Cricket

ಒಂದೆರಡು ಪಂದ್ಯದಲ್ಲಿ ಆಡಿದ ಮಾತ್ರಕ್ಕೆ ಆತ ಸೆಹ್ವಾಗ್ ಆಗಲ್ಲ: ಸಲ್ಮಾನ್ ಬಟ್

Published

on

Share this

ಇಸ್ಲಾಮಾಬಾದ್: ಒಂದೆರಡು ಪಂದ್ಯಗಳಲ್ಲಿ ಆತ ಆರಂಭಿಕನಾಗಿ ಬಂದು ಅಬ್ಬರದ ಬ್ಯಾಟಿಂಗ್ ಮಾಡಿದ ತಕ್ಷಣ ಆತ ವಿರೇಂದ್ರ ಸೆಹ್ವಾಗ್ ಆಗಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಭಾರತದ ಯುವ ಆಟಗಾರನ ಕಾಲೆಳೆದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಬಂದು ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಯುವ ಆಟಗಾರ ಪೃಥ್ವಿ ಶಾ ಬ್ಯಾಟಿಂಗ್‍ನಲ್ಲಿ ಮಿಂಚು ಹರಿಸಿದ್ದರು. ಇದನ್ನು ಗಮನಿಸಿ ಹಲವರು ಈತ ಭಾರತದ ಮರಿ ಸೆಹ್ವಾಗ್ ಎಂದು ಹಾಡಿ ಹೊಗಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಲ್ಮಾನ್ ಬಟ್, ಒಂದೆರಡು ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ತಕ್ಷಣ ಆತನನ್ನು ಸೆಹ್ವಾಗ್‍ಗೆ ಹೋಲಿಸುವುದು ಸರಿಯಲ್ಲ. ಆತ ಸೆಹ್ವಾಗ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಸೆಣಸಾಟ

ಪೃಥ್ವಿ ಶಾ ಅವರನ್ನು ಈಗಲೇ ಕ್ರಿಕೆಟ್‍ನ ಸರ್ವಶ್ರೇಷ್ಠ ಆಟಗಾರರಾದ ವೀರೇಂದ್ರ ಸೆಹ್ವಾಗ್ ಅಥವಾ ವಿವಿಯನ್ ರಿಚರ್ಡ್ಸ್ ಅವರಿಗೆ ಹೋಲಿಕೆ ಮಾಡಬೇಡಿ. ಆ ದಿಗ್ಗಜ ಆಟಗಾರರು ದೊಡ್ಡ ಇನ್ನಿಂಗ್ಸ್ ಗಳನ್ನು ಆಡಿ ರನ್ ಕಲೆಹಾಕಿದ್ದಾರೆ. ಅವರಂತೆ ಪೃಥ್ವಿ ಶಾ ದೊಡ್ಡ ಇನ್ನಿಂಗ್ಸ್ ಗಳನ್ನು ಆಡಲಿ ಬಳಿಕ ಹೋಲಿಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಪೃಥ್ವಿ ಶಾ ಕ್ರೀಸ್ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಾರೆ. ಇದು ತಪ್ಪು ಬ್ಯಾಟಿಂಗ್ ನಡೆಸಿ ನೆಲೆಯೂರಿ ಬಳಿಕ ದೊಡ್ಡ ಹೊಡೆತಗಳನ್ನು ಆಡಬೇಕು ಎಂದು ಬಟ್ ಸಲಹೆಯನ್ನು ಕೂಡ ಕೊಟ್ಟಿದ್ದಾರೆ. ಸಲ್ಮಾನ್ ಬಟ್ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್‍ನಲ್ಲಿ ಫಿಕ್ಸಿಂಗ್ ಆರೋಪದಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಸದಾ ಕ್ರಿಕೆಟ್ ಕುರಿತಾದ ಒಂದಲ್ಲ ಒಂದು ವಿಷಯದ ಬಗ್ಗೆ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement