Monday, 22nd July 2019

Recent News

1 year ago

ಪಿಂಕ್ ಹೊಯ್ಸಳ ಆಯ್ತು, ಈಗ ಪಿಂಕ್ ಟಾಯ್ಲೆಟ್ಸ್- ಮಹಿಳೆಯರ ರಕ್ಷಣೆಗಾಗಿ ಬೆಂಗ್ಳೂರಲ್ಲಿ ಹೊಸ ಶೌಚಾಲಯ

ಬೆಂಗಳೂರು: ಪಿಂಕ್ ಹೊಯ್ಸಳ ಕೇಳಿದ್ರಿ, ಈಗ ಪಿಂಕ್ ಟಾಯ್ಲೆಟ್ ಬೆಂಗಳೂರಿಗೆ ಬರುತ್ತಿವೆ. ಯುವತಿಯರು, ಹೆಣ್ಣು ಮಕ್ಕಳು, ಮಹಿಳೆಯರ ರಕ್ಷಣೆಗೆ ಅಂತ ಮೂಡಿಬಂದಿರುವ ಹೊಸ ಪರಿಕಲ್ಪನೆ ಇದು. ದೆಹಲಿಯಲ್ಲಿರೋ ಮಾದರಿ ಪಿಂಕ್ ಟಾಯ್ಲೆಟ್‍ಗಳನ್ನು ಬೆಂಗಳೂರಿಗೆ ತರೋಕೆ ಯೋಜನೆ ಸಿದ್ದವಾಗಿದೆ. ರಾಷ್ಟ್ರೀಯ ಮಕ್ಕಳು ಹಕ್ಕುಗಳ ಆಯೋಗ ಪಿಂಕ್ ಟಾಯ್ಲೆಟ್ ಯೋಜನೆಗೆ ಚಾಲನೆ ನೀಡುವಂತೆ ರಾಜ್ಯ ಮಕ್ಕಳ ಆಯೋಗಕ್ಕೆ ಸೂಚಿಸಿದೆ. ಸ್ವಚ್ಛತೆ, ರಕ್ಷಣೆ ಇದರ ಮುಖ್ಯ ಉದ್ದೇಶವಾಗಿದ್ದು, ದಿನದ 24 ತಾಸು ಕಾರ್ಯನಿರ್ವಹಿಸುತ್ತದೆ. ಇದರ ಉಸ್ತುವಾರಿಯನ್ನ ಮಹಿಳೆಯರೇ ನೋಡಿಕೊಳ್ಳುತ್ತಾರೆ. ಸಾಲದ್ದಕ್ಕೆ ಸ್ಯಾನಿಟರಿ […]

1 year ago

ಗ್ರಾ.ಪಂ ಸದಸ್ಯನಿಂದ ದೋಖಾ- ಮದ್ವೆಯಾಗುವುದಾಗಿ ಹೇಳಿ ಅತ್ಯಾಚಾರ ಮಾಡಿ ಸ್ವಂತ ಮಗು ಮಾರಿದನೇ?

ಶಿವಮೊಗ್ಗ: ಗ್ರಾಮ ಪಂಚಾಯತಿ ಸದಸ್ಯನೊಬ್ಬ ತನ್ನ ಸಂಬಂಧಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಅಲ್ಲದೆ, ತನ್ನದೇ ಮಗುವನ್ನು ಮಾರಾಟ ಮಾಡಿದ್ದಾನೆ ಎಂಬ ಆರೋಪಕ್ಕೂ ತುತ್ತಾಗಿದ್ದಾನೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ನಡೆದಿದೆ. ರಿಪ್ಪನ್‍ಪೇಟೆ ಗ್ರಾ.ಪಂ ಗೆ ಮಳವಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸದಸ್ಯ ಕೆ.ಚಂದ್ರಶೇಖರ್ ಈ ರೀತಿ ವಂಚನೆ ಮಾಡಿರುವ...

ಚಾರ್ಮಾಡಿಯಲ್ಲಿ ಹೆಚ್ಚಿದ  ಟ್ರಾಫಿಕ್ ಜಾಮ್- ಅಪಘಾತ ತಪ್ಪಿಸಲು ಪೊಲೀಸರನ್ನು ನೇಮಿಸುವಂತೆ ಸ್ಥಳೀಯರ ಆಗ್ರಹ

1 year ago

ಚಿಕ್ಕಮಗಳೂರು: ಶಿರಾಡಿಘಾಟ್ ರಸ್ತೆ ಬಂದ್ ಆದ ಮೇಲೆ ಬೆಂಗಳೂರು-ಮಂಗಳೂರು ಹೆದ್ದಾರಿಯ ವಾಹನಗಳು ಚಾರ್ಮಾಡಿ ಘಾಟ್‍ನಲ್ಲಿ ಸಂಚರಿಸುತ್ತಿರೋದ್ರಿಂದ ಚಾರ್ಮಾಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ದಿನಕ್ಕೆ ಎರಡ್ಮೂರು ಗಂಟೆ ವಾಹನ ಸವಾರರು ನಿಂತಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ,...

