ವಾಷಿಂಗ್ಟನ್: ಫೈಝರ್ ಲಸಿಕೆ ಪಡೆದಿದ್ದ ಕ್ಯಾಲಿಫೋರ್ನಿಯಾದ ನರ್ಸ್ ಒಬ್ಬರಿಗೆ ವಾರದಲ್ಲಿಯೇ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮ್ಯಾಥ್ಯೂ ಡಬ್ಲ್ಯೂ ಕ್ರಿಸ್‍ಮುಸ್ ಮುಂಚೆ ಫೈಝರ್ ಲಸಿಕೆ ಪಡೆದುಕೊಂಡಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಮ್ಯಾಥ್ಯೂ ಲಸಿಕೆ ಪಡೆದು ರಜೆಯಲ್ಲಿದ್ದರು. ಲಸಿಕೆ ಪಡೆದುಕೊಳ್ಳುವಾಗ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಮ್ಯಾಥ್ಯೂ ಹಂಚಿಕೊಂಡಿದ್ದರು. ನಾನು ಫೈಝರ್ ಲಸಿಕೆ ಪಡೆದುಕೊಂಡಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ. ಲಸಿಕೆ ಪಡೆದ ನನಗೂ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಬರೆದುಕೊಂಡಿದ್ದರು.
ಕ್ರಿಸ್‍ಮಸ್ ರಜೆ ಬಳಿಕ ಸೇವೆಗೆ ಹಾಜರಾದ ಕೆಲವೇ ದಿನಗಳಲ್ಲಿ ಮ್ಯಾಥ್ಯೂ ಅವರಿಗೆ ಚಳಿ ಜ್ವರ, ಮೈಕೈ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಗಾದಾಗ ವರದಿ ಪಾಸಿಟಿವ್ ಬಂದಿದೆ.
ಯುಕೆಯಲ್ಲಿ ಅಸ್ಟ್ರಾಜೆನಿಕಾ ಲಸಿಕೆಗೆ ಅನುಮತಿ https://t.co/1JUj6t00XO#AstraZeneca #Covidvaccine #England #CoronaVirus #COVID19 #KannadaNews #AstraZenecaCovidvaccine
— PublicTV (@publictvnews) December 30, 2020
ಲಸಿಕೆ ಪಡದ 10 ರಿಂದ 14 ದಿನಗಳ ನಂತರ ರೋಗ ನಿರೋಧಕ ಶಕ್ತಿ ಹೆಚ್ಚಾಗೋದು ಕ್ಲಿನಿಕಲ್ ಟ್ರಯಲ್ ನಲ್ಲಿ ನೋಡಿದ್ದೇವೆ. ಫೈಝರ್ ಲಸಿಕೆ ಮೊದಲ ಡೋಸ್ ಪಡೆದ್ರೆ ಶೇ.50 ರಷ್ಟು ಪರಿಣಾಮಕಾರಿಯಾಗಲಿದೆ. ಎರಡನೇ ಡೋಸ್ ಶೇ.95 ರಷ್ಟು ಸುರಕ್ಷೆಯನ್ನ ನೀಡುತ್ತದೆ ಎಂದು ಫೈಝರ್ ಲಸಿಕೆ ತಜ್ಞರು ಹೇಳಿದ್ದಾರೆ.