Cinema
ಶ್ವಾನ ಹುಡುಕಿಕೊಟ್ಟವರಿಗೆ 3 ಕೋಟಿ ಘೋಷಿಸಿದ ಗಾಯಕಿ

– ವಾಕ್ ತೆರಳಿದ್ದ ವೇಳೆ ಶ್ವಾನಗಳ ಕಳ್ಳತನ
ಸ್ಯಾಕ್ರಮೆಂಟೊ: ಹಾಲಿವುಡ್ ಸಿಂಗರ್ ಲೇಡಿ ಗಾಗಾರವರ ಮುದ್ದಾದ ಎರಡು ಶ್ವಾನಗಳು ಕಳುವಾಗಿದ್ದು ಅವುಗಳನ್ನು ಹುಡುಕಿ ಸುರಕ್ಷಿತವಾಗಿ ಹಿಂದಿರುಗಿಸುವವರಿಗೆ ಅರ್ಧ ಮಿಲಿಯನ್ ಡಾಲರ್(3,67,98,200.00)ರೂ ನೀಡಿವುದಾಗಿ ಘೋಷಿಸಿದ್ದಾರೆ. ಅಲ್ಲದೆ ಪಿಸ್ತೂಲಿನಿಂದ ಬೆದರಿಸಿ ಶ್ವಾನಗಳನ್ನು ಕದ್ದಿರುವ ವಿಚಾರ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಸಿಂಗರ್ ಲೇಡಿ ಗಾಗಾರವರ ಉದ್ಯೋಗಿಯೊಬ್ಬರು, ಫ್ರೆಂಚ್ ಬುಲ್ಡಾಗ್ಸ್ ಕೊಜಿ ಮತ್ತು ಗುಸ್ತಾನ್ ಎಂಬ ಶ್ವಾನವನ್ನು ಲಾಸ್ ಏಂಜಲೀಸ್ ಬಳಿ ವಾಕಿಂಗ್ ಕರೆದುಕೊಂಡು ಹೋಗಿದ್ದ ವೇಳೆ ವ್ಯಕ್ತಿಯೋರ್ವ ಉದ್ಯೋಗಿ ಮೇಲೆ ಗುಂಡು ಹಾರಿಸಿ ಬುಧವಾರ ರಾತ್ರಿ ಶ್ವಾನವನ್ನು ಕದ್ದು ವಾಹನದಲ್ಲಿ ಪರಾರಿಯಾಗಿದ್ದಾನೆ.
ಈ ಕುರಿತಂತೆ ಲೇಡಿ ಗಾಗಾ, ಈ ಘಟನೆಯಿಂದ ನನ್ನ ಮನಸ್ಸಿಗೆ ಆಘಾತವಾಗಿದೆ. ದೇವರ ದಯೆಯಿಂದ ನನ್ನ ಕುಟುಂಬವು ಮೊದಲಿನಂತೆ ಪೂರ್ಣವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಶ್ವಾನಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದವರಿಗೆ ಅರ್ಧ ಮಿಲಿಯನ್ ಡಾಲರ್(3,67,98,200.00)ರೂ. ಗಳನ್ನು ನೀಡುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ಶ್ವಾನವನ್ನು ಯಾರಾದರೂ ತಿಳಿಯದೇ ಖರೀದಿಸಿದರೆ ಅಥವಾ ಅವುಗಳ ಬಗ್ಗೆ ಮಾಹಿತಿ ದೊರೆತರೆ “Email [email protected] ಗೆ ಮೇಲ್ ಮಾಡುವ ಮೂಲಕ ನನ್ನನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
View this post on Instagram
ಸದ್ಯ ಘಟನೆ ವೇಳೆ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಉದ್ಯೋಗಿ ರಿಯಾನ್ ಫಿಷರ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನನ್ನ ಕುಟುಂಬಕ್ಕಾಗಿ ಪ್ರಾಣವನ್ನೇ ಪಣಕಿಟ್ಟ ನಿಮ್ಮನ್ನು ನಾನು ಪ್ರೀತಿಸುತ್ತನೆ. ನೀವು ಎಂದಿಗೂ ಹೀರೋ ಎಂದು ಉದ್ಯೋಗಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟನೆ ವೇಳೆ ಜೊತೆ ಇದ್ದ ಮತ್ತೊಂದು ಮಿಸ್ ಏಷ್ಯಾ ಶ್ವಾನ ತಪ್ಪಿಸಿಕೊಂಡಿದ್ದು, ಈ ಕುರಿತಂತೆ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ದರೋಡೆ-ಅಪರಾಧ ವಿಭಾಗ ತನಿಖೆ ನಡೆಸುತ್ತಿದ್ದಾರೆ.
ಫ್ರೆಂಚ್ ಬುಲ್ಡಾಗ್ಸ್ ಶ್ವಾನ ಬಹಳ ದುಬಾರಿ ಹಾಗೂ ಅಪರೂಪದ ತಳಿ ಶ್ವಾನವಾದರಿದ್ದ ಸಾವಿರಾರು ಡಾಲರ್ ಗೆ ಮಾರಾಟವಾಗುತ್ತದೆ. ಈ ಉದ್ದೇಶದಿಂದ ದುಷ್ಕರ್ಮಿಗಳು ಶ್ವಾನವನ್ನು ಕದ್ದಿದ್ದಾರೆ ಎಂದು ಶಂಕಿಸಲಾಗುತ್ತಿದೆ.
