ್ನು ಯಾರು ಕಳುಹಿಸಬೇಡಿ. ಇದು ಸುಳ್ಳು ಸುದ್ದಿಯಾಗಿದ್ದು ನಿಮ್ಮಲ್ಲಿ ಗೊಂದಲ ಮೂಡಿಸಿಲು ಯಾರೋ ಈ ಮಸೇಜ್ ಸೃಷ್ಟಿಸಿ ಸಾಮಾಜಿಕ...

ಮೈಸೂರಿನಲ್ಲಿ ಚೀನಾ ಮೊಬೈಲ್‍ಗಳನ್ನ ಪುಡಿ ಪುಡಿ ಮಾಡಿ ಪ್ರತಿಭಟನೆ

2 years ago

ಮೈಸೂರು: ಸಿಕ್ಕಿಂ ಗಡಿಯಲ್ಲಿ ಚೀನಾ ಭಾರತದ ಜೊತೆ ಕ್ಯಾತೆ ತೆಗೆದಿರುವುದನ್ನು ವಿರೋಧಿಸಿ ಇವತ್ತು ಮೈಸೂರಿನಲ್ಲಿ ಚೀನಾ ಮೊಬೈಲ್‍ಗಳನ್ನು ಪುಡಿ ಪುಡಿ ಮಾಡಿ ಪ್ರತಿಭಟಿಸಲಾಯಿತು. ಮೈಸೂರಿನ ಕೆಟಿ ಸ್ಟ್ರೀಟ್‍ನಲ್ಲಿ ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ಹತ್ತಾರು ಚೀನಾ ಮೊಬೈಲ್‍ಗಳನ್ನು ರಸ್ತೆಗೆ ಹಾಕಿ ಪುಡಿ...

ಆತ್ಮಹತ್ಯೆ ಮಾಡ್ಕೊಂಡ ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಕೊಂಡು ಠಾಣೆಗೆ ತಂದ ಪ್ರಿಯಕರ!

2 years ago

ಬಳ್ಳಾರಿ: ತನ್ನ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮೆಯ ಶವವನ್ನು ಪ್ರಿಯಕರ ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ಠಾಣೆಗೆ ತಂದ ಹೃದಯವಿದ್ರಾವಕ ಘಟನೆಯೊಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಸಿರುಗುಪ್ಪ ತಾಲೂಕಿನ ಸಿರಿಗೆರೆಯ ಹುಚ್ಚೇಶ್ವರ ನಗರದ ಹನುಮಂತಮ್ಮ(19) ಹಾಗೂ ಹಣ್ಣಿನ ವ್ಯಾಪಾರಿ ದಾವಲ್ ಸಾಬ್...

ಮಂಗ್ಳೂರು ಗಲಭೆ ಯಾಕೆ ನಿಯಂತ್ರಣ ಆಗ್ಲಿಲ್ಲ- ಐಪಿಎಸ್ ಅಧಿಕಾರಿಗಳಿಗೆ ಸಿಎಂ ಕ್ಲಾಸ್

2 years ago

ಬೆಂಗಳೂರು: ಯಾರ್ರಿ ಕೋಮುಗಲಭೆಗೆ ಸ್ಕೆಚ್ ಹಾಕಿದ್ದು? ಸ್ಕೆಚ್ ಗೊತ್ತಿದ್ದು ನಾಟಕ ಆಡೋ ಯಾರನ್ನೂ ಬಿಡೋದಿಲ್ಲ ಅಂತ ಮಾಧ್ಯಮದ ಮುಂದೆ ಹೇಳ್ತೀರಿ. ಕಳೆದ ಒಂದೂವರೆ ತಿಂಗಳಿನಿಂದ ಏನ್ ಏನ್ ಕೆಲ್ಸಾ ಮಾಡಿದ್ದೀರಿ ಹೇಳಿ ಎಂದು ಮಂಗಳೂರು ಪೊಲೀಸ್ ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದ್ದಾರೆ.  ...

ಫ್ರೂಟ್ಸ್ ಕೋಲ್ಡ್ ಸ್ಟೋರೇಜ್ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್-1 ಕೋಟಿಯಷ್ಟು ನಷ್ಟ

2 years ago

ಕೋಲಾರ: ಫ್ರೂಟ್ಸ್ ಕೋಲ್ಡ್ ಸ್ಟೋರೇಜ್ ಗೋದಾಮಿನಲ್ಲಿ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು ಒಂದು ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ತಾಲೂಕಿನ ವಡಗೂರು ಗೇಟ್ ಬಳಿ ಇರುವ ಸುಬ್ರಮಣಿ ಎಂಬವರಿಗೆ ಸೇರಿದ ವೆಂಕಟೇಶ್ವರ್ ಫ್ರೂಟ್ಸ್...

ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಎಸ್‍ವೈ ಮನೆಗೆ ಮುತ್ತಿಗೆ

2 years ago

ಶಿವಮೊಗ್ಗ: ಭಾನುವಾರದಂದು ಬಳ್ಳಾರಿಯಲ್ಲಿ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಇವತ್ತು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡಿಸಲು ಆಗ್ರಹಿಸಿದ ಕಾರ್ಯಕರ್ತರು, ಈ ಬಗ್ಗೆ...

ದಕ್ಷಿಣ ಕನ್ನಡ ಜಿಲ್ಲೆಯವ್ರೇನು ಷಂಡರಾ?- ಸರ್ಕಾರದ ವಿರುದ್ಧ ಶೋಭಾ ಕೆಂಡಾಮಂಡಲ

2 years ago

ಕಲಬುರಗಿ: ನಮ್ಮ ಜಿಲ್ಲೆಗಳಲ್ಲಿ ಏನೇ ಆದ್ರು ನೋಡಿಕೊಂಡು ಇರಲು ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಾ? ನಾವು ಪ್ರತಿಭಟನೆ ಮಾಡೋದು ತಪ್ಪಾ ಅಂತ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಲವತ್ತೆರಡು ದಿನ ಸುಮ್ಮನಿದ್ದೆವು. ಆದ್ರೆ ನೀವು...