ಬಲು ಮಾತಾಡ್ತಿಯಾ, ಮುಚ್ಚೋ ಬಾಯಿ- ಮಂಡ್ಯದಲ್ಲಿ ಗರಂ ಆದ ಸಾರಿಗೆ ಸಚಿವ

1 year ago

ಮಂಡ್ಯ: ತಡಿಲಾ ಗೌಡ, ಬಲು ಮಾತಾಡ್ತಿಯಾ ಕಣ್ಲ ನೀನು. ನಿನ್ನಂತವರು ನನ್ನತ್ರಾನೂ ಇದ್ದಾರೆ. ಸ್ವಲ್ಪ ಸುಮ್ನಿರ್ಲಾ. ಹೀಗಂತ ವ್ಯಕ್ತಿಯೊಬ್ಬರ ವಿರುದ್ಧ ಸಾರಿಗೆ ಸಚಿವ ಹೆಚ್‍ಎಂ ರೇವಣ್ಣ ಗರಂ ಆಗಿದ್ದಾರೆ. ಮಂಡ್ಯದ ಮದ್ದೂರಿನ ಕೊಪ್ಪ ಸಾರಿಗೆ ಬಸ್ಸ್ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಸಚಿವರು...

ಪ್ರತಾಪ್ ಸಿಂಹರನ್ನು ದನಕ್ಕೆ ಹೋಲಿಸಿದ ಸಚಿವ ರಮೇಶ್ ಕುಮಾರ್

1 year ago

ಗದಗ: ಆರೋಗ್ಯ ಸಚಿವ ರಮೇಶ್ ಕುಮಾರ್ ಮೈಸೂರು ಸಂಸದ ಪ್ರತಾಪ್ ಸಿಂಹರನ್ನು ದನಕ್ಕೆ ಹೋಲಿಕೆ ಮಾಡಿ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ನಗರದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲೇಖನ ಬರೆಯುವ ಅವಕಾಶ ಸಿಕ್ಕಿದೆ ಎಂದು...

ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ

1 year ago

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ರೋಹಿಣಿ ಸಿಂಧೂರಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಎಸ್‍ಐಐಡಿಸಿ) ಆಡಳಿತ ನಿರ್ದೇಶಕಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ರೋಹಿಣಿ ಅವರ...

ಅಂಧ ಯುವತಿಗೆ ಬಾಳು ಕೊಟ್ಟ ಯುವಕ -ಸಂಭ್ರಮದಿಂದ ನಡೆಯಿತು ಮದುವೆ

1 year ago

ಕೋಲಾರ: ತಾನು ಮದುವೆಯಾಗುವ ಹುಡುಗಿ ಸುಂದರವಾಗಿರಬೇಕು, ಕೈ ತುಂಬಾ ಹಣ-ಅಂತಸ್ತು ತರಬೇಕು ಎನ್ನುವ ಜನಗಳ ನಡುವೆ ಯಾವುದನ್ನು ಲೆಕ್ಕಿಸದೆ ಅಂಧ ಹುಡುಗಿಯನ್ನು ಮದುವೆಯಾಗುವ ಮೂಲಕ ಸಮಾಜಕ್ಕೆ ವ್ಯಕ್ತಿಯೊಬ್ಬರು ಮಾದರಿಯಾದ್ದಾರೆ. ಹೌದು, ಕೋಲಾರದ ಬಯಲು ಬಸವೇಶ್ವರ ದೇವಾಲಯದಲ್ಲಿಂದು ಜಿಲ್ಲೆಯ ಮಾಲೂರು ತಾಲೂಕಿನ ಅರಳೇರಿ...

ಕೊಡಗಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

1 year ago

ಮಡಿಕೇರಿ: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರದ ಕರಡಿಗೋಡುವಿನಲ್ಲಿ ನಡೆದಿದೆ. ಕರಡಿಗೋಡು ಗ್ರಾಮದ ನಿವಾಸಿ ಬೆಳೆಗಾರ ಕುಕ್ಕುನೂರು ಮೋಹನ್ ದಾಸ್ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಕರಡಿಗೋಡುವಿನಲ್ಲಿರುವ ತನ್ನ ಕಾಫಿ ತೋಟದಲ್ಲಿ ಕಾರ್ಮಿಕರನ್ನು ಬಿಟ್ಟು ಮಧ್ಯಾಹ್ನ ಮನೆಗೆ...