Connect with us

Chikkaballapur

ಕಣ್ಣೆದುರೇ 20-50 ಜನರ ಸಾವು ಕಂಡು ಭಯವಾಯ್ತು: ಕರಾಳ ಅನುಭವ ಹಂಚಿಕೊಂಡ ಉದ್ಯಮಿ

Published

on

ಚಿಕ್ಕಬಳ್ಳಾಪುರ: ನಾವು ತಿಂಡಿ ತಿನ್ನಲೆಂದು ಮೂರು ಜನ ಹೋಗಿದ್ದೆವು. ನಮ್ಮ ಪಕ್ಕದಲ್ಲೆ ಇಂಡೋನೇಷ್ಯಾ ದಂಪತಿ ಇದ್ದರು. ಈ ವೇಳೆ ಬಾಂಬ್ ಬ್ಲಾಸ್ಟ್ ಆಗಿದ್ದು ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹೀಗೆ ಕಣ್ಣೆದುರೇ 30-50 ಜನರ ಸಾವು ಕಂಡು ಭಯವಾಯಿತು ಎಂದು ಬೆಂಗಳೂರಿನ ಉದ್ಯಮಿ ಸುರೇಂದ್ರ ಬಾಬು ಹೇಳಿದ್ದಾರೆ.

ಸರಣಿ ಬಾಂಬ್ ಬ್ಲಾಸ್ಟ್ ಬಳಿಕ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಶಾಂಗ್ರೀಲಾ ಹೋಟೆಲ್‍ನಲ್ಲಿ 8:55 ರ ಸುಮಾರಿಗೆ ದೊಡ್ಡ ಶಬ್ಧ ಆಯ್ತು. ಆ ಶಬ್ಧವನ್ನು ಊಹೆ ಮಾಡೋಕು ಸಾಧ್ಯವಿಲ್ಲ. ನಾವು ತಿಂಡಿ ತಿನ್ನೋಕೆ ಎಂದು ಮೂರು ಜನ ಹೋಗಿದ್ದೆವು. ನಮ್ಮ ಪಕ್ಕದಲ್ಲೆ ಇಂಡೋನೆಷ್ಯಾ ದಂಪತಿ ಇದ್ದರು. ನಮ್ಮ ಕಣ್ಣೆದುರೇ ಸಾವು ನೋಡಿ ಭಯವಾಯ್ತು. ಅಲ್ಲದೆ ಕಣ್ಣೆದುರೇ 30-50 ಜನ ಹೆಣವಾದ್ರು ಎಂದು ಅವರು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡರು.

ಹೊಟೆಲ್ ಶಾಂಗ್ರೀಲಾ ಡೈನಿಂಗ್ ಹಾಲ್ ನಲ್ಲಿ ನಮ್ಮ ಅದೃಷ್ಟಕ್ಕೆ ಪಿಲ್ಲರ್ ಅಡ್ಡ ಇದ್ದ ಕಾರಣ ನಾವು ಬದುಕಿ ಉಳಿದೆವು. ಸಾಕಷ್ಟು ಜನ ನಮ್ಮ ಕಣ್ಣೆದುರೇ ನರಳಿ ನರಳಿ ಜೀವಬಿಟ್ಟರು. ನನ್ನ ಮೊಬೈಲ್ ಕೂಡ ಅಲ್ಲೇ ಹಾಳಾಯ್ತು. ದೇವರ ದಯೆ ನಮ್ಮ ಜೀವ ಉಳಿದಿದೆ ಎಂದು ಹೇಳಿದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣ – 20ಕ್ಕೂ ಹೆಚ್ಚು ಕನ್ನಡಿಗರು ವಾಪಸ್

ಇದೇ ವೇಳೆ ಬಸವನಗುಡಿ ಮೂಲದ ವೈದ್ಯ ಗುಪ್ತಾ ಮಾತನಾಡಿ, ನಾವಿದ್ದ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲಿ ಬಾಂಬ್ ಬ್ಲಾಸ್ಟ್ ನಡೆದಿತ್ತು. ಘಟನೆ ನಂತರ ಶ್ರೀಲಂಕಾದಲ್ಲಿ ಕರ್ಫ್ಯೂ  ಜಾರಿ ಅಗಿತ್ತು. ಏರ್ ಪೋರ್ಟ್ ನಲ್ಲೂ ಸಹ ಭಾರೀ ಬಂದೋಬಸ್ತ್ ಹಾಗೂ ಚೆಕ್ಕಿಂಗ್ ಕೂಡ ಮಾಡಿದ್ರು. ಕೊನೆಗೆ ಸೇಫ್ ಅಗಿ ಬೆಂಗಳೂರಿಗೆ ಬಂದಿಳಿದವು ಎಂದು ಘಟನೆ ಬಗ್ಗೆ ಹಂಚಿಕೊಂಡರು.

ಸುರೇಂದ್ರಬಾಬು ಹಾಗೂ ಅವರ ಐವರು ಸ್ನೇಹಿತರು ಬೆಂಗಳೂರಿನಲ್ಲಿ ರಿಯಲ್‍ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ಇವರು ಮೂಲತ ಆಂಧ್ರದ ಅನಂತಪುರ ಜಿಲ್ಲೆಯವರಾಗಿದ್ದು, ಸದ್ಯ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಕಳೆದ ಐದು ದಿನಗಳ ಹಿಂದೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಇದನ್ನೂ ಓದಿ: ಸರಣಿ ಬಾಂಬ್ ಬ್ಲಾಸ್ಟ್- ಮಗು ಸಮೇತ ದಂಪತಿ ಬೆಂಗ್ಳೂರಿಗೆ ವಾಪಸ್

https://www.youtube.com/watch?v=dtZ6oo788Zg