Connect with us

Bengaluru City

ಲೀಡರ್, ವರ್ಕರ್ ಪ್ರಾಬ್ಲಂ ಇಲ್ಲ, ವಿ ಹ್ಯಾವ್ ಫೇಲ್ : ಡಿಕೆಶಿ

Published

on

– ಹಣ ಹಂಚಿಕೆ ಬಗ್ಗೆ ಈಗ ಹೇಳಲ್ಲ
– ಸೋಲು ಗೆಲುವಿನ ಬುನಾದಿ

ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮತದಾರರು ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಚುನಾವನೆಯಲ್ಲಿ ಏನಾಯ್ತು? ಸೋಲು ಆಗಿದ್ದೇಕೆ ಎಂಬುದಕ್ಕೆ ಉತ್ತರ ಕೊಂಡುಕೊಳ್ಳುತ್ತೇನೆ. ಅಧ್ಯಕ್ಷನಾಗಿ ಚುನಾವಣೆ ಎದುರಿಸಿದ್ದರಿಂದ ವೈಯಕ್ತಿಕವಾಗಿ ಬೇಸರವಾಗಿದೆ ಎಂದರು.

ಉಪ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ಗೌರವಯುತವಾಗಿ ಒಪ್ಪುತ್ತೇವೆ. ಫಲಿತಾಂಶ ಯಾಕೆ ಹೀಗಾಯ್ತು? ಏನಾಯ್ತು ಎಂಬುದನ್ನ ಮುಂದಿನ ದಿನಗಳಲ್ಲಿ ನಾವು ಪಕ್ಷದೊಳಗೆ ಚರ್ಚೆ ನಡೆಸಿ ಉತ್ತರ ಹುಡುಕಿಕೊಂಡು ಸರಿ ಮಾಡಿಕೊಳ್ಳುತ್ತೇವೆ. ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಯಾರೂ ಧೃತಿಗೆಡಬೇಕಿಲ್ಲ. ಬೈ ಎಲೆಕ್ಷನ್ ಗಳಲ್ಲಿ ಅಧಿಕಾರದಲ್ಲಿದ್ದ ಆಡಳಿತ ಪಕ್ಷಕ್ಕೆ ಶೇ.30ರಷ್ಟು ಅನುಕೂಲ ಆಗುತ್ತೆ ಅನ್ನೋದು ನಮಗೆ ಗೊತ್ತಿದೆ. ಬಳ್ಳಾರಿ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯ ಅನುಭವ ನಮಗಿದೆ. ಹಾಗಾಗಿ ಕಾರ್ಯಕರ್ತರು ಮತ್ತು ನಮ್ಮ ಮತದಾರರು ಬೇಸರ ಆಗೋದ ಬೇಡ ಎಂದು ಹೇಳಿದರು. ಇದನ್ನೂ ಓದಿ: ಇದು ಬಿಎಸ್‍ವೈ ಸರ್ಕಾರದ ಜನಪರ ಕಾರ್ಯಗಳಿಗೆ ಜನ ನೀಡಿದ ಬೆಂಬಲ – ಸುಧಾಕರ್ ಬಣ್ಣನೆ

ನಮ್ಮ ಕ್ಷೇತ್ರ, ರಾಜ್ಯದ ಕಾರ್ಯಕರ್ತರು ಶಕ್ತಿ ಮೀರಿ ಅಭ್ಯರ್ಥಿ ಗೆಲ್ಲುವಿಗೆ ಶ್ರಮ ಪಟ್ಟಿದ್ದಾರೆ. ಮತದಾರ ಸಂಪೂರ್ಣ ಮತ ಹಾಕದಿರಬಹುದು. ಇಷ್ಟು ದೊಡ್ಡ ಮಟ್ಟದ ಅಂತರ ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ದಿನಗಳನ್ನ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಯನ್ನ ಸೂಚಿಸಿದ್ದೇವೆ. ಕುಸುಮಾ ಅವರು ಸಹ ಒಳ್ಳೆಯ ಹೋರಾಟ ನಡೆಸಿದ್ದಾರೆ. ಶಿರಾ ಕ್ಷೇತ್ರದ ಮೇಲಿನ ನಿರೀಕ್ಷೆ ಹೆಚ್ಚು ಕಡಿಮೆ ಆಗಿದ್ದು, ಈ ಅಂತರದ ಗೆಲುವು ನಿರೀಕ್ಷೆ ಇರಲಿಲ್ಲ. ಮತ್ತೆ ಕ್ಷೇತ್ರದಲ್ಲಿ ನಮ್ಮ ಪಕ್ಷ ಕಟ್ಟುವ ಕೆಲಸ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಇದನ್ನೂ ಓದಿ: ಚುನಾವಣೆ ಗೆಲುವಿಗೆ ಬಂಡೆ ಅಡ್ಡಿಬರಲೇ ಇಲ್ಲ- ಡಿಕೆಶಿ ಕುಟುಕಿದ ಕೋಟ

