Connect with us

ಕಾರು-ಬೈಕ್ ಅಪಘಾತ, ಜೇಬಲ್ಲಿದ್ದ 1.25 ಲಕ್ಷ ವಾಪಸ್ ನೀಡಿದ ಅಗ್ನಿಶಾಮಕ ಸಿಬ್ಬಂದಿ

ಕಾರು-ಬೈಕ್ ಅಪಘಾತ, ಜೇಬಲ್ಲಿದ್ದ 1.25 ಲಕ್ಷ ವಾಪಸ್ ನೀಡಿದ ಅಗ್ನಿಶಾಮಕ ಸಿಬ್ಬಂದಿ

– ಅಗ್ನಿಶಾಮಕ ವಾಹನದಲ್ಲೇ ಆಸ್ಪತ್ರೆಗೆ ಕರೆ ತಂದ್ರು

ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಅಗ್ನಿಶಾಮಕ ಸಿಬ್ಬಂದಿ ಎರಡು ಗಾಡಿಗಳಲ್ಲಿ ಇಬ್ಬರನ್ನೂ ಅಗ್ನಿಶಾಮಕ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಜಿಲ್ಲಾ ಪಂಚಾಯಿತಿ ಮುಂಭಾಗ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿತ್ತು. ಡಿಕ್ಕಿಯಾದ ಕೂಡಲೇ ಬೈಕಿನಲ್ಲಿದ್ದ ಕುಮಾರ್ ಹಾಗೂ ಮಹೇಶ್ ರಸ್ತೆ ಮಧ್ಯೆಯೇ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಒಬ್ಬರ ತಲೆಗೆ ತೀವ್ರ ಪೆಟ್ಟಾಗಿತ್ತು, ಅಪಘಾತವಾದ ಜಾಗದ ಪಕ್ಕದಲ್ಲೇ ಅಗ್ನಿಶಾಮಕ ಠಾಣೆ ಕೂಡ ಇದ್ದು, ಗಮನಿಸಿದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೈಕಿನಿಂದ ಬಿದ್ದು ನರಳಾಡುತ್ತಿದ್ದವರನ್ನು ಅಗ್ನಿಶಾಮಕ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿದರು.

ಒಂದು ಗಾಡಿಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ಗಾಡಿಯಲ್ಲೇ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೊತ್ತೊಬ್ಬ ಬೈಕ್ ಸವಾರನನ್ನೂ ಮತ್ತೊಂದು ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅವರ ಜೇಬಲ್ಲಿ ಸುಮಾರು 1.25 ಲಕ್ಷ ರೂ. ಹಣವಿತ್ತು. ಇದನ್ನು ಅಗ್ನಿಶಾಮಕ ಸಿಬ್ಬಂದಿ ಗಾಯಾಳುಗಳ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ.

ಬೈಕಿನಲ್ಲಿ ಬಿದ್ದವರು ಕಂಟ್ರ್ಯಾಕ್ಟ್ ಕೆಲಸಗಾರರು. ಕೆಲಸದ ನಿಮಿತ್ತ ಹಣ ಪಡೆದುಕೊಂಡು ಬರುವಾಗ ಅಪಘಾತವಾಗಿ ಬಿದ್ದಿದ್ದಾರೆ. ಬೈಕಿನಿಂದ ಬಿದ್ದಾಗ ಅವರ ಜೇಬಲ್ಲಿ 1.25 ಲಕ್ಷ ರೂ. ಇತ್ತು. ಅಪಘಾತವಾದ ಬಳಿಕ ಹಣ ತೆಗೆದುಕೊಂಡ ಅಗ್ನಿಶಾಮಕ ಸಿಬ್ಬಂದಿ, ಗಾಯಾಳುಗಳು ಹೇಳಿದರಿಗೆ ಹಣ ಹಾಗೂ ಮೊಬೈಲ್ ನೀಡಿ ವಾಪಸ್ಸಾಗಿದ್ದಾರೆ. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಮುಖ್ಯಸ್ಥ ಶಶಿಧರ್, ಇನ್ಸ್‍ಪೆಕ್ಟರ್ ಅವಿನಾಶ್, ಶಶಿಧರ್, ಪ್ರಕಾಶ್, ಆನಂದ್, ಸಂತೋಷ್, ರವಿಕುಮಾರ್, ಮಂಜುನಾಥ್, ತಿಮ್ಮೇಗೌಡ, ಹರೀಶ್, ಉಮೇಶ್ ಮಾಗುಂಡನವರ್ ಅವರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement
Advertisement