Sunday, 22nd July 2018

Recent News

10 months ago

ಲಾರಿಗೆ ಹಿಂಬದಿಯಿಂದ ಮಿನಿ ಲಾರಿ ಡಿಕ್ಕಿ – ಇಬ್ಬರಿಗೆ ಗಂಭೀರ ಗಾಯ

ಹುಬ್ಬಳ್ಳಿ: ವೇಗವಾಗಿ ಬಂದ್ ಮಿನಿಲಾರಿ ಇನ್ನೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಮಿನಿ ಲಾರಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ನಡೆದಿದೆ. ಹಾವೇರಿ ಮೂಲದ ಮಿನಿ ಲಾರಿ ಚಾಲಕ ಶಿವಕುಮಾರ ಹಾಗೂ ಕ್ಲೀನರ್ ಈರಣ್ಣ ಎಂಬವರು ಲಾರಿಯಲ್ಲಿ ಸಿಲುಕಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಿನಿ ಲಾರಿ ವೇಗವಾಗಿ ಬಂದು ಹಿಂಬದಿಯಿಂದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ನಡುವೆ ಸಿಲುಕಿಕೊಂಡಿದ್ದ ಚಾಲಕ […]

10 months ago

ಸಾಲ ನೀಡಲು ಹಿಂದೇಟು ಹಾಕಿದ ಮ್ಯಾನೇಜರ್ ಮೇಲೆ ರೈತರಿಂದ ಹಲ್ಲೆ

ಧಾರವಾಡ: ಸಾಲ ನೀಡಲು ಹಿಂದೇಟು ಹಾಕಿದ ವರೂರು ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮೇಲೆ ಇಬ್ಬರು ರೈತರು ಹಲ್ಲೆ ನಡೆಸಿದ್ದಾರೆ. ಬಿಎಸ್ ಬಿರಾದರ್ ಎಂಬವರು ಹಲ್ಲೆಗೊಳಗಾದ ಬ್ಯಾಂಕ್ ಮ್ಯಾನೇಜರ್. ಕುರಡಕೇರಿ ಗ್ರಾಮದ ಮಲ್ಲಿಕಾರ್ಜುನಗೌಡ ಪಾಟೀಲ್ ಮತ್ತು ಹಡಪದ್ ಎಂಬವರು ಸಾಲ ನೀಡುವಂತೆ ಮನವಿ ಮಾಡಿದ್ದರು. ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಸೆಪ್ಟಂಬರ್...

ಬಿಗ್ ಬಾಸ್ ನಲ್ಲಿ ಅವಕಾಶಕ್ಕಾಗಿ ಸೈಕಲ್ ನಲ್ಲೇ ಬೆಂಗ್ಳೂರಿಗೆ ಬರ್ತಿದ್ದಾನೆ ಬೆಳಗಾವಿ ಯುವಕ!

10 months ago

ಧಾರವಾಡ: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‍ನಲ್ಲಿ ಅವಕಾಶ ಕೊಡಿ ಎಂದು ಜಿಲ್ಲೆಯ ಯುವಕನೊಬ್ಬ ಬೆಂಗಳೂರಿಗೆ ಸೈಕಲ್ ಪ್ರಯಾಣ ಬೆಳೆಸಿದ್ದಾನೆ. ಹೌದು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮುಡಲಗಿ ಪಟ್ಟಣದ ಮಂಜುನಾಥ ರೆಳೆಕರ ಭಾನುವಾರ ಸೈಕಲ್ ನಲ್ಲಿ ತನ್ನ ಪ್ರಯಾಣ...

ಪ್ರಿಯಕರನೊಂದಿಗೆ ಸೇರಿ ಪತಿಯನ್ನೆ ಕೊಂದ ಪತ್ನಿ!

10 months ago

ಧಾರವಾಡ: ಪ್ರಿಯಕರನೊಂದಿಗೆ ಸೇರಿ ಪತಿಯನ್ನೆ ಕೊಂದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕಲಘಟಗಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತುಳಸಾ ಅಜ್ಜಪ್ಪ ಕನಕಾತ್ರಿ(28) ಹಾಗೂ ಆಕೆಯ ಪ್ರಿಯಕರ ಯಲ್ಲಪ್ಪ(32) ಬಂಧಿತ ಆರೋಪಿಗಳು. ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡನನ್ನೇ ಪತ್ನಿ ತುಳಸಾ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ....

ಎಲ್ಲಾ ಕಾಯಿಲೆಗೆ ಸಂಗೀತವೇ ಸಂಜೀವಿನಿ: ಯೋಗಪಟು ವೈದ್ಯರು ಇಲ್ಲಿ ದೈವಸ್ವರೂಪಿ

10 months ago

ಧಾರವಾಡ: ಸಾಮಾನ್ಯವಾಗಿ ಡಾಕ್ಟರ್ ಅಂದರೆ ಇಂಜೆಕ್ಷನ್, ಔಷಧಿ ಕೊಟ್ಟು ರೋಗ ಗುಣಪಡಿಸುತ್ತಾರೆ. ಆದರೆ ಇವತ್ತಿನ ಧಾರವಾಡದ ನಮ್ಮ ಪಬ್ಲಿಕ್ ಹೀರೋ ಡಾಕ್ಟರ್ ವಿನೋದ್ ಕುಲಕರ್ಣಿ. ಅವರು ಹಾಡು ಮತ್ತು ಸಂಗೀತದ ಮೂಲಕ ರೋಗ ಗುಣಪಡಿಸುತ್ತಾರೆ. ಮೂಲತಃ ವಿಜಯಪುರ ಜಿಲ್ಲೆಯವರಾದ ವಿನೋದ್ ಕುಲಕರ್ಣಿ...

ಹಲವು ಸುಳ್ಳು ಹೇಳಿ ಪ್ರಧಾನಿಯಾದ ಮೋದಿ: ವಿನಯ್ ಕುಲಕರ್ಣಿ

10 months ago

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದರೆ ನಮಗೆ ಏನು ಅಭ್ಯಂತರವಿಲ್ಲ. ಹಲವು ಸುಳ್ಳು ಹೇಳಿ ಅವರು ಪ್ರಧಾನಿಯಾಗಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ...

ವಾಮಾಚಾರಕ್ಕೆ ಕೋಣ ಬಲಿ: ನಾಲಗೆ ಕತ್ತರಿಸಿ ಕೊಂದೇ ಬಿಟ್ರು!

10 months ago

ಧಾರವಾಡ: ಮನೆ ಹಿಂದೆ ಕಟ್ಟಿ ಹಾಕಿದ್ದ ಕೋಣದ ನಾಲಗೆ ಕತ್ತರಿಸಿ ಬಲಿ ಪಡೆದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮಹಾಲಯ ಅಮವಾಸ್ಯೆ ಇರುವ ಕಾರಣ ದುಷ್ಕರ್ಮಿಗಳು ವಾಮಾಚಾರಕ್ಕೆ...

ಪತ್ನಿ ಇರುವಾಗಲೇ 2ನೇ ಮದ್ವೆಯಾಗಿ ಮೋಸ ಮಾಡ್ದ ಡಾಕ್ಟರ್!

10 months ago

ಧಾರವಾಡ: ವೈದ್ಯನೊಬ್ಬ ಮೊದಲನೇ ಹೆಂಡತಿ ಇರುವಾಗಲೇ ಎರಡನೇ ಮದುವೆ ಆಗಿ ಎರಡನೇ ಹೆಂಡತಿಗೆ ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಬಸವನಗರ ಬಡಾವಣೆಯ ನಿವಾಸಿಯಾಗಿರುವ ಸಂತೋಷ್ ವಲಾಂಡಿಕರ್ ಎಂಬ ವೈದ್ಯ ಕಳೆದ ಮೇ ತಿಂಗಳಿನಲ್ಲಿ ವಿಜಯಪುರದಲ್ಲಿ ಸುಶೀಲಾ (ಹೆಸರು ಬದಲಿಸಲಾಗಿದೆ)...