ಟ್ರೈನಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – IAS ಅಧಿಕಾರಿ ವಶ

ರಾಂಚಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಐಎಎಸ್ ಅಧಿಕಾರಿಯನ್ನು ಜಾರ್ಖಂಡ್‍ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾರ್ಖಂಡ್‍ನ ಖುಂತಿ ಜಿಲ್ಲೆಯಲ್ಲಿ ಟ್ರೈನಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಐಎಎಸ್ ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಇದನ್ನೂ ಓದಿ: ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು: ಬಿ.ಸಿ.ನಾಗೇಶ್ ಟಾಂಗ್

ಏನಿದು ಘಟನೆ?
ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಈ ಕುರಿತು ಮಾತನಾಡಿದ್ದು, ಖುಂಟಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ 2019ರ ಬ್ಯಾಚ್‍ನ ಅಧಿಕಾರಿಯನ್ನು ಸೋಮವಾರ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 354ಎ(ಲೈಂಗಿಕ ಕಿರುಕುಳ) ಮತ್ತು 509(ಮಹಿಳೆ ಗೌರವಕ್ಕೆ ಧಕ್ಕೆ ತರುವ ಮಾತು, ಹಾವಭಾವ ಅಥವಾ ಕೃತ್ಯ)ಅಡಿಯಲ್ಲಿ ಪ್ರಕರಣ ದಾಖಲಿಸಲು ಮಾಡಲಾಗಿದೆ. ಅಲ್ಲದೇ ಹೊರರಾಜ್ಯದ ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ತರಬೇತಿಗಾಗಿ ಖುಂಟಿಯಲ್ಲಿದ್ದರು ಎಂದು ವಿವರಿಸಿದ್ದಾರೆ.

ಕಾರಣವೇನು?
ಶನಿವಾರ ಡೆಪ್ಯುಟಿ ಡೆವಲಪ್‍ಮೆಂಟ್ ಕಮಿಷನರ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಐಎಎಸ್ ಅಧಿಕಾರಿ ಸಹ ಭಾಗವಹಿಸಿದ್ದರು. ಪಾರ್ಟಿಯಲ್ಲಿ ವಿದ್ಯಾರ್ಥಿನಿ ಒಂಟಿಯಾಗಿ ಇರುವುದನ್ನು ಕಂಡ ಅಧಿಕಾರಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರಿಗೆ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

ವಿಷಯ ತಿಳಿದ ತಕ್ಷಣ ಪೊಲೀಸರು ಪಾರ್ಟಿಯಲ್ಲಿದ್ದ ಕೆಲವು ಅತಿಥಿಗಳನ್ನು ವಿಚಾರಣೆಗೆ ಒಳಪಡಿಸಿದ ನಂತರ ಮೇಲ್ನೋಟಕ್ಕೆ ಆರೋಪ ನಿಜವೆಂದು ಕಂಡುಬಂದಿದೆ ಎಂದು ಎಸ್‍ಪಿ ಹೇಳಿಸಿದ್ದಾರೆ.

Live Tv