Connect with us

Latest

ರಾನು ನಂತ್ರ ಇಂಟರ್‌ನೆಟ್‌ ಸ್ಟಾರ್ ಆದ ಕ್ಯಾಬ್ ಡ್ರೈವರ್: ವಿಡಿಯೋ

Published

on

ಲಕ್ನೋ: ಸಾಮಾಜಿಕ ಜಾಲತಾಣದಲ್ಲಿ ರಾನು ಮೊಂಡಲ್ ನಂತರ ಕ್ಯಾಬ್ ಚಾಲಕ ಇಂಟರ್‌ನೆಟ್‌ ಸ್ಟಾರ್ ಆಗಿದ್ದಾರೆ. ಸದ್ಯ ಚಾಲಕ ಹಾಡು ಹಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಉಬರ್ ಕ್ಯಾಬ್‍ನಲ್ಲಿ ಹೋಗುತ್ತಿದ್ದ ಪ್ರಯಾಣಿಕ ಚಾಲಕನಿಗೆ ಹಾಡು ಹಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಚಾಲಕ 1990ರಲ್ಲಿ ಬಿಡುಗಡೆಯಾದ ‘ಆಶಿಕಿ’ ಚಿತ್ರದ ‘ನಜರ್ ಕೀ ಸಾಮನೇ’ ಹಾಡನ್ನು ಹಾಡಿದ್ದಾರೆ. ಚಾಲಕ ಹಾಡು ಹಾಡುತ್ತಿರುವಾಗ ಪ್ರಯಾಣಿಕ ಇದನ್ನು ವಿಡಿಯೋ ಮಾಡಿದ್ದಾರೆ.

ಪ್ರಯಾಣಿಕ ಈ ವಿಡಿಯೋವನ್ನು ತನ್ನ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, ಉಬರ್ ಇಂಡಿಯಾ ಚಾಲಕ ವಿನೋದ್ ಅವರನ್ನು ಭೇಟಿ ಮಾಡಿದೆ. ಅವರು ಅದ್ಭುತ ಗಾಯಕ ಹಾಗೂ ನಾನು ಕ್ಯಾಬ್‍ನಲ್ಲಿ ಪ್ರಯಾಣಿಸಿದ ನಂತರ ಅವರಿಗೆ ಒಂದು ಹಾಡು ಹಾಡಲು ಹೇಳಿದೆ. ಇದಕ್ಕಿಂದ ಹೆಚ್ಚಾಗಿ ಇನ್ನೇನು ಬೇಕು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

ಈ ವೈರಲ್ ವಿಡಿಯೋ ಇದುವರೆಗೂ 7 ಸಾವಿರಕ್ಕೂ ಹೆಚ್ಚು ವ್ಯೂ ಹಾಗೂ 400ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ ಈ ವಿಡಿಯೋ ನೋಡಿ ಕೆಲವರು ‘ತುಂಬಾ ಚೆನ್ನಾಗಿದೆ’, ‘ನಿಮ್ಮ ಧ್ವನಿ ಅದ್ಭುತವಾಗಿದೆ’ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.