ಸೋಲು ಗೆಲುವಿನ ಬುನಾದಿ: ನಾನು ಮೊದಲ ಚುನಾವಣೆಯಲ್ಲಿ ಸೋತಿದ್ದೇನೆ. ನಂತರ ಗೆಲುವು ದಾಖಲಿಸಿಕೊಂಡು ಬಂದಿದ್ದೇನೆ. ಸೋಲು ಗೆಲುವಿನ ಬುನಾದಿ ಅನ್ನೋ ತತ್ವದಲ್ಲಿ ನಂಬಿಕೆ ಇಟ್ಟುಕೊಂಡ ವ್ಯಕ್ತಿ. ಉಪ ಚುನಾವಣೆ ಮೂಲಕ ಆಡಳಿತ ಸರ್ಕಾರಕ್ಕೆ ಒಂದು ಸಂದೇಶ ಕೊಡುವ ಪ್ರಯತ್ನ ಆಗಿದೆ. ನಮ್ಮ ಸಿದ್ಧಾಂತಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದರು. ಇದನ್ನೂ ಓದಿ: ಮತದಾರರ ತೀರ್ಪಿಗೆ ತಲೆ ಬಾಗುತ್ತೇವೆ, ಕಾರ್ಯಕರ್ತರು ಧೃತಿಗೆಡಬಾರದು: ಡಿ.ಕೆ.ಸುರೇಶ್

ಇಷ್ಟು ದೊಡ್ಡ ಮಟ್ಟದ ಅಂತರ ನಿರೀಕ್ಷೆ ಮಾಡಿರಲಿಲ್ಲ. ಚುನಾವಣೆ ಸೋಲಿಗೆ ಲೀಡರ್, ವರ್ಕರ್ ಪ್ರಾಬ್ಲಂ ಅಲ್ಲ. ಹಣ ಹಂಚಿಕೆ ಬಗ್ಗೆ ಈಗ ಏನು ಹೇಳಲ್ಲ. ಸೋತಿದ್ದೇವೆ ಅನ್ನೋದನ್ನ ನಾವು ಒಪ್ಪಿಕೊಳ್ಳುತ್ತೇನೆ. ಗೆಲುವು ಸಿಗುವಷ್ಟು ಮತಗಳನ್ನ ಮತದಾರರ ನಮಗೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷನಾಗಿ ಸೋತಿದಕ್ಕೆ ವೈಯಕ್ತಿಕವಾಗಿ ಬೇಸರ ತಂದಿದೆ. ಆದ್ರೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದೇನೆ. ಅಧ್ಯಕ್ಷನಾಗಿರೋದರಿಂದ ಚುನಾವಣೆ ಸೋಲಿನ ಹೊಣೆಯನ್ನ ನಾನೇ ತೆಗೆದುಕೊಳ್ಳುತ್ತೇನೆ. ಯಾರ ಮೇಲೆಯೋ ಸೋಲಿನ ಶಾಲು ಹಾಕಲ್ಲ. ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಜನ ಯಾರನ್ನು ನೋಡಿ ಮತ ಹಾಕಿದ್ದಾರೆ ಎಂಬುವುದು ಗೊತ್ತಿಲ್ಲ. ಹಾಗಾಗಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಲ್ಲ. ಕಾಂಗ್ರೆಸ್ ಹೊಸಬರಿಗೆ ಅವಕಾಶ ನೀಡುತ್ತಿದೆ. ಮುಂದಿನ ಚುನಾವಣೆಗಳಿಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ಚಿಂತನೆ ನಡೆಸುತ್ತೇವೆ. ಇಂದು ನಾವು ಆಯ್ಕೆ ಮಾಡಿದ್ದ ಅಭ್ಯರ್ಥಿ ಮುಂದಿನ ದಿನದಲ್ಲಿ ವಿಧಾನಸೌಧಕ್ಕೆ ಬರುತ್ತಾರೆ ಎಂದ ಭರವಸೆ ಹೊಂದಿದ್ದೇವೆ ಎಂದರು.

ಬಿಹಾರ್ ಚುನಾವಣೆಯಲ್ಲಿ ಮಹಾಘಟಬಂಧನ್ ಗೆಲ್ಲುತ್ತೆ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಹತ್ತಿರದ ನಂಬರ್ಸ್ ಸಿಕ್ಕಿದೆ. ಬಿಹಾರದ ಜನತೆಯ ತೀರ್ಪು ನೋಡಿದ್ರೆ ಉತ್ತರ ಭಾರತದಲ್ಲಿ ಎನ್‍ಡಿಎ ವಿರುದ್ಧದ ಆಡಳಿತ ಅಲೆ ಶುರುವಾಗಿದೆ ಅನ್ನೋದನ್ನು ಇದು ತೋರಿಸುತ್ತಿದೆ ಎಂದರು.

Click to comment

Leave a Reply

Your email address will not be published. Required fields are marked *

www.publictv.in