Wednesday, 21st August 2019

Recent News

ತಮಿಳುನಾಡು ಸಿಎಂ ವಿರುದ್ಧ ಟೀಕೆ- ವ್ಯಂಗ್ಯ ಚಿತ್ರಕಾರ ಅರೆಸ್ಟ್

ಚೆನ್ನೈ: ತಮಿಳುನಾಡು ಸಿಎಂ ಇ ಪಳನಿಸ್ವಾಮಿ ಹಾಗೂ ಜಿಲ್ಲಾಡಳಿತವನ್ನು ಟೀಕಿಸಿದ ಕಾರಣ ವ್ಯಂಗ್ಯ ಚಿತ್ರಕಾರರನ್ನು ಬಂಧನ ಮಾಡಲಾಗಿದೆ.

ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಸಿಎಂ ಹಾಗೂ ಜಿಲ್ಲಾಧಿಕಾರಿಯನ್ನು ಟೀಕಿಸಿ ಫೇಸ್‍ಬುಕ್‍ನಲ್ಲಿ ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡಿದ್ದ ಬಾಲಾ ಜಿ ಎಂಬವರನ್ನು ಅರೆಸ್ಟ್ ಮಡಲಾಗಿದೆ. ಇವರ ವ್ಯಂಗ್ಯಚಿತ್ರಕ್ಕೆ ಫೇಸ್‍ಬುಕ್‍ನಲ್ಲಿ ಈವರೆಗೆ ಸುಮಾರು 4 ರಿಯಾಕ್ಷನ್ಸ್ ಸಿಕ್ಕಿದ್ದು, 13 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

ಬೆಂಕಿಯಲ್ಲಿ ಉರಿದು ಮಗು ಸಾಯುತ್ತಿದ್ದರೆ ಸಿಎಂ ಇ ಪಳನಿಸ್ವಾಮಿ, ತಿರುನಲ್ವೇಲಿ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಸುಮ್ಮನೆ ನಿಂತಿರುವಂತೆ ಬಾಲಾ ಅವರ ವ್ಯಂಗ್ಯ ಚಿತ್ರದಲ್ಲಿ ತೋರಿಸಲಾಗಿದೆ.

ಇತ್ತೀಚೆಗಷ್ಟೇ ಇಲ್ಲಿನ ದಿನಗೂಲಿ ಕಾರ್ಮಿಕರ ಕುಟುಂಬದ ನಾಲ್ವರು ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡಿದ್ದರು.

ஆமா.. இந்த கார்ட்டூன் ஆத்திரத்தின் உச்சத்தில் தான் வரைந்தேன்.

Bala Gさんの投稿 2017年10月24日(火)

ಸಾಲದ ಹಣ ಹಿಂದಿರುಗಿಸದ ನಂತರವೂ ಕೂಡ ಐಸಾಕಿಮುತ್ತು ಹಾಗೂ ಅವರ ಪತ್ನಿ ಸುಬ್ಬಲಕ್ಷ್ಮೀ ಮೇಲೆ ಹಣ ನೀಡಿದವರು ದೌರ್ಜನ್ಯವೆಸಗುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಹಾಯ ಕೋರಿ ಜಿಲ್ಲಾಧಿಕಾರಿಗಳ ಕಚೇರಿಗೆ 6 ಬಾರಿ ಅಲೆದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ದಂಪತಿ ಮತ್ತು ಅವರ 2 ಹಾಗೂ 4 ವರ್ಷದ ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *