Connect with us

Cinema

ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸಾಮಾನ್ಯ- ನಟಿ ಲಕ್ಷ್ಮೀ ರೈ

Published

on

ಬೆಂಗಳೂರು: ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸಾಮಾನ್ಯ. ಆದರೆ ಅದು ನನ್ನ ಅನುಭವಕ್ಕೆ ಬಂದಿಲ್ಲ ಎಂದು ಬಹುಭಾಷಾ ನಟಿ ಲಕ್ಷ್ಮೀ ರೈ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ಝಾನ್ಸಿ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರು, ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಇರುವುದು ಸಾಮಾನ್ಯ. ಆದರೆ ಅದು ನನ್ನ ಅನುಭವಕ್ಕೆ ಬಂದಿಲ್ಲ. ನನಗೆ ಯಾವ ಕೆಟ್ಟ ಎಕ್ಸ್ ಪಿರಿಯನ್ಸ್ ಆಗಿಲ್ಲ. ನಾವು ಯಾವ ರೀತಿ ನಡ್ಕೋತೀವಿ ಅದರ ಮೇಲೆ ನಮ್ಮನ್ನ ಇಂಡಸ್ಟ್ರಿ ಟ್ರೀಟ್ ಮಾಡುತ್ತದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಎರಡು ಕೈ ಸೇರಿದ್ರೆ ಚಪ್ಪಾಳೆ ಆಗೋದು- ಕಾಸ್ಟಿಂಗ್ ಕೌಚ್ ಬಗ್ಗೆ ರಾಗಿಣಿ

ಅವಕಾಶ ಕೊಡುತ್ತಾರೆ ಎಂದ ತಕ್ಷಣ ನಾವು ಅವರಿಗಾಗಿ ಮಲಗಲು ಸಾಧ್ಯವಿಲ್ಲ. ಕಾಸ್ಟಿಂಗ್ ಕೌಚ್ ಚಿತ್ರರಂಗದ ಒಂದು ಚಿಕ್ಕ ವಿಷಯ ಅಷ್ಟೇ. ಅದನ್ನೇ ದೊಡ್ಡದಾಗಿ ತೋರಿಸುವುದು ಸರಿಯಿಲ್ಲ. ನಟಿಸಲು ಬಂದ ಪ್ರತಿಯೊಬ್ಬರು ಕಾಸ್ಟಿಂಗ್ ಕೌಚ್ ಅನುಭವ ಮಾಡಿಕೊಂಡಿದ್ದಾರೆ ಎಂದು ಜನಗಳು ತಿಳಿದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

ನಾನು ಚಿತ್ರರಂಗಕ್ಕೆ ಬಂದಾಗ ನಾನು ಇಂತಹ ಅನುಭವಗಳನ್ನು ಪಡೆದುಕೊಂಡಿಲ್ಲ. ಆದರೆ ಮೊದಲ ಬಾರಿಗೆ ಯಾರೂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಅಂತಹವರಿಗೆ ಈ ಅನುಭವ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕಮರ್ಷಿಯಲ್ ಸೆಕ್ಸ್ ಸ್ಯಾಂಡಲ್‍ವುಡ್‍ನಲ್ಲಿದೆ: ನಟಿ ಹರ್ಷಿಕಾ

ಸದ್ಯ ಲಕ್ಷ್ಮೀ ರೈ 6 ವರ್ಷದ ನಂತರ ಕನ್ನಡಕ್ಕೆ ರೀ- ಎಂಟ್ರಿ ನೀಡಿದ್ದಾರೆ. ಮರ್ಯಾದ ರಾಮಣ್ಣ ಖ್ಯಾತಿ ಗುರುಪ್ರಸಾದ್ ಝಾನ್ಸಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.