Wednesday, 15th August 2018

Recent News

ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ- ಹೊಗೆ ಆವರಿಸಿದ್ರಿಂದ ಬಸ್, ಓಮ್ನಿ ಡಿಕ್ಕಿ

ಯಾದಗಿರಿ: ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸುತ್ತಲೂ ಹೊಗೆ ಆವರಿಸಿದರಿಂದ ಬಸ್ ಮತ್ತು ಓಮನಿ ನಡುವೆ ಡಿಕ್ಕಿ ಸಂಭವಿಸಿದೆ.

ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಡಗೇರಾ ಕ್ರಾಸ್ ಬಳಿ ಘಟನೆ ನಡೆದಿದೆ. ಓಮ್ನಿ ವಾಹನವು ಯಾದಗಿರಿಯಿಂದ ಹಾಲಿಗೇರಿಗೆ ಗ್ರಾಮಕ್ಕೆ ತೆರಳುತ್ತಿತ್ತು. ಈ ವೇಳೆ ವಡಗೇರಾ ಕ್ರಾಸ್ ಬಳಿ ಬರುತ್ತಿದ್ದಂತೆಯೇ ಸುತ್ತಲೂ ಹೊಗೆ ತುಂಬಿಕೊಂಡಿದ್ದು, ರಸ್ತೆ ಕಾಣುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಓಮ್ನಿ ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಓಮ್ನಿಯಲ್ಲಿದ್ದ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕದ ಜಮೀನಿಲ್ಲಿ ಬೆಂಕಿ ಬಿದ್ದು ಹೊಗೆಯಾಗಿದ್ದರಿಂದಲೇ ಈ ಅವಘಢ ಸಂಭವಿಸಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ವಡಗೇರಾ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *