ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆ ಅವರು ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಬ್ ಡ್ರೈವರ್ ಹೇಳಿಕೆ ನೀಡಿದ್ದು, ಇದೀಗ ರವಿ ಬೆಳಗೆರೆಗೆ ಸಂಕಷ್ಟ ತಂದಿದೆ.
ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದ ಪ್ರಮುಖ ಆರೋಪಿ ಶಶಿಧರ ಮುಂಡೇವಾಡಿಯನ್ನು ಕಾರಿನಲ್ಲಿ ಸುತ್ತಾಡಿಸಿದ ಚಾಲಕ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಅಂದು ನನಗೆ ಹಾಯ್ ಬೆಂಗಳೂರು ಕಚೇರಿಯಿಂದ ಕರೆ ಬಂದಿತ್ತು. ವ್ಯಕ್ತಿಯೋರ್ವನನ್ನು ಪಿಕ್ ಅಪ್ ಮಾಡುವಂತೆ ಸೂಚಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.
Advertisement
Advertisement
ಆ ವ್ಯಕ್ತಿ (ಶಶಿಧರ ಮುಂಡೇವಾಡಿ)ಯನ್ನು ಕತ್ರಿಗುಪ್ಪೆಯಲ್ಲಿ ಪಿಕ್ ಮಾಡಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಉತ್ತರಹಳ್ಳಿಯಲ್ಲಿ ತಿರುಗಾಡಿದರು. ಯಾಕಾಗಿ ಸುತ್ತಾಡಿದ್ರು? ಸುತ್ತಾಡಿದ ವಿಚಾರ ಏನಕ್ಕೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ ಆತ ಅಲ್ಲೇ ಇದ್ದ ಶಶಿಧರ್ ಮುಂಡೇವಾಡಿಯ ಮುಖ ನೋಡಿ ಇವರನ್ನೇ ತನ್ನ ಕಾರಿನಲ್ಲಿ ಸುತ್ತಾಡಿಸಿರುವುದಾಗಿ ಕಾರ್ ಡ್ರೈವರ್ ನ್ಯಾಯಾಧೀಶರ ಮುಂದೆ ಹೇಳಿದ್ದಾನೆ.
Advertisement
ಕ್ಯಾಬ್ ಡ್ರೈವರ್ ಹೇಳಿಕೆ ಪ್ರಕರಣದ ತನಿಖೆಗೆ ರೋಚಕ ಟ್ವಿಸ್ಟ್ ಸಿಕ್ಕಂತಾಗಿದೆ. ಪೊಲೀಸರು ಡ್ರೈವರ್ ಹೇಳಿಕೆಯನ್ನಾಧರಿಸಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದ್ದಾರೆ.
Advertisement