Connect with us

Bengaluru City

ವಂಚನೆ ಆರೋಪ- ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕನ ಮೇಲೆ ಕೇಸ್

Published

on

Share this

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ಹೆಸರಿನಲ್ಲಿ 25 ಕೋಟಿ ಲೋನ್ ವಂಚನೆ ಪ್ರಕರಣ ಮಾಸುವ ಮುನ್ನವೇ ಇದೀಗ ಇಂಥದ್ದೇ ಮತ್ತೊಂದು ಕೇಸ್ ದಾಖಲಾಗಿದೆ. ಈ ಮೂಲಕ ಸೆಲೆಬ್ರಿಟಿಗಳ ಆಟಾಟೋಪಕ್ಕೆ ಕೊನೆ ಇಲ್ವಾ ಎಂಬಂತಾಗಿದೆ.

ಸಿನಿಮಾದಲ್ಲಿ ಚಾನ್ಸ್ ಕೊಡುತ್ತೇನೆ ಎಂದು ಹೇಳಿ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪ್ರಶಾಂತ್ ರಾಜ್ ವಿರುದ್ಧ ವಂಚನೆ ಆರೋಪವೊಂದು ಕೇಳಿ ಬಂದಿದೆ. ಅಲ್ಲದೆ ಲವ್ ಗುರು ನಿರ್ದೇಶಕನ ಮೇಲೆ ರಾಮನಗರದ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

ನಿರ್ದೇಶಕ ಪ್ರಶಾಂತ್ ರಾಜ್, ಶಬರೀಶ್ ಎಂಬ ಯುವನಟನಿಂದ ಕೆಲಸ ಮಾಡಿಸಿಕೊಂಡು ಹಣ ಕೊಡದೇ ಕಾರು ಕೊಟ್ಟಿದ್ದರು. ಆದರೆ ಇದೀಗ ಆ ಕಾರನ್ನು ಕೂಡ ವಾಪಸ್ ಮಾಡುವಂತೆ ಕಿರುಕುಳ ನೀಡುತ್ತಿದ್ದಾರಂತೆ. ಇದನ್ನೂ ಓದಿ: ನನ್ನ, ದರ್ಶನ್ ಹೆಸರು ಬಳಸಿ ಲೋನ್ ವಿಚಾರವಾಗಿ ವಂಚನೆ: ಉಮಾಪತಿ

ಪ್ರಶಾಂತ್ ರಾಜ್ ರಾಮನಗರದಲ್ಲಿ ತೋಟ ಖರೀದಿಸಿದ್ದರು. ಇತ್ತ ಯುವನಟ ಶಬರೀಶ್ ಕಾಂಟ್ರಾಕ್ಟರ್ ಕೂಡ ಆಗಿದ್ದಾರೆ. ಹೀಗಾಗಿ ನಿಮಗೆ ಲವ್ ಗುರು 2 ಪ್ಯಾನ್ ಇಂಡಿಯಾ ಚಿತ್ರದಲ್ಲಿ ಛಾನ್ಸ್ ಕೊಡ್ತೀನಿ ಅಂತ ಪ್ರಶಾಂತ್ ರಾಜ್ ಹೇಳಿದ್ದರು. ಆದರೆ ತೋಟದ ಕೆಲಸ ಪೂರ್ಣಗೊಂಡರೂ ಶಬರೀಶ್‍ಗೆ ಹಣ ಕೊಡದೇ ಪ್ರಶಾಂತ್ ಸತಾಯಿಸುತ್ತಿದ್ದರು. ಆಗಿರುವುದು 45 ಲಕ್ಷ ರೂ. ಆದರೆ ಪ್ರಶಾಂತ್ ಶಬರೀಶ್‍ಗೆ 20 ಲಕ್ಷ ರೂ. ಅಷ್ಟೇ ನಿಡಿದ್ದಾರೆ. ಉಳಿದ ಹಣಕ್ಕೆ ಕಾರ್ ಕೊಟ್ಟಿದ್ದರು. ಯಶ್, ರಾಧಿಕಾ ಪಂಡಿತ್, ಗಣೇಶ್ ಕೂತಿರುವ ಕಾರ್ ಇದು. ಲಕ್ಷ್ಮೀ ಕಾರು, ನಿಮ್ಮ ಅದೃಷ್ಟ ಬದಲಿಸುತ್ತೆ ಎಂದು ಶಬರೀಶ್‍ಗೆ ಪ್ರಶಾಂತ್ ರಾಜ್ ನಂಬಿಸಿದ್ದರು. ಇದನ್ನೂ ಓದಿ: ದರ್ಶನ್ 25 ಕೋಟಿ ಲೋನ್ ಕೇಸ್‍ಗೆ ಬಿಗ್ ಟ್ವಿಸ್ಟ್ – ಆರೋಪಿ ಜೊತೆ ನಿರ್ಮಾಪಕ ಉಮಾಪತಿಗೆ ನಂಟು!

ಇದೀಗ ಆ ಕಾರ್ ವಾಪಸ್ ಕೊಡುವಂತೆ ಪ್ರಶಾಂತ್ ರಾಜ್ ಧಮ್ಕಿ ಹಾಕುತ್ತಿದ್ದಾರಂತೆ. ಹೀಗಾಗಿ ಪ್ರಶಾಂತ್ ರಾಜ್ ಮತ್ತು ಸಹೋದರ ನವೀನ್ ರಾಜ್ ಮೇಲೆ ದೂರು ನೀಡಲಾಗಿದೆ. ಪ್ರಶಾಂತ್, ನವೀನ್ ಮೇಲೆ ವಂಚನೆ ಆರೋಪ ಇದೇ ಮೊದಲಲ್ಲ. 2019ರಲ್ಲೂ ವೃದ್ಧೆಯನ್ನು ವಂಚಿಸಿರುವ ಆರೋಪ ಕೇಳಿಬಂದಿತ್ತು.

Click to comment

Leave a Reply

Your email address will not be published. Required fields are marked *

Advertisement