Tuesday, 16th July 2019

1 year ago

ಏಕಾಏಕಿ ಹೊತ್ತಿ ಉರಿದ ನಿಂತಿದ್ದ ಕಾರ್!

ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಕಾರೊಂದು ನಿಂತಿದ್ದ ಜಾಗದಲ್ಲಿಯೇ ಬೆಂಕಿ ಹತ್ತಿಕೊಂಡು ಧಗಧಗನೆ ಉರಿದು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗುರುವಾರ ರಾತ್ರಿ 9.40ರ ಸುಮಾರಿಗೆ ಮಂಗಳೂರಿನ ಕಾವೂರಿನಲ್ಲಿ ಐ 20 ಹುಂಡೈ ಕಾರನ್ನು ನಿಲ್ಲಿಸಿ, ಅದರಲ್ಲಿದ್ದವರು ಅಲ್ಲಿಯೇ ಏನೋ ಖರೀದಿಗೆ ಹೋಗಿದ್ದರು. ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು ಎಲ್ಲರೂ ನೋಡ ನೋಡುತ್ತಿದ್ದಂತೆ ಜ್ವಾಲೆ ಉಗುಳುತ್ತಾ ಉರಿಯತೊಡಗಿದೆ. ಬಳಿಕ ಅಗ್ನಿಶಾಮಕ ದಳ, ಪೊಲೀಸರು ಸೇರಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಕಾರು ಸಂಪೂರ್ಣ ಉರಿದು ಹೋಗಿತ್ತು. ಕಾರು […]

1 year ago

ನಿರ್ಮಾಪಕ ಆನಂದ್ ಅಪ್ಪುಗೋಳ್ ಒಡೆತನದ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ: ನಿರ್ಮಾಪಕ ಆನಂದ ಅಪ್ಪುಗೋಳ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಅಪ್ಪುಗೋಳ್‍ಗೆ ಸೇರಿದ ವಾಹನಗಳನ್ನು ಜಪ್ತಿ ಮಾಡಿದ್ದಾರೆ. 33 ಲಕ್ಷ ರೂಪಾಯಿ ಮೌಲ್ಯದ ಫಾರ್ಚುನರ್, ಇನ್ನೋವಾ ಹಾಗೂ ಕ್ವಾಲಿಸ್ ಕಾರು, 7.85 ಲಕ್ಷ ಮೌಲ್ಯದ ವಿವಿಧ ಕಂಪೆನಿಯ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 41.35 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಬೆಳಗಾವಿಯ ಖಡೇಬಜಾರ್...

ಗೌರಿ ಲಂಕೇಶ್ ಹತ್ಯೆ ಪ್ರಕರಣ-ಹಂತಕರ ಇಂಚಿಂಚು ಮಾಹಿತಿ ಬಹಿರಂಗ

1 year ago

ಬೆಂಗಳೂರು: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೆ ಅವರ ಹಿಂದೂ ಧರ್ಮ ವಿರೋಧಿ ನಿಲುವೇ ಕಾರಣ ಅಂತ ವಿಶೇಷ ತನಿಖಾ ತಂಡ ಆರೋಪಪಟ್ಟಿ ಸಲ್ಲಿಸಿದೆ. ಕೋರ್ಟ್ ಗೆ ಸಲ್ಲಿಸಿರೋ 651 ಪುಟಗಳ ಜಾರ್ಜ್ ಶೀಟ್ ಪಬ್ಲಿಕ್ ಟಿವಿಗೆ ಸಿಕ್ಕಿದ್ದು, ಹತ್ಯೆಗೆ ನಡೆಸಲಾದ...

ವಿಧಿಯ ಕ್ರೂರ ಅಟ್ಟಹಾಸಕ್ಕೆ ಪತ್ನಿಯ ಎದುರೇ ಪ್ರಾಣಬಿಟ್ಟ ಪತಿ

1 year ago

ಮಂಡ್ಯ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪತ್ನಿಯ ಎದುರೇ ಪತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾರಕದಹಳ್ಳಿ ಗ್ರಾಮದ ಬಳಿ ನಡೆದಿದೆ. ಚನ್ನೇಗೌಡ (55) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಮೃತ ಚನ್ನೇಗೌಡ ನಾಗಮಂಗಲ ತೋಟಗಾರಿಕೆ ಇಲಾಖೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಚೆನ್ನೇಗೌಡ...

