Advertisements

ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಪುಂಡರ ಕುಚೇಷ್ಟೇಗಳು ಮಿತಿ ಮೀರಿವೆ. ಅನ್ಯಕೋಮಿನ ಇಬ್ಬರು ಯುವತಿಯರು ಇನ್ನೊಂದು ಕೋಮಿನ ದಂಪತಿಯ ಕಾರಲ್ಲಿ ತೆರಳುತ್ತಿದ್ದರು ಎಂಬ ಕಾರಣಕ್ಕೆ ಕಾರನ್ನು ಅಡ್ಡಗಟ್ಟಿ ಏಳೆಂಟು ಪುಂಡರು ಗಲಾಟೆ ಮಾಡಿದ್ದಾರೆ.

Advertisements

ಮೂಡಬಿದ್ರೆ ಹೊರವಲಯದಲ್ಲಿ ಕಾರನ್ನು ಅಡ್ಡಗಟ್ಟಿದ ಪುಂಡರು ಧಮ್ಕಿ ಹಾಕಿದ್ದಾರೆ. ಆ ಇಬ್ಬರು ಯುವತಿಯರು ಉಡುಪಿ ಜಿಲ್ಲೆಯ ಕಾರ್ಕಳದವರಾಗಿದ್ದು, ಕೃತ್ಯ ಸಂಬಂಧ ಸಂಹಿತ್‍ರಾಜ್ ಮತ್ತು ಸಂದೀಪ್‍ಪೂಜಾರಿ ಎಂಬ ಇಬ್ಬರು ಪುಡಾರಿಗಳನ್ನು ಬಂಧಿಸಲಾಗಿದೆ. ಇದೀಗ ಬಂಧಿತ ಪುಡಾರಿಗಳ ವಿರುದ್ದ ಐಪಿಸಿ ಸೆಕ್ಷನ್ 354, 153a, 504, 506ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ

Advertisements

ಇದೇ ರೀತಿ ಸೆಪ್ಟೆಂಬರ್ 28ರಂದು ಮಂಗಳೂರಿನ ಸುರತ್ಕಲ್‍ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಕಾರನ್ನು ಅಡ್ಡಗಟ್ಟಿ ಪುಂಡ-ಪೋಕರಿಗಳ ಗುಂಪೊಂದು ಬೆದರಿಕೆ ಹಾಕಿತ್ತು. ಅಲ್ಲದೇ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಆದರೆ ಪ್ರಕರಣ ದಾಖಲಿಸಿಕೊಂಡಿದ್ದ ಸುರತ್ಕಲ್ ಪೊಲೀಸರು ಠಾಣಾ ಜಾಮೀನಿನಡಿ ಬಿಡುಗಡೆ ಮಾಡಿದ್ದರು. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ನಿದ್ದೆ ಬರಲ್ಲ: ಹೆಚ್‍ಡಿ ಕುಮಾರಸ್ವಾಮಿ

Advertisements

Advertisements
Exit mobile version