Sunday, 16th June 2019

2 years ago

ವರದಕ್ಷಿಣೆ ಕಿರುಕುಳ ಆರೋಪ- ಪ್ರೀತಿಸಿ ಕೈಹಿಡಿದ ಪತಿಯೇ ವಿಷಪ್ರಾಶನ ಮಾಡಿದ್ನಾ?

ಬೆಂಗಳೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಮೈಕೋಲೇಔಟ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ವರದಕ್ಷಿಣೆಗಾಗಿ ಗಂಡನೇ ಪತ್ನಿಯನ್ನೇ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ. 28 ವರ್ಷ ವಯುಸ್ಸಿನ ನೇತ್ರಾ ಸಾವನ್ನಪ್ಪಿರೋ ಮಹಿಳೆ. ಉದಯ್ ಹಾಗೂ ನೇತ್ರಾ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ದಿನ ಕಳೆದಂತೆ ಪತಿ ಉದಯ್ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ನೇತ್ರಾಳ ಪೋಷಕರು ಮೊದಮೊದಲು ಹಣ ಕೇಳಿದಾಗೆಲ್ಲಾ ಕೊಡುತ್ತಿದ್ದರು. ಇಲ್ಲಿವರೆಗೆ ಸುಮಾರು 5 ಲಕ್ಷ ರೂ. ಹಣ ಕೊಟ್ಟಿದ್ದಾರೆ. ಹಣ […]

2 years ago

ಮಂಡ್ಯದಲ್ಲಿ ಮರಳು ದಂಧೆಕೋರರ ಅಟ್ಟಹಾಸ – ನಾಲ್ವರು ಪೊಲೀಸರ ಮೇಲೆ ಅಟ್ಯಾಕ್

ಮಂಡ್ಯ: ಮರಳು ದಂಧೆಕೋರರನ್ನು ಪ್ರಶ್ನೆ ಮಾಡಿದ್ದಕ್ಕೆ ನಾಲ್ವರು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಅಟ್ಟಹಾಸ ನಡೆಸಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕೊರವನಗುಂದಿ ಗ್ರಾಮದ ಬಳಿ ನಡೆದಿದೆ. ಎಸ್‍ಪಿ ಸ್ಕ್ವಾಡ್‍ಗೆ ಸೇರಿದ ಗುರುಮೂರ್ತಿ, ಶಶಿ, ಹರೀಶ್, ಮತ್ತು ದೇವರಾಜು ಮರಳು ದಂಧೆಕೋರರಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ. ಗುರುವಾರ ರಾತ್ರಿ ಪೊಲೀಸ್ ಸಿಬ್ಬಂದಿ ಎಂದಿನಂತೆ ರೌಂಡ್ಸ್ ಗೆ ಹೋಗಿದ್ದಾರೆ....

ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

2 years ago

ಹೈದರಾಬಾದ್: ಪತಿ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದಕ್ಕೆ ಮನನೊಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಿಯಾಪುರ್‍ನಲ್ಲಿ ನಡೆದಿದೆ. 23 ವರ್ಷದ ಶ್ವೇತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸಂಗಾರೆಡ್ಡಿ ಪಟ್ಟಣದ ಶ್ವೇತಾರನ್ನು ವಿಕರಾಬಾದ್ ನಿವಾಸಿ ಮರಿಚೆನ್ನ ರೆಡ್ಡಿ ಎಂಬರೊಂದಿಗೆ...

ಒಂದೇ ಕುಟುಂಬದ ಐವರ ಶವ ಪತ್ತೆ: ಇದು ಕೊಲೆಯೇ? ಆತ್ಮಹತ್ಯೆಯೇ?

2 years ago

ಹೈದರಾಬಾದ್: ನಗರದ ಪತನಚೇರು ಬಳಿಯ ಕೊಲ್ಲರು ಔಟರ್ ರಿಂಗ್ ರೋಡ್ (ಓಆರ್‍ಆರ್) ಬಳಿ ಒಂದೇ ಕುಟುಂಬದ ಐವರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಮೂವರು ಮಹಿಳೆಯರ ಶವಗಳು ಪೊದೆಯಲ್ಲಿ ಪತ್ತೆಯಾಗಿದ್ದು, ಈ ಸ್ಥಳದಿಂದ 2 ಕಿ.ಮೀ. ದೂರದಲ್ಲಿರುವ ಓಆರ್‍ಆರ್ ಬಳಿಯ ಅಂಡರ್ ಪಾಸ್...

ಗೋ ಹತ್ಯೆ ಬಗ್ಗೆ ದೂರು ನೀಡಿದ್ದ ಮಹಿಳಾ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ

2 years ago

ಬೆಂಗಳೂರು: ನಗರದಲ್ಲಿ ಪ್ರಾಣಿ ಪ್ರೀತಿ ತೋರಿಸಲು ಹೋದ ಮಹಿಳಾ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಂದಿನಿ ಎಂಬವರೇ ಹಲ್ಲೆಗೊಳಗಾದ ಮಹಿಳಾ ಟೆಕ್ಕಿ. ಪ್ರತಿಷ್ಠಿತ ಸಾಫ್ಟ್‍ವೇರ್ ಕಂಪನಿಯಲ್ಲಿ ಸೀನಿಯರ್ ಅಧಿಕಾರಿಯಾಗಿದ್ದ ನಂದಿನಿ ಅವರು ಗೋಹತ್ಯೆ ಬಗ್ಗೆ ತಲಘಟ್ಟಪುರ ಠಾಣೆಯಲ್ಲಿ ದೂರು ನೀಡಿದ್ದರು....

ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ-8 ವರ್ಷಗಳ ಬಳಿಕ ರೇಪಿಸ್ಟ್ ಅಪ್ಪ ಅರೆಸ್ಟ್!

2 years ago

ಹೈದರಾಬಾದ್: ಎಂಟು ವರ್ಷಗಳ ಹಿಂದೆ 52 ವರ್ಷದ ತಂದೆ ತನ್ನ 19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಈಗ ಕಾಮುಕ ಅಪ್ಪ ಪುಂಜಗುಟ್ಟ ಪೊಲೀಸರ ಅಥಿತಿಯಾಗಿದ್ದಾನೆ. ಆರೋಪಿಯನ್ನು ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಬಿಎಸ್ ಮಖ್ತಾದಲ್ಲಿ ನೆಲೆಸಿದ್ದು, ನಾಮ್‍ಪಲ್ಲಿಯಲ್ಲಿ ಡಿಟಿಪಿ...

ಅಮ್ಮ ಮೊಬೈಲ್ ಕಿತ್ತುಕೊಂಡಿದ್ದಕ್ಕೆ 17 ವರ್ಷದ ಮಗಳು ನೇಣಿಗೆ ಶರಣು!

2 years ago

ಕೊಲ್ಕತ್ತಾ: ಅಮ್ಮ ಮೊಬೈಲ್ ಫೋನ್ ಕಿತ್ತುಕೊಂಡಳು ಎಂದು ಕೋಪಗೊಂಡು 11ನೇ ತರಗತಿ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ಇದೇ ವಯಸ್ಸಿನ ಹುಡುಗಿಯೊಬ್ಬಳು ಓದುವ ಕಡೆ ಗಮನಹರಿಸುತ್ತಿಲ್ಲ ಅಂತ ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಜ್ಯೋತಿ...

ಕಡಿಮೆ ಅಂಕ ಪಡೆದಿದ್ದಕ್ಕೆ ಬೈದರೆಂದು ಶಿಕ್ಷಕರ ಮೇಲೆಯೇ ಹಲ್ಲೆಗೈದ ವಿದ್ಯಾರ್ಥಿ!

2 years ago

ಚಂಡೀಗಢ: 12ನೇ ತರಗತಿ ವಿದ್ಯಾರ್ಥಿಯೊಬ್ಬ ಗಣಿತ ಶಿಕ್ಷಕರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಝಜ್ಜರ್ ಜಿಲ್ಲೆಯ ಬಹದ್ದೂರ್‍ಗಢ ಪಟ್ಟಣದ ಖಾಸಗಿ ಶಾಲೆಯಲ್ಲಿ ನಡೆದಿದೆ. ಹಿಮಾಂಶು ಗಾರ್ಗ್ ಎಂಬಾತನೇ ಶಿಕ್ಷಕ ರವೀಂದ್ರ ಅವರ ಮೇಲೆ ಹಲ್ಲೆಗೈದ ವಿದ್ಯಾರ್ಥಿ. ಬಹದ್ದೂರ್‍ಗಢ ಪಟ್ಟಣದ...