ಐಪಿಎಲ್ ಬೆಟ್ಟಿಂಗ್: ಬಾಲಿವುಡ್ ಸ್ಟಾರ್ ಅರ್ಬಾಜ್ ಖಾನ್ ಗೆ ಸಮನ್ಸ್

1 year ago

ಮುಂಬೈ: ಹಿಂದಿ ಚಿತ್ರ ನಟ ಹಾಗೂ ನಿರ್ದೇಶಕ ಅರ್ಬಾಜ್ ಖಾನ್ ಗೆ ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ಸಮನ್ಸ್ ನೀಡಿದ್ದಾರೆ. ಹೈ ಪ್ರೊಫೈಲ್ ಬುಕ್ಕಿ 42 ವರ್ಷದ ಸೂನ್ ಜಲಾನ್ ದೇಶ ವಿದೇಶಗಳಲ್ಲಿ ಬೆಟ್ಟಿಂಗ್ ಮಾಡಿದ್ದು ಇತ್ತೀಚೆಗಷ್ಟೆ ಪೊಲೀಸರು...

ಬ್ರೇಕ್ ಫೇಲ್ ಆಗಿ ಪಾದಚಾರಿಗೆ ಗುದ್ದಿ ಅಂಗಡಿಗೆ ನುಗ್ಗಿತು ಬಸ್!

1 year ago

ಕೊಡಗು: ಬ್ರೇಕ್ ಫೇಲ್ ಆಗಿ ಖಾಸಗಿ ಬಸ್ಸೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ ಘಟನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಘಟನೆ ನಡೆದಿದ್ದು, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ರಾಜೇಶ್ (21) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ....

ದೇವಿಯ ಬಲಿಗಾಗಿ ಬಿಟ್ಟ ಕೋಣದಿಂದ ವ್ಯಕ್ತಿ ಬಲಿ!

1 year ago

ತುಮಕೂರು: ಕೋಣ ತಿವಿತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹೊನ್ನೇಹಳ್ಳಿಯಲ್ಲಿ ನಡೆದಿದೆ. ದಾಸಮಾರಪ್ಪ(65) ಮೃತ ದುರ್ದೈವಿ. ದಾಳಿ ನಡೆಸಿದ ಕೋಣವನ್ನು ಕೆಲವು ವರ್ಷಗಳ ಹಿಂದೆ ಮಾರಮ್ಮ ದೇವಿ ಬಲಿಗಾಗಿ ಬಿಡಲಾಗಿತ್ತು. ದಾಸಮಾರಪ್ಪ ಹೊಲದಲ್ಲಿ ಕೆಲಸ ಮಾಡುವ ವೇಳೆ...

ಹೂ ಕಿತ್ತಿದ್ದಕ್ಕೆ ಅತ್ತೆಗೆ ಹಿಗ್ಗಾಮುಗ್ಗಾ ಥಳಿಸಿದ ನಿರ್ದಯಿ ಸೊಸೆ!- ವಿಡಿಯೋ ವೈರಲ್

1 year ago

ಕೋಲ್ಕತ್ತಾ: ಸೊಸೆ ತನ್ನ ಅತ್ತೆಗೆ ಹಿಗ್ಗಾಮುಗ್ಗವಾಗಿ ಥಳಿಸಿದ ಅಮಾನವೀಯ ಘಟನೆಯೊಂದು ದಕ್ಷಿಣ ಕೋಲ್ಕತ್ತಾದ ಗರಿಯಾ ಎಂಬ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಅತ್ತೆ ಯಶೋದಾ ಪಾಲ್ ಅವರಿಗೆ ಸೊಸೆ ಸ್ವಪ್ನ ಪಾಲ್ ಹೊಡೆಯುವ ದೃಶ್ಯವನ್ನು ನೆರೆಮನೆಯವರು ತಮ್ಮ ಮೊಬೈಲ್ ನಲ್ಲಿ...