Connect with us

Bengaluru City

ರಸ್ತೆಯಲ್ಲಿ ಒಕ್ಕಣೆಯ ಹುಲ್ಲು ತಗುಲಿ ಹೊತ್ತಿ ಉರಿದ ಚಲಿಸ್ತಿದ್ದ ಕಾರ್!

Published

on

ಮಂಡ್ಯ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನೋಡು ನೋಡುತ್ತಿಂದ್ದಂತೆ ಹೊತ್ತಿ ಉರಿದಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಭೂ ವರಹನಾಥ ದೇವಾಲಯದ ರಸ್ತೆಯಲ್ಲಿ ಜರುಗಿದೆ.

ಬೆಂಗಳೂರಿನಿಂದ ಭೂ ವರಹನಾಥ ದೇವಾಲಯಕ್ಕೆ ಬರುತ್ತಿದ್ದ ವೇಳೆ ಈ ಘಟನೆ ಜರುಗಿದೆ. ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈತರು ಉರುಳಿ ಕಾಳು ಒಕ್ಕಣೆ ಮಾಡುತ್ತಿದ್ದರು. ಈ ವೇಳೆ ಕಾರಿನ ಕೆಳ ಭಾಗಕ್ಕೆ ಉರುಳಿ ಸೊಪ್ಪು ಸಿಕ್ಕಿದೆ. ನಂತರ ಇಂಜಿನ್ ಹೀಟ್ ಆಗಿದ್ದ ಕಾರಣ ಸೊಪ್ಪಿನ ಮೂಲಕ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.

ಕಾರಿನ ಕೆಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಚಾಲಕನಿಗೆ ತಿಳಿಯದ ಕಾರಣ ಕಾರನ್ನು ಚಲಿಸಿಕೊಂಡು ಮುಂದೆ ಬಂದಿದ್ದಾನೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದವರು ಚಾಲಕನಿಗೆ ಬೆಂಕಿ ಕಾಣಿಸಿಕೊಂಡಿರುವುದನ್ನು ತಿಳಿಸಿದ್ದಾರೆ. ನಂತರ ಕಾರಿನಲ್ಲಿ ಇದ್ದವರು ಎಲ್ಲರು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಬಳಿಕ ಕಾರಿನ ಬೆಂಕಿಯನ್ನು ನಂದಿಸಲು ಸ್ಥಳೀಯರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ, ಸಂಪೂರ್ಣವಾಗಿ ಕಾರು ಹೊತ್ತಿ ಉರಿದಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.

Click to comment

Leave a Reply

Your email address will not be published. Required fields are marked *