Saturday, 20th July 2019

1 year ago

1 ಕೋಟಿ ರೂ.ಗಾಗಿ ಸ್ನೇಹಿತರಿಂದಲ್ಲೇ ಖ್ಯಾತ ಖಳನಟನ ಬಾಮೈದನ ಅಪಹರಣ – ಸಿನಿಮಾ ಶೈಲಿಯಲ್ಲಿ ಆರೋಪಿಗಳ ಅರೆಸ್ಟ್

ಬೆಂಗಳೂರು: ಹಣಕ್ಕಾಗಿ ಖಳನಟ ದಿವಂಗತ ವಜ್ರಮುನಿ ಅವರ ಬಾಮೈದನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಅಪಹರಣಕಾರರನ್ನು ಪೊಲೀಸರು ಸಿನಿಮಾ ಶೈಲಿಯಲ್ಲಿ ಬಂಧಿಸಿದ್ದಾರೆ. ವಜ್ರಮುನಿಯವರ ಬಾಮೈದ ಶಿವಕುಮಾರ್ ಬಾಷ್ ಕಂಪನಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದರು. ಇವರನ್ನು ಒಂದು ಕೋಟಿ ಹಣಕ್ಕಾಗಿ ಸ್ನೇಹಿತರೇ ಅಪಹರಣ ಮಾಡಿದ್ದರು. ಆದರೆ ಇಂದು ಪೊಲೀಸರ ಕಾರ್ಯಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯ ವಿವರ?: ಶಿವಕುಮಾರ್ ಸ್ನೇಹಿತ ಸತ್ಯ ಹೊಸ ಕಾರನ್ನು ತೆಗೆದುಕೊಂಡು ಸಾಲ ತೀರಿಸಲು ಆಗದೇ ಪರದಾಡುತ್ತಿದ್ದನು. ಈ ವೇಳೆ ಶಿವಕುಮಾರ್ ಗೆ ಸಾಲ ಕೊಡುವಂತೆ ಬೇಡಿಕೆ […]

1 year ago

ನಿಂತು ಹಾಡಿಲ್ಲ ಎಂದು ಗರ್ಭಿಣಿ ಗಾಯಕಿಗೆ ಗುಂಡು ಹಾರಿಸಿದ್ರು -ವಿಡಿಯೋ

ಇಸ್ಲಾಮಬಾದ್: ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದ ಗಾಯಕಿ ನಿಂತು ಕೊಂಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಖಾನಾ ಜಿಲ್ಲೆಯಲ್ಲಿ ನಡೆದಿದೆ. ಕಂಗ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ಕೃತ್ಯ ನಡೆದಿದ್ದು, 24 ವರ್ಷದ ಗಾಯಕಿ ಸಮೀನಾ ಸಿಂಧು ಮೃತ ದುರ್ದೈವಿ. ಆರೋಪಿ ತಾರೀಕ್ ಅಹ್ಮದ್ ಕುಳಿತುಕೊಂಡೇ...

ಲಾರಿ ಮೇಲುಗಡೆ ಕುಳಿತು ಮದುವೆಗೆ ತೆರಳುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶ- ಯುವಕ ದುರ್ಮರಣ

1 year ago

ರಾಯಚೂರು: ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟು, ಎಂಟು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಬುದ್ದಿನ್ನಿ ಬಳಿ ನಡೆದಿದೆ. 18 ವರ್ಷದ ಸದ್ದಾಂ ಲಿಂಗಸುಗೂರು ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡವರು ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ...

ಬೆಂಗ್ಳೂರಲ್ಲಿ ಬುಲೆಟ್ ಬೈಕ್ ಸ್ಫೋಟ- ವೈರಲ್ ವಿಡಿಯೋ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

1 year ago

ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ರಾಯಲ್ ಎನ್ ಫೀಲ್ಡ್ ಬೈಕ್ ಸವಾರ ಸುಟ್ಟು ಮೃತಪಟ್ಟಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೇಗೂರು ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಬೈಕಿಗೆ ಫುಲ್ ಟ್ಯಾಂಕ್ ಪೆಟ್ರೋಲ್...

ಐಷರಾಮಿ ಬಸ್ಸಿಗೆ ಹಿಂದಿನಿಂದ ಕಂಟೈನರ್ ಡಿಕ್ಕಿ- ಇಬ್ಬರ ದುರ್ಮರಣ, ನಾಲ್ವರಿಗೆ ಗಾಯ

1 year ago

ಮುಂಬೈ: ಕಂಟೈನರ್ ಮತ್ತು ಲಕ್ಸುರಿ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಮುಂಬೈ-ಅಹಮಾದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಧಾನು ಎಂಬ ಪ್ರದೇಶದಲ್ಲಿ ಈ ಘಟನೆ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ. ಹೆದ್ದಾರಿಯ ಮೊದಲ...

ಕೆಎಫ್‍ಸಿ ಸೆಂಟರ್ ಗೆ ನುಗ್ಗಿ ದಾಂಧಲೆ- ಪಿಜ್ಜಾ ಬಾಯ್ ಗೆ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದ ದುಷ್ಕರ್ಮಿಗಳು

1 year ago

ಬೆಂಗಳೂರು: ದುಷ್ಕರ್ಮಿಗಳು ದಾಂಧಲೆ ನಡೆಸಿ ಪಿಜ್ಜಾ ಬಾಯ್‍ಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರ ಕೆಎಫ್‍ಸಿ ಪಿಜ್ಜಾ ಸೆಂಟರ್ ನಲ್ಲಿ ನಡೆದಿದೆ. ಒರಿಸ್ಸಾ ಮೂಲದ ಸಮೀರ್(25) ಮೃತ ದುರ್ದೈವಿ. ಸೋಮವಾರ ರಾತ್ರಿ ಬೈಕಿನಲ್ಲಿ ನಾಲ್ವರು ದುಷ್ಕರ್ಮಿಗಳು...

ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯನ್ನು ಬರ್ಬರವಾಗಿ ಕೊಲೆಗೈದ!

1 year ago

ತುಮಕೂರು: ತನ್ನ ಅತ್ತೆ ಮತ್ತು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆಯೊಂದು ತುಮಕೂರಿನ ಪಾವಗಡ ತಾಲೂಕಿನ ಗೌಡಿ ಹಟ್ಟಿಯಲ್ಲಿ ನಡೆದಿದೆ. ರಾಮಾಂಜಿನಮ್ಮ(50), ನಾಗಮಣಿ(28) ಕೊಲೆಯಾದ ದುರ್ದೈವಿಗಳು. ಮಂಜುನಾಥ್ (30) ಹತ್ಯೆಗೈದ ಆರೋಪಿ. ದಿನಗೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಪತ್ನಿ ನಾಗಮಣಿಯನ್ನು...

ಮಹಾರಾಷ್ಟ್ರದಲ್ಲಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಟ್ರಕ್ ಪಲ್ಟಿ- ಮಹಿಳೆಯರು ಸೇರಿ ವಿಜಯಪುರದ 17 ಮಂದಿ ದುರ್ಮರಣ

1 year ago

ಮುಂಬೈ: ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ ಮೆರೆದಿದ್ದು, ಟ್ರಕ್ ಹೆದ್ದಾರಿಯ ಬ್ಯಾರ್‍ಕೇಡ್ ಗೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾದ ಪರಿಣಾಮ 17 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಂಡಾಲಾದ ಬಳಿ ನಡೆದಿದೆ. ಘಟನೆಯಲ್ಲಿ ಹಲವು ಮಹಿಳೆಯರು ಸೇರಿ